ಯರಡಾಲ ಗ್ರಾಮ; ಇಲ್ಲಿ ಮೂಲ ಸೌಕರ್ಯಗಳದ್ದೇ ಕೊರತೆ
Team Udayavani, Mar 19, 2024, 5:34 PM IST
ಉದಯವಾಣಿ ಸಮಾಚಾರ
ಬೈಲಹೊಂಗಲ: ಬೈಲವಾಡ ಗ್ರಾಪಂ ವ್ಯಾಪಿಯಲ್ಲಿ ಬರುವ ಯರಡಾಲ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ.
ಸುಮಾರು 4500 ಜನಸಂಖ್ಯೆ ಹೊಂದಿದ ಈ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಇದೆ.
ನೀರಿಗಾಗಿ ಮೈಲುಗಟ್ಟಲೇ ಕೊಡ ಹಿಡಿದು ಅಲೆಯುವ ಪರಿಸ್ಥಿತಿ ಇದೆ. ಈ ಊರಿನಲ್ಲಿರುವ ಗಟಾರುಗಳು ಗಬ್ಬೆದ್ದು ನಾರುತ್ತಿವೆ. ಕೊಳಚೆ ನೀರು ಗಬ್ಬೆದ್ದು ನಾರುತ್ತಿದೆ. ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಇಂಥ ಅನೇಕ ಸಮಸ್ಯೆಗಳ ಜತೆ ಜನರು ಬದುಕು ನಡೆಸಬೇಕಿರುವುದು ಅನಿವಾರ್ಯವಾಗಿದೆ.
2021-22 ನೇ ಸಾಲಿನಲ್ಲಿ ಗ್ರಾಮದಲ್ಲಿ ಅನುಷ್ಠಾನಗೊಳಿಸಿದ ಜಲಜೀವನ ಮಿಷನ್ ಕಾಮಗಾರಿ ಅಡಿಯಲ್ಲಿ ಗ್ರಾಮದ ಸುಮಾರು 492 ಮನೆಗಳಿಗೆ 1.34 ಕೋಟಿ ರೂ. ಅಂದಾಜು ವೆಚ್ಚದಲ್ಲಿ 7-10-2022ಕ್ಕೆ ಯೋಜನೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಿತ್ತು. ಆದರೆ ಗುತ್ತಿಗೆದಾರರ ಅಸಡ್ಡೆ,ಅಧಿಕಾರಿಗಳ ಸೂಕ್ತ ಮಾರ್ಗದರ್ಶನ ಕೊರತೆಯಿಂದ
ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಮನೆಗೆ ನೀರು ಯಾವಾಗ ಬರುವುದೋ ಎಂದು ಚಾತಕ ಪಕ್ಷಿಯಂತೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ಮುಂದಿನ ತಿಂಗಳು ಗ್ರಾಮದಲ್ಲಿ ಗ್ರಾಮದೇವಿ ಜಾತ್ರೆ ನಡೆಯಲಿದ್ದು, ಬಹುಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಆಡಳಿತ ಕೂಡಲೇ ಜೆಜೆಎಂ ಯೋಜನೆ ಪೂರ್ಣಗೊಳಿಸಿ ಜನರಿಗೆ ಸಮರ್ಪಕ ನೀರೊದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆ ಆರಂಭಿಸಲಾಗಿದ್ದು, ಕೆಲ ಸಮಸ್ಯೆಗಳು
ಎದುರಾದ ಕಾರಣ ವಿಳಂಬವಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
ಶಿವನಗೌಡಾ ಪಾಟೀಲ, ಸಹಾಯಕ ಅಭಿಯಂತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೈಲಹೊಂಗಲ
ಯರಡಾಲ ಗ್ರಾಮವು ಹಲವು ವರ್ಷಗಳಿಂದ ಕುಡಿಯುವ ನೀರಿನ ಬವಣೆ ಎದುರಿಸುತ್ತಿದ್ದು ಜಲ ಜೀವನ ಮಿಷನ್ ನನೆಗುದಿಗೆ ಬಿದ್ದ ಕಾರಣ ಜನರು ಸಂಕಷ್ಟ ಎದುರಿಸಬೇಕಿದೆ. ಬೇಗನೆ ಮನೆಗಳಿಗೆ ನೀರು ಹರಿಸಬೇಕಿರುವುದು ಅವಶ್ಯವಾಗಿದೆ.
*ಶ್ರೀಶೈಲ ಮಲ್ಲಪ್ಪ ರಾಜಗೋಳಿ,
ಸಾಮಾಜಿಕ ಕಾರ್ಯಕರ್ತ, ಯರಡಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.