ಕುರಿಗಳ ಪೂಜಿಸಿ ಬೆಳಕಿನ ಹಬ್ಬ ಆಚರಣೆ
Team Udayavani, Oct 30, 2019, 12:48 PM IST
ಚಿಕ್ಕೋಡಿ: ತಾಲೂಕಿನ ಉಮರಾಣಿ ಗ್ರಾಮದಲ್ಲಿ ಕುರುಬ ಸಮುದಾಯದವರು ತಮ್ಮ ಕುರಿಗಳನ್ನು ದೀಪಾವಳಿ ಹಬ್ಬದ ನಿಮಿತ್ತ ಪೂಜೆ ಮಾಡಿ ಆರತಿ ಬೆಳಗಿ ನಾಡಿನಲ್ಲಿರುವ ರೈತರು, ಒಕ್ಕಲಿಗರು ಹಾಗೂ ಕುರಿಗಾರರನ್ನು ಆ ದೇವರು ಕಾಪಾಡಲೆಂದು ಪ್ರಾರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಮುಖಂಡ ಮಾಯಪ್ಪಾ ಮಗದುಮ್ಮ ಮಾತನಾಡಿ,ಕುರಿಗಾರರ ಕಾಯಕ ಆದಿ ಅನಾದಿ ಕಾಲದಿಂದ ಬಂದಿದ್ದು, ಕುರಿಗಳನ್ನು ಅನೇಕ ದೇವತಾ ಪುರುಷರು ಕೂಡಾ ಸಾಕಿ ಸಲುಹಿದ್ದಾರೆ. ಶಿವ- ಪಾರ್ವತಿ ಕುರಿ ಸಾಕಾಣಿಕೆ ಮಾಡಿದ್ದು, ಪುರಾಣದಲ್ಲಿ ಉಲ್ಲೇಖವಿದ್ದು, ದೇವರ ಕೆಲಸವನ್ನು ಇವತ್ತು ಕುರುಬ ಸಮುದಾಯದವರು ಮುಂದುವರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಎಂದರು.
ನಂತರ ಮಾತನಾಡಿದ ಗ್ರಾಪಂ ಸದಸ್ಯ ಲಕ್ಷ್ಮಣ ಪೂಜೇರಿ ದೀಪಾವಳಿ ಹಬ್ಬದ ನಿಮಿತ್ತ ನಾಡಿನ ರೈತ ಸಮುದಾಯ ಹಾಗೂ ಕುರುಬ ಸಮುದಾಯಕ್ಕೆ ದೇವರ ಕೃಪೆ ಇರಲೆಂದು ಲಕ್ಷ್ಮೀ ಸ್ವರೂಪದ ಕುರಿಗಳನ್ನು ಪೂಜೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷಧನಪಾಲ ಬೀಮನಾಯ್ಕ, ಯುವ ಮುಖಂಡ ರಾಜೇಶ ಜಿಡ್ಡಿಮನಿ, ಮುರಿಗೆಪ್ಪಾ ಅಡಿಸೇರಿ, ಅರುಣ ಕಾಳಿಶಿಂಗೆ, ನಾಗಪ್ಪಾ ಪೂಜೇರಿ, ಗಜಾನನಪಾಟೀಲ, ಗುರುಪಾದ ಜಿಡ್ಡಿಮನಿ, ಸಂಜು ಜಿಡ್ಡಿಮನಿ, ಆನಂದ ಸಂಭಾಜಿ, ಶಶಿಕಾಂತ ಸಂಭಾಜಿ, ಮಾದೇವ ಜಿಡ್ಡಿಮನಿ, ಸಿದ್ರಾಮ ಮಗದುಮ್ಮ. ಸತ್ಯಪ್ಪಾ ಮಗದುಮ್‌ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.