Assembly session ಉಭಯ ಸದನದಲ್ಲಿ ಶ್ರದ್ಧಾಂಜಲಿ
Team Udayavani, Dec 5, 2023, 12:07 AM IST
ಬೆಳಗಾವಿ: ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ, ರಜೌರಿಯಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸಹಿತ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸಲ್ಲಿಸಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಅವರು, ಡಿ.ಬಿ.ಚಂದ್ರೇಗೌಡ, ಮಾಜಿ ಶಾಸಕ ಶ್ರೀರಂಗದೇವರಾಯಲು, ಸಿ.ವೆಂಕಟೇಶಪ್ಪ, ಶ್ರೀಕಾಂತಶೆಟ್ಟಪ್ಪ ಭೀಮಣ್ಣವರ, ವಿಲಾಸಬಾಬು ಆಲಮೇಲಕರ್, ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ, ಸಹಕಾರ ಕ್ಷೇತ್ರದ ಭೀಷ್ಮ ಬಿ.ಎಸ್.ವಿಶ್ವನಾಥ್, ಪ್ರೊ.ಎಂ.ಆರ್. ಸತ್ಯನಾರಾಯಣ ರಾವ್, ವಿಜ್ಞಾನಿ ಡಾ| ವಿ.ಎಸ್.ಅರುಣಾಚಲಂ, ಡಾ| ಕಲ್ಯಂಪುಡಿ ರಾಧಾಕೃಷ್ಣ ರಾವ್, ಡಾ| ಎಂ.ಎಸ್.ಸ್ವಾಮಿನಾಥನ್, ಮಮತಾ ಗುಡೂರ, ಡಾ| ಕಮಲಾ ಹೆಮ್ಮಿಗೆ, ಪತ್ರಕರ್ತ ಜಿ.ಎನ್.ರಂಗನಾಥ ರಾವ್, ಹನುಮಣ್ಣನಾಯಕ ದೊರೆ ಹಾಗೂ ರಜೌರಿಯಲ್ಲಿ ಹುತಾತ್ಮರಾದ ಕ್ಯಾ| ಎಂ.ವಿ.ಪ್ರಾಂಜಲ್, ಕ್ಯಾ| ಶುಭಂ ಗುಪ್ತಾ, ಹವಲ್ದಾರ್ ಅಬ್ದುಲ್ ಮಜೀದ್, ಲಾನ್ಸ್ ನಾಯಕ್ ಸಂಜಯ್ ಬಿಸ್ಟ್, ಪ್ಯಾರಾಟ್ರೂಪರ್ ಸಚಿನ್ ಲಾರ್ ಅವರಿಗೆ ಸಂತಾಪ ಸಲ್ಲಿಸಿದರು.
ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ, ಗೃಹ ಸಚಿವ ಡಾ| ಜಿ.ಪರಮೇಶ್ವರ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಸಿ.ಎನ್.ಬಾಲಕೃಷ್ಣ, ತಮ್ಮಯ್ಯ, ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಮಾನಾಥ್ ಕೋಟ್ಯಾನ್, ಜನಾರ್ದನ ರೆಡ್ಡಿ, ಸಚಿವರಾದ ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ್ ಸಹಿತ ಹಲವರು ಸಂತಾಪ ಸೂಚಿಸಿದರು. ಎಂ.ವಿ.ಪ್ರಾಂಜಲ್ ಹೆಸರನ್ನು ಶಾಶ್ವತವಾಗಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರಿನ ಯಾವುದಾದರೊಂದು ವೃತ್ತಕ್ಕೆ ಅವರ ಹೆಸರು ಇಡುವಂತೆ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.