ಬಾಳಪ್ಪ ನಿಲ್ಲಿಸಿದ ಆಟ ಆಡುವವರಾರು?
Team Udayavani, Aug 20, 2017, 10:29 AM IST
ಬೆಳಗಾವಿ: ಹಿರಿಯ ರಂಗಜೀವಿ ನಾಡೋಜ ಡಾ| ಏಣಗಿ ಬಾಳಪ್ಪ ನಾಟಕ ನಿಲ್ಲಿಸಿ ನೇಪಥ್ಯಕ್ಕೆ ಸರಿದು ಪಂಚಭೂತಗಳಲ್ಲಿ ಲೀನರಾದರು. ನೂರಕ್ಕೂ ಹೆಚ್ಚು ಕಾಲ ಬಾಳಿ ಬದುಕಿದ ಬಾಳಪ್ಪ ಅವರ ನೆನಪುಗಳು ಮಾತ್ರ ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ರಂಗಭೂಮಿ ಪರಂಪರೆ ಉಳಿಸುವ ನಿಟ್ಟಿನಲ್ಲಿ ರಂಗ ಸಂಗೀತಕ್ಕೆ ಆದ್ಯತೆ ಸಿಗಬೇಕೆಂಬ ಕನಸು ಬಾಳಪ್ಪನವರದ್ದಾಗಿತ್ತು. ರಂಗ ಗೀತೆಗಳನ್ನು ಉಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು.
ಶಾಸ್ತ್ರೀಯ ಸಂಗೀತಕ್ಕೂ ರಂಗ ಸಂಗೀತಕ್ಕೂ ವ್ಯತ್ಯಾಸ ಇದೆ. ಆದರೆ ರಂಗ ಗೀತೆಗಳ ಧ್ವನಿ ಮುದ್ರಣ ಮಾಡಿ ಮುಂದಿನ ಪೀಳಿಗೆಗೆ ಉಳಿಸಲು ಸರಕಾರ ಮುಂದಾಗಬೇಕು ಎಂಬ ಕನಸು ಕಂಡಿದ್ದರು. ಹೀಗಾಗಿಯೇ ಬಾಳಪ್ಪ ಆಗಾಗ ಆಕಾಶವಾಣಿ ಕಾರ್ಯಕ್ರಮ ನಡೆಸಿ ರಂಗಗೀತೆ ಹಾಡುತ್ತಿದ್ದರು. ಮುಂದಿನ ಪೀಳಿಗೆಗೆ ರಂಗಗೀತೆಗಳನ್ನು ಕಲಿಸುವ ಇರಾದೆ ಬಾಳಪ್ಪನವರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ರಂಗ ಗೀತೆಗಳನ್ನು ಕಲಿಸಿದ್ದರು. ಇದು ಮುಂದುವರಿದು ಸರಕಾರ ರಂಗ ಸಂಗೀತ ಶಾಲೆ ಆರಂಭಿಸಬೇಕೆಂಬ ಕನಸು ಹೊಂದಿದ್ದರು. ಈ ನಿಟ್ಟಿನಲ್ಲಿ ಜಿಲ್ಲೆಯ ರಂಗಕರ್ಮಿಗಳು ಹಾಗೂ ಸರಕಾರ ಸಂಗೀತ ಶಾಲೆ ಸ್ಥಾಪಿಸುವ ಬಗ್ಗೆ ಮನಸ್ಸು ಮಾಡಬೇಕಿದೆ. ರಂಗ ಭಂಡಾರ ಮ್ಯೂಸಿಯಂ ಆಗಲಿ: ವೃತ್ತಿ ರಂಗಭೂಮಿ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಇದು ಒಂದೆಡೆ ಸಂಗ್ರಹವಾಗಬೇಕಿದೆ. ಬಾಳಪ್ಪ ಒಂಭತ್ತು ದಶಕಗಳ ಕಾಲ ಮಾಡಿದ ಸಾಧನೆ, ಅಭಿನಯಿಸಿದ ನಾಟಕ, ಕಂಪನಿ ಬೆಳೆಸಿದ ಪರಿ ಒಂದು ಸಂಗ್ರಹಾಲಯವಾಗಿ ಬೆಳೆಯಬೇಕಾಗಿದೆ. ಅದು ಕೂಡ ಬೆಳಗಾವಿ ಜಿಲ್ಲಾ ಕೇಂದ್ರದಲ್ಲಾದರೆ ಒಳಿತು. ಬಾಳಪ್ಪನವರ ಪ್ರಶಸ್ತಿಗಳು, ಫೋಟೋಗಳು, ನಾಟಕದ ಪರಿಕರಗಳು, ನಾಟಕದ ವಸ್ತುಗಳು, ಅವರ ಕುರಿತು ಬರೆದ ಇತರೆ ಪುಸ್ತಕಗಳು ಹೀಗೆ ವಿವಿಧ ವಸ್ತುಗಳ ರಂಗ ಭಂಡಾರ ಸಂಗ್ರಹಾಲಯ ನಿರ್ಮಾಣವಾದರೆ ಮುಂದಿನ ಜನಾಂಗಕ್ಕೆ ಕಂಪನಿ ನಾಟಕದ ಬಗ್ಗೆ ಅರಿವು ಮೂಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರಂಗಕರ್ಮಿ ಡಾ| ರಾಮಕೃಷ್ಣ ಮರಾಠೆ. ಬಾಳಪ್ಪನ ಸಂಪತ್ತು ಉಳಿಸುವುದೆಂದರೆ ರಂಗಭೂಮಿಯ ಸಂಪತ್ತು ಉಳಿಸಿದಂತೆ. ಜಿಲ್ಲೆಯ ಅನೇಕ ಬಹುದೊಡ್ಡ ನಾಟಕ ಕಂಪನಿಗಳು ಇದ್ದರೂ ಆ ಹೆಸರಿನಲ್ಲಿ ಉಳಿದುಕೊಂಡಿಲ್ಲ. ಈಗಲಾದರೂ ಸಿಕ್ಕಷ್ಟು ಮಾಹಿತಿಯನ್ನು ಬಾಳಪ್ಪನ ಹೆಸರಿನ ನೆಪದಲ್ಲಾದರೂ ರಂಗಭೂಮಿಯ ಭಂಡಾರ ಸಂಗ್ರಹಿಸಿದಂತಾಗುತ್ತದೆ. ಕಂಪನಿ ನಾಟಕಗಳ ದಾಖಲೆಗಳು, ವಸ್ತುಗಳು, ಪರಿಕರಗಳು, ವೃತ್ತಿ ನಾಟಕ ಸಾಹಿತ್ಯ ಉಳಿಸುವ ಕೆಲಸ ಮಾಡಬೇಕಿದೆ. ಕಂಪನಿ ನಾಟಕ ಸಾಹಿತ್ಯ ಬಹುದೊಡ್ಡ ಸಾಹಿತ್ಯ. ಅವುಗಳು ಕೇವಲ ಬಸ್ ನಿಲ್ದಾಣದಲ್ಲಿ ತೂಗು ಹಾಕುವ ಪ್ರಕಟಣೆಗಳು ಮಾತ್ರ ಆಗಿವೆ. ಕಂಪನಿ ನಾಟಕಗಳ ಸಾಹಿತ್ಯದ ಸಂಗ್ರಹದ ಗ್ರಂಥಾಲಯವಾದರೆ ಬಹುದೊಡ್ಡ ಸಾಹಿತ್ಯ ಪರಂಪರೆ ಉಳಿಸಿದಂತಾಗುತ್ತದೆ. ಕಂಪನಿ ನಾಟಕಗಳ ರಚಿತ ಸಾಹಿತ್ಯಕ್ಕಾಗಿಯೇ ಗ್ರಂಥಾಲಯ ನಿರ್ಮಾಣವಾಗಲಿ. ಅದಕ್ಕೆ ಪೂರಕವಾಗಿ ಬೇಕಾಗುವ ಪುಸ್ತಕಗಳನ್ನು ರಂಗಕರ್ಮಿಗಳು, ನಾಟಕಕಾರರಿಂದ ಸಂಗ್ರಹಿಸುವ ಕೆಲಸ ಆಗಲಿ. ಈ ಯೋಜನೆ ಬಗ್ಗೆ ಅನೇಕ ಸಲ ಕರ್ನಾಟಕ ನಾಟಕ ಅಕಾಡೆಮಿ ಗಮನಕ್ಕೂ ತರಲಾಗಿತ್ತು ಎನ್ನುತ್ತಾರೆ ಮರಾಠೆ.
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.