2 ಲಕ್ಷ ಆಯುಷ್ಮಾನ್‌ ಕಾರ್ಡ್‌ ವಿತರಣೆ

9850 ಫಲಾನುಭವಿಗಳಿಗೆ ಚಿಕಿತ್ಸೆ; 19 ಕೋಟಿ ರೂ. ಖರ್ಚು: ಡಿಎಚ್‌ಒ ಶಿವರಾಜ್‌ ಹೆಡೆ

Team Udayavani, Oct 5, 2019, 4:11 PM IST

5-0ctober-18

ಬಳ್ಳಾರಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯ ಸಂಬಂ ಧಿಸಿದಂತೆ ಸೆಪ್ಟೆಂಬರ್‌ 30ರವರೆಗೆ ಜಿಲ್ಲೆಯಲ್ಲಿ 2,39,669 ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಒಟ್ಟು 9850 ಫಲಾನುಭವಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದಕ್ಕಾಗಿ 19,23,77,225 ರೂಗಳ ವೆಚ್ಚ ಭರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ್‌ ಹೆಡೆ ಹೇಳಿದರು.

ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಾಕ್ಷಿಕ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆ 291 ಪ್ರಾಥಮಿಕ, 254 ನಿರ್ದಿಷ್ಟ ದ್ವಿತೀಯ, 900 ತೃತೀಯ, 169 ತುರ್ತು ಹಂತದ ಚಿಕಿತ್ಸೆಯನ್ನು ರಾಜ್ಯದ ಎಲ್ಲ ವರ್ಗದ ಜನತೆಗೆ ಭರವಸೆ ಮಾದರಿಯಲ್ಲಿ ಅssurಚncಛಿ ಞಟಛಛಿ ಒದಗಿಸುವ ಯೋಜನೆಯಾಗಿರುತ್ತದೆ. ಈ ಯೋಜನೆಯನ್ನು 2018ರ ಅ. 30ರಿಂದ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ ಎಂದರು. ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ನೋಂದಾಯಿತವಾದ ಫಲಾನುಭವಿಗಳು ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ 2011ರ ಸಾಮಾಜಿಕ-ಆರ್ಥಿಕ ಜನಗಣತಿ ಸಮೀಕ್ಷೆ ಪ್ರಕಾರ ಒಳಪಟ್ಟಿರುತ್ತಾರೆ ಎಂದು ಅವರು ವಿವರಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌. ಬಸರೆಡ್ಡಿ ಮಾತನಾಡಿ, ಈ ಯೋಜನೆಯಡಿ ಎಬಿ-ಎಆರ್‌ ಕೆ ಕಾರ್ಡ್‌ನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ 10 ರೂಗಳು ಶುಲ್ಕದೊಂದಿಗೆ ನೀಡಲಾಗುತ್ತದೆ. ಫಲಾನುಭವಿಗಳು ಮೊದಲನೇ ಬಾರಿಗೆ ಆಧಾರ್‌ ಮತ್ತು ಪಡಿತರ ಚೀಟಿಗಳನ್ನು ತರಬೇಕು. ಒಂದು ವೇಳೆ ಆಧಾರ್‌ ಕಾರ್ಡ್‌ ಇಲ್ಲದಿದ್ದಲ್ಲಿ ಯೋಜನೆಯಲ್ಲಿ ಪಿಡಿಎಸ್‌ ಅರ್ಹತಾ ಕಾರ್ಡ್‌ನ ಆಧಾರದ ಮೇಲೆ ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿ ಕಡ್ಡಾಯವಾಗಿರುತ್ತದೆ ಎಂದರು.

ಆಹಾರ ಸುರಕ್ಷತೆ ಕಾಯಿದೆ ಅಡಿಯಲ್ಲಿ ಅರ್ಹತೆ ಪಡೆಯದ ಎಪಿಎಲ್‌ ಫಲಾನುಭವಿಗಳನ್ನು ಈ ಯೋಜನೆಯಡಿ ಸಾಮಾನ್ಯರೋಗಿ ಎಂದು ಕರೆಯಲಾಗಿದೆ. ಸಾಮಾನ್ಯ ವರ್ಗಗಳ ರೋಗಿಗಳಿಗೆ ಚಿಕಿತ್ಸಾ ಪ್ಯಾಕೇಜ್‌ ದರಗಳ ವೆಚ್ಚದ ಶೇ. 30ಕ್ಕೆ ಮಿತಿಗೊಳಿಸಲಾಗಿದೆ. ವಾರ್ಷಿಕ ಮಿತಿ 1.5 ಲಕ್ಷ ರೂಗಳವರೆಗೆ ಇರುತ್ತದೆ ಎಂದು ಹೇಳಿದ ಅವರು ಯೋಜನೆಯಲ್ಲಿ ಕುಟುಂಬ ಸದಸ್ಯರ ನೋಂದಾವಣೆಗೆ ಮತ್ತು ಚಿಕಿತ್ಸೆ ಪಡೆಯಲು ಯಾವುದೇ ಸಂಖ್ಯೆಯ ಮಿತಿ ಇರುವುದಿಲ್ಲ. ಯೋಜನೆಯಡಿ ಫಲಾನುಭವಿಗಳು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಅರ್ಜುನ್‌ ಎಸ್‌. ಮಲ್ಲೂರ್‌ ಅವರು ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಜಾಥಾದಲ್ಲಿ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ರಾಜಶೇಖರ ರೆಡ್ಡಿ, ಎ.ಬಿ-ಎಆರ್‌ಕೆ ನೋಡಲ್‌ ಅಧಿಕಾರಿ ಡಾ| ಆರ್‌.ಅನಿಲ್‌ ಕುಮಾರ್‌, ಜಿಲ್ಲಾ ಆರ್‌ಸಿಎಚ್‌ ಅಧಿ ಕಾರಿ ಡಾ| ಇಂದ್ರಾಣಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಕೆ.ಜಿ. ವೀರೇಂದ್ರಕುಮಾರ್‌, ಜಿಲ್ಲಾ ಗುಣಮಟ್ಟ ಖಾತ್ರಿ ವ್ಯವಸ್ಥಾಪಕ ಡಾ| ಲಕ್ಷ್ಮೀ ಕಾಂತ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್‌.ದಾಸಪ್ಪನವರ, ಜಿಲ್ಲಾ ಸಂಯೋಜಕ ಈರಪ್ಪ ರುದ್ರಾಕ್ಷಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಶಾಂತಮ್ಮ ಉಪ್ಪಾರ, ಸುರಕ್ಷ ಟ್ರಸ್ಟ್‌ನ ಸುವರ್ಣ, ಆಶಾ ಮೇಲ್ವಿಚಾರಕಿ ನೇತ್ರಾವತಿ ಇದ್ದರು.

ಟಾಪ್ ನ್ಯೂಸ್

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1

Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ  ಇನ್ನೂ ಮೀನ ಮೇಷ ಎಣಿಕೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

11

Kasaragodu: ಹೊಳೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1(1

Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ  ಇನ್ನೂ ಮೀನ ಮೇಷ ಎಣಿಕೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.