ಗಣಿನಾಡಲ್ಲಿ ನಡೆಯುತ್ತಾ ಆಪರೇಷನ್ ಕಮಲ?
ಮುನ್ಸೂಚನೆ ನೀಡಿದ ಈಶ್ವರಪ್ಪ ಹೇಳಿಕೆ
Team Udayavani, Jun 17, 2019, 2:33 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ರಾಜ್ಯದಲ್ಲಿ ಮತ್ತೂಮ್ಮೆ ‘ಆಪರೇಷನ್ ಕಮಲ’ ನಡೆದರೆ ಗಣಿನಾಡು ಬಳ್ಳಾರಿಯೇ ವೇದಿಕೆಯಾಗುತ್ತಾ ?
-ಹೌದು. ಈ ಅನುಮಾನಕ್ಕೆ ಕಾರಣವಾಗಿದ್ದು ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿಕೆ.
ಶಾಸಕ ಆನಂದ್‌ಸಿಂಗ್ ಜಿಂದಾಲ್ಗೆ ಭೂಮಿ ಪರಭಾರೆ ವಿರುದ್ಧ ಮಾತನಾಡಿರುವುದು ಹಾಗೂ ನಾಗೇಂದ್ರಗೆ ಸಚಿವ ಸ್ಥಾನ ಕೈತಪ್ಪಿರುವ ಹೊತ್ತಲ್ಲೇ ಬಳ್ಳಾರಿಯಿಂದಲೇ ಆಪರೇಷನ್ ಕಮಲ ಶುರುವಾಗಬಹುದು ಎಂಬ ಈಶ್ವರಪ್ಪ ಮಾತು ಇದಕ್ಕೆ ಪುಷ್ಟಿ ನೀಡಿದೆ.
ರಾಜ್ಯ ಸರ್ಕಾರ 3667 ಎಕರೆ ಜಮೀನನ್ನು ಜಿಂದಾಲ್ ಸಂಸ್ಥೆಗೆ ಪರಭಾರೆ ಮಾಡಲು ಸಜ್ಜಾಗಿರುವಾಗ ವಿಜಯನಗರ (ಹೊಸಪೇಟೆ) ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಎಸ್.ಆನಂದ್‌ಸಿಂಗ್ ದಿಢೀರ್ ಸುದ್ದಿಗೋಷ್ಠಿ ಕರೆದು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹೋರಾಟದ ನೇತೃತ್ವ ವಹಿಸಲು ಸಿದ್ಧ ಎಂದಿರುವುದು ದೋಸ್ತಿ ಆಡಳಿತದ ಮೇಲಿನ ಒಳಬೇಗುದಿಯನ್ನು ಹೊರ ಹಾಕಿದಂತಾಗಿದೆ. ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆಯೇ ಎಂಬ ಗುಮಾನಿ ಎಲ್ಲೆಡೆ ಹಬ್ಬಿದೆ.
ನಾಗೇಂದ್ರ ಮೌನ?: ಈ ಮೊದಲು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ‘ಆಪರೇಷನ್ ಕಮಲ’ ಯತ್ನದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಪ್ರಮುಖ ಪಾತ್ರ ವಹಿಸಿದ್ದರು. ಅದು ವಿಫಲವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲೇ ಸಕ್ರಿಯರಾಗಿದ್ದ ಅವರಿಗೆ ಮೊನ್ನೆ ನಡೆದ ಸಂಪುಟ ವಿಸ್ತರಣೆ ವೇಳೆಯೂ ಸಚಿವ ಸ್ಥಾನ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಅವರು ಸೈಲೆಂಟ್ ಆಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈಶ್ವರಪ್ಪ ನೀಡಿದ ಸುಳಿವಿನಂತೆ ಈ ಇಬ್ಬರೂ ಶಾಸಕರು ಪುನಃ ಬಿಜೆಪಿ ಕದ ತಟ್ಟಲಿದ್ದಾರೆಯೇ ಕಾದು ನೋಡಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.