ಶೂನ್ಯ ಬಡ್ಡಿ ಯೋಜನೆ ಸಾಲ ಮರು ಪಾವತಿಗೆ ಕೊನೆ ದಿನ ಎಂದು?
ನಬಾರ್ಡ್ ಹೇಳುತ್ತಿದೆ ಮೇ 31 ಎಂದು-ರಾಜ್ಯ ಸರ್ಕಾರ ಘೋಷಿಸಿದೆ ಜೂ. 30
Team Udayavani, May 22, 2020, 11:58 AM IST
ಸಾಂದರ್ಭಿಕ ಚಿತ್ರ
ಅಥಣಿ: ಶೂನ್ಯ ಬಡ್ಡಿ ಬೆಳೆಸಾಲ ಯೋಜನೆಯ ಸಾಲ ಮರುಪಾವತಿ ಕೊನೆ ದಿನಾಂಕದಲ್ಲಿನ ಅಸ್ಪಷ್ಟತೆ ರೈತರನ್ನು ಗೊಂದಲದಲ್ಲಿ ಕೆಡವಿದೆ. ರಾಜ್ಯ ಸರ್ಕಾರ ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದರೆ ನಬಾರ್ಡ್ ಮೇ 31ರೊಳಗೆ ಪೂರ್ತಿ ಅಸಲು ತುಂಬಿದರೆ ಮಾತ್ರ ಯೋಜನೆ ಲಾಭ ಎಂದು ಹೇಳುತ್ತಿದೆ.
ಶೂನ್ಯ ಬಡ್ಡಿ ಸಾಲ ಯೋಜನೆಯಡಿ ರೈತ ಪಡೆದ ಗರಿಷ್ಟ 3 ಲಕ್ಷರೂ. ವರೆಗಿನ ಸಾಲಕ್ಕೆ ನಬಾರ್ಡ್ ಮೂಲಕ ರಾಜ್ಯ ಸರಕಾರ ಶೇ 6.4 ಹಾಗೂ ಕೇಂದ್ರ ಸರಕಾರ ಶೇ 5 ಬಡ್ಡಿ ಕಟ್ಟುತ್ತವೆ. ರೈತನಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರಕುತ್ತದೆ. ಅವಧಿ ಮೀರಿ ಬೆಳೆಸಾಲ ಮರು ಪಾವತಿಸುವ ರೈತ ಸಾಲ ಪಡೆದ ದಿನಾಂಕದಿಂದಲೂ ಪೂರ್ಣ ಪ್ರಮಾಣದ ಬಡ್ಡಿ ಕಟ್ಟಬೇಕಾಗುತ್ತದೆ.
ಕೋವಿಡ್ ಲಾಕ್‌ಡೌನ್ ಸಂಕಷ್ಟದಿಂದಾಗಿ ರೈತರು ಹಣ ಮರುಪಾವತಿಸುವ ಅವಧಿಯನ್ನು ರಾಜ್ಯ ಸರ್ಕಾರ ಜೂನ್ 30ಕ್ಕೆ ಮುಂದೂಡಿದೆ. ಸಿಎಂ ಯಡಿಯೂರಪ್ಪ ಕೋವಿಡ್-19 ವಿಶೇಷ ಪ್ಯಾಕೇಜ್ ಘೋಷಿಸುವಾಗಿ ಈ ಘೋಷಣೆಯನ್ನೂ ಮಾಡಿದ್ದಾರೆ. ನಬಾರ್ಡ್ ಆದೇಶದಲ್ಲಿ ಯಾವುದೇ ಗೊಂದಲ ಇಲ್ಲ. ಇದರಿಂದ ರೈತರಿಗೆ ಸಹ ಯಾವ ಸಮಸ್ಯೆಯೂ ಆಗುವುದಿಲ್ಲ. ಕಳೆದ ಫೆಬ್ರವರಿಯಲ್ಲೇ ಎಲ್ಲ ಬೆಳೆ ಬಂದಿದೆ. ಮೇಲಾಗಿ ಸೊಸೈಟಿಗಳಲ್ಲಿ ಈಗಾಗಲೇ ರೈತರಿಂದ ಪ್ರತಿಶತ 99 ರಷ್ಟು ಸಾಲ ಮರುಪಾವತಿಯಾಗಿದೆ. ಲಾಕ್‌ಡೌನ್ ಆದೇಶ ಜಾರಿಯಾಗಿದ್ದರಿಂದ ರೈತರಿಗೆ ಮಾರ್ಚ ತಿಂಗಳಿಂದ ಮೂರು ತಿಂಗಳು ಕಾಲಾವಕಾಶ ನೀಡಲಾಗಿತ್ತು ಎಂಬುದು ನಬಾರ್ಡ್ ಅಧಿಕಾರಿಗಳ ಹೇಳಿಕೆ.
ಈಗ ರಾಜ್ಯ ಸರ್ಕಾರ ಕೂಡಲೇ ನಬಾರ್ಡ್ ಜತೆಗೆ ಚರ್ಚಿಸಿ ಸಾಲ ಮರುಪಾವತಿ ಕೊನೆ ದಿನಾಂಕದಲ್ಲಿನ ಗೊಂದಲ ನಿವಾರಿಸಬೇಕೆಂಬುದು ರೈತರ ಆಗ್ರಹವಾಗಿದೆ. ಈ ಗೊಂದಲ ಬೇಗ ಬಗೆಹರಿಯದಿದ್ದರೆ ರೈತರು ಸಮಸ್ಯೆಯಲ್ಲಿ ಸಿಲುಕುವುದಂತೂ ಗ್ಯಾರಂಟಿ.
ಮೊದಲೇ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಹಣವನ್ನು ತುಂಬಲು ಸಬಲರಿಲ್ಲ. ಈ ಸಮಸ್ಯೆ ಬಗೆಹರಿಸಲು ಸರಕಾರವೇ ರೈತರ ಹಣ ತುಂಬುವಂತಾಗಬೇಕು. -ಮಹಾದೇವ ಮಡಿವಾಳ, ಅಧ್ಯಕ್ಷರು ತಾಲೂಕಾ ರೈತ ಸಂಘ, ಅಥಣಿ
ನಬಾರ್ಡ ಅಧಿಕಾರಿಗಳೊಂದಿಗೆ ಈ ವಿಷಯದ ಕುರಿತು ಚರ್ಚಿಸುವುದಲ್ಲದೇ ಸರಕಾರದ ಗಮನಕ್ಕೆ ಈ ವಿಷಯವನ್ನು ತಂದು ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ-ದುಂಡಪ್ಪಾ ಕೋಮಾರ, ತಹಶೀಲ್ದಾರ, ಅಥಣಿ
-ಸಂತೋಷ ರಾ. ಬಡಕಂಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.