ಧರ್ಮ ಅರಿತವ ಪರಿಪೂರ್ಣ ವ್ಯಕ್ತಿ
Team Udayavani, Mar 2, 2021, 1:07 PM IST
ಗೋಕಾಕ: ಎಲ್ಲ ಧರ್ಮಗಳು ಮನುಷ್ಯನನ್ನು ಸಮಾಜದ ಆಸ್ತಿಯನ್ನಾಗಿ ಮಾಡಲು ಶ್ರಮಿಸುತ್ತವೆ. ಧರ್ಮ ಎನ್ನುವುದು ಜಾತಿ ಸೂಚಕ ಪದವಲ್ಲ. ಧರ್ಮಗಳನ್ನು ಅರಿತು ನಾವು ನಡೆದರೆ ಪರಿಪೂರ್ಣ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಐಪಿಎಸ್ ರವಿ ಚನ್ನಣ್ಣನವರ ಹೇಳಿದರು.
ಸೋಮವಾರ ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಇಲ್ಲಿನ ಶ್ರೀ ಶೂನ್ಯಸಂಪಾದನ ಮಠದ 16 ನೇ ಶರಣ ಸಂಸ್ಕೃತಿ ಉತ್ಸವದ ಯುವ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ತಪ್ಪುಗಳಿಂದ ಮನುಷ್ಯ ಕಲಿಯಬೇಕು. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಸಾಧನೆ ಮಾಡುವ ಛಲ ಇರಬೇಕು.
ವಿದ್ಯಾರ್ಜನೆಯೇ ನನ್ನ ಕಸಬು ಎಂದ ಅವರು,ಯುವ ಜನತೆಗೆ ಜ್ಞಾನಾರ್ಜನೆ ಮುಖ್ಯ. ನಾನುಸ್ವಾಮಿ ವಿವೇಕಾನಂದ, ಚಂದ್ರಶೇಖರ ಆಝಾದ,ಭಗತ್‌ಸಿಂಗ್ ಅವರ ತತ್ವಾದರ್ಶಗಳನ್ನು ಬೆಳೆಸಿಕೊಂಡಿದ್ದೇನೆ. ನನ್ನಿಂದ ಏನೂ ಆಗುವುದಿಲ್ಲಎಂದು ತಾತ್ಸಾರ ಭಾವನೆ ಬರಬಾರದು. ನನ್ನಿಂದ ಎಲ್ಲವೂ ಸಾಧ್ಯವೆಂದು ಭಾವಿಸಬೇಕು. ಮನುಷ್ಯನ್ನು ಸೋಲಿಸುವ ವಸ್ತು ಜಗತ್ತಿನಲ್ಲಿಇಲ್ಲ. ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದರು.
ಯುವ ಸಮುದಾಯ ಮೊಬೈಲ್, ಫೇಸ್‌ಬುಕ್, ಟ್ವಿಟರ್‌ಗಳಿಂದ ದೂರವಿರಬೇಕು. ನಿನ್ನನ್ನು ನೀನು ಪ್ರೀತಿಸು, ನಾನೇ ವಿಶೇಷ ಎಂದು ಬದುಕಬೇಕು. ಎಲ್ಲರಿಗೂ ಸಮಯ ಪ್ರಜ್ಞೆ ಅತೀ ಅವಶ್ಯವಾಗಿದೆ. ಕಳೆದ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಮಾಡಿದ್ದರು. ಈಗಲೂ ಮನೆ ಮನೆಯಲ್ಲಿ ಅನುಭವ ಮಂಟಪ ಮಾಡಬೇಕು. ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ನಾನು ಪೊಲೀಸ ಇಲಾಖೆಯಲ್ಲಿ ಸೇವೆ ಮಾಡುತ್ತಿದ್ದೇನೆ. ಬಡತನ ಶಾಪವಲ್ಲ, ಶಿಕ್ಷಣ ಪಡೆಯಬೇಕು. ಜ್ಞಾನಾರ್ಜನೆ ಮಾಡಬೇಕು. ಯಾವುದೇ ಹುದ್ದೆಯಾಗಲಿ ಸೇರಿ ಆರ್ಥಿಕ ಸಬಲತೆ ಹೊಂದಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು. ಶರಣರ ತತ್ವಗಳನ್ನು ಪಾಲಿಸಬೇಕು. ಸಂಸ್ಕಾರ, ಸಂಸ್ಕೃತಿ ಕಲಿಯುವಂತಹ ಕಾರ್ಯ ಮನೆಮನೆಗೆ ಮುಟ್ಟುವ ಕಾರ್ಯ ಈ ವೇದಿಕೆಯಿಂದ ನಡೆಯಲಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶ್ರೀಮಠದಿಂದ ರವಿ ಚನ್ನಣ್ಣನವರ ಅವರನ್ನು ಸನ್ಮಾನಿಸಲಾಯಿತು. ಮರಡಿಮಠದ ಶ್ರೀ ಪವಾಡೇಶ್ವರ ಸ್ವಾಮಿಗಳು, ಶೂನ್ಯ ಸಂಪಾದನ ಮಠದ ಶ್ರೀಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಸಭಾ ಸದಸ್ಯ ಹಾಗೂ ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಕಡಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪ್ರಶಾಂತ ಕುರಬೇಟ, ಲಕ್ಕಪ್ಪ ಗೌಡರ, ಕೀರ್ತಿ ಸಸಾಲಟ್ಟಿ, ಪವಿತ್ರಾ ಹತ್ತರವಾಟ, ರಿಯಾಜ ನದಾಫ್, ಸ್ನೇಹಲ್ ಗರಗಟ್ಟಿ, ಮಾಲಾ ಐದುಡ್ಡಿ ಇದ್ದರು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರು ಮತ್ತು ದಾಸೋಹಮೂರ್ತಿಗಳಾದ ಚಂದ್ರಶೇಖರ ಕೊಣ್ಣೂರ, ಪ್ರಸನ್ ತಂಬಾಕೆ, ಮಗನನಾಲ್ ಪಟೇಲ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ವಿವೇಕ ಜತ್ತಿ ಮಾತನಾಡಿದರು. ಎಸ್.ಕೆ.ಮಠದ ಸ್ವಾಗತಿಸಿ, ನಿರೂಪಿಸಿದರು. ಆರ್.ಎಲ್.ಮಿರ್ಜಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.