ವಿವಿಧ ಬೇಡಿಕೆ ಈಡೇರಿಕೆಗೆ ಕಾರ್ಮಿಕರ ಆಗ್ರಹ
Team Udayavani, May 2, 2020, 5:43 PM IST
ಸಾಂದರ್ಭಿಕ ಚಿತ್ರ
ಬೈಲಹೊಂಗಲ: ಮೇ ದಿನಾಚರಣೆಯು ಹಲವಾರು ಮಹನೀಯರ ತ್ಯಾಗ, ಬಲಿದಾನಗಳ ಪ್ರತೀಕವಾಗಿದ್ದು, ಅದರ ಪ್ರತಿಫಲವಾಗಿ ಈವತ್ತು ಕಾರ್ಮಿಕರೆಲ್ಲರೂ 8 ಗಂಟೆ ಅವಧಿಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆಂದು ಕಾರ್ಮಿಕ ಮುಖಂಡ ರುದ್ರಗೌಡ ಪಾಟೀಲ ಹೇಳಿದರು.
ಶುಕ್ರವಾರ ತಾಲೂಕಿನ ಅಮಟೂರ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಗ್ರಾಮ ಪಂಚಾಯ್ತಿ ನೌಕರರು, ಅಂಗನವಾಡಿ, ಆಶಾ, ಅಕ್ಷರ ದಾಸೋಹ ಕಾರ್ಯಕರ್ತೆಯರು ಕೂಡಿಕೊಂಡು ಮೇ-1 ಕಾರ್ಮಿಕ ದಿನಾಚರಣೆ ಅಂಗವಾಗಿ ಸಾಂಕೇತಿಕವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿ ಮಾತನಾಡಿ, ಎಲ್ಲ ಕಾರ್ಮಿಕರು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋರಾಡಿ ಬೇಡಿಕೆಗಳನ್ನ ಈಡೇರಿಸಿ ಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.
ರಾಜ್ಯ ಸಮಿತಿಯ ಕರೆಯ ಮೇರೆಗೆ ಸಾಂಕೇತಿಕವಾಗಿ ಅತ್ಯಂತ ಸರಳವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಮೇ ದಿನ ಆಚರಿಸಲಾಯಿತು. ಪಿಡಿಓಗಳಾದ ಎಸ್.ಎಮ್. ಹಾರೂಗೊಪ್ಪ, ಎಲ್.ಎಮ.ವಗ್ಗರ, ಪಿ.ಎಮ್.ಕಮ್ಮಾರ, ಸಿಬ್ಬಂದಿ ಮಹಾಂತೇಶ, ವರ್ಧಮಾನ, ಬಸವರಾಜ, ಬಸವ್ವ ದೊಡಮನಿ, ಶಕುಂತಲಾ ಹರ್ತಿ, ದೀಪಾ ಮುತವಾಡ, ಪಾರವ್ವ ನಾಗನೂರ, ಅನಸೂಯಾ ನಾವಲಗಿ, ಮಹಾದೇವಿ ಈಟಿ, ಸುಲೋಚನಾ ಬೇವಿನಕೊಪ್ಪಮಠ, ಲಕ್ಷ್ಮೀ ತಳವಾರ, ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ
Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ
B. Y. Vijayendra: ನನ್ನನ್ನು ಟಾರ್ಗೆಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.