ತವರಿನ ಕುವರನ ಕೈ ಹಿಡಿಯುವರೇ ಜನ?
|ನೆಲದ ಲಾಭ-ಕಾಂಗ್ರೆಸ್ ಹಿಡಿತವೇ ಮುನ್ನಡೆಗೆ ವಿಶ್ವಾಸ |ಪ್ರಧಾನಿ ಮೋದಿ ಮುಖ ನೋಡಿ ಅಂಗಡಿಗೆ ಮಣೆ
Team Udayavani, May 6, 2019, 3:20 PM IST
ಬೆಳಗಾವಿ: ಕಾಂಗ್ರೆಸ್ ಅಭ್ಯರ್ಥಿ ತವರು ಕ್ಷೇತ್ರ ಬೈಲಹೊಂಗಲದಲ್ಲಿ ತವರಿನ ಕುವರ ಡಾ| ವಿ.ಎಸ್. ಸಾಧುನವರಗೆ ಹೆಚ್ಚು ಮತವೋ. ಪ್ರಧಾನಿ ಮೋದಿ ಅಲೆಯಲ್ಲಿ ನಾಲ್ಕನೇ ಬಾರಿಗೆ ಸಂಸದರಾಗುವ ಕನಸು ಕಾಣುತ್ತಿರುವ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿಗೆ ಮುನ್ನಡೆಯೋ..?
ಇದು ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಲೆಕ್ಕಾಚಾರ ಹಾಗೂ ಸೋಲು-ಗೆಲುವಿನ ಚರ್ಚೆ. ಲೋಕಸಭೆ ಚುನಾವಣೆ ಮುಗಿದು ವಾರ ಕಳೆದರೂ ಇಲ್ಲಿ ಫಲಿತಾಂಶದ ಚರ್ಚೆಯೇ ವ್ಯಾಪಕವಾಗಿದೆ. ಬದಲಾಗಿ ಸ್ವಾರಸ್ಯಕರ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಬೆಟ್ಟಿಂಗ್ ಕೆಲಸಕ್ಕೆ ಕೈಹಾಕದೇ ಇದ್ದರೂ ನಮ್ಮ ಅಭ್ಯರ್ಥಿಯೇ ಮುನ್ನಡೆ ಪಡೆಯುವದು ನಿಶ್ಚಿತ ಎಂದು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವುದು ಕ್ಷೇತ್ರದಲ್ಲಿ ಕಾಣುತ್ತಿದೆ.
ಮತದಾನ ಕಾರ್ಯ ಮುಗಿದರೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಅವರು ಕ್ಷೇತ್ರಕ್ಕೆ ಸಾಕಷ್ಟು ಸಲ ಭೇಟಿ ನೀಡಲಿಲ್ಲ. ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ನೋವಿನ ಮಾತುಗಳು ಕೇಳಿಬಂದರೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಮತ್ತೆ ಸುರೇಶ ಅಂಗಡಿ ಅವರನ್ನು ಹಿಡಿಯುತ್ತದೆ ಎಂಬ ಮಾತುಗಳು ಸಹ ವ್ಯಕ್ತವಾದವು.
ಮೋದಿ ಅಲೆಯ ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಶಾಸಕ ಜಗದೀಶ ಮೆಟಗುಡ್ ಮರಳಿ ಪಕ್ಷಕ್ಕೆ ಬಂದಿದ್ದು ಬಿಜೆಪಿಗೆ ಹೆಚ್ಚಿನ ಬಲ ತಂದಿದೆ. ಜಗದೀಶ ಮೆಟಗುಡ್ ಅವರ ಸೇರ್ಪಡೆ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಯಾವ ರೀತಿ ಸಹಾಯ ಮಾಡಲಿದೆ ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿ ನಡೆದಿದೆ..
• ಕೇಶವ ಆದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.