ಜಂತು ನಿವಾರಣೆ ಮಾತ್ರೆ ಸೇವಿಸಿ
ಮಕ್ಕಳಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ ಹೆಡೆ ಕರೆ
Team Udayavani, Sep 27, 2019, 5:49 PM IST
ಬಳ್ಳಾರಿ: ಸದೃಢ ಆರೋಗ್ಯಕ್ಕಾಗಿ ಜಂತು ಹುಳು ನಿವಾರಣಾ ಮಾತ್ರೆಯನ್ನು ಮಕ್ಕಳು ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ ಹೆಡೆ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಮಕ್ಕಳಿಗೆ ಮಾತ್ರೆ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಲ್ಲಿ ಜಂತುಹುಳು ನಿವಾರಣೆಯ ಅಲ್ಬಂಡಜೋಲ್ ಮಾತ್ರೆಗಳನ್ನು ಚೀಪಿಸಿ ಸೇವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಮಾತ್ರೆಯನ್ನು ಉಚಿತವಾಗಿ ನೀಡುತ್ತಿದ್ದು ತಪ್ಪದೇ ಚೀಪಿಸಬೇಕು. ಪ್ರಸ್ತುತ ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಶಾಲಾ-ಕಾಲೇಜುಗಳಲ್ಲಿ 1ರಿಂದ 19 ವರ್ಷದೊಳಗಿನ ಒಟ್ಟು 947790 ಮಕ್ಕಳಿಗೆ
ಮಾತ್ರೆ ಚೀಪಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಜಿಲ್ಲೆಯ 2784 ಅಂಗನವಾಡಿ ಕೇಂದ್ರಗಳು, ಸರ್ಕಾರಿ ಹಾಗೂ ಅನುದಾನಿತ 21865 ಮತ್ತು 1130 ಖಾಸಗಿ ಶಾಲೆಗಳಲ್ಲಿ ಮತ್ತು 270 ಕಾಲೇಜ್ ಹಾಗೂ ಐಟಿಐಗಳಲ್ಲಿ ಏಕಕಾಲಕ್ಕೆ ಮಾತ್ರೆ ಚೀಪಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಧರನ್ ಮಾತನಾಡಿ, ಹೆಚ್ಚಿನ ರೋಗಗಳು ಅಶುಚಿತ್ವದ ಕಾರಣದಿಂದಾಗಿ ಹುಟ್ಟಿಕೊಳ್ಳುತ್ತವೆ. ಹಾಗಾಗಿ ಮಕ್ಕಳು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಆರೋಗ್ಯವೇ ಭಾಗ್ಯ ಎನ್ನುವಂತೆ ಉತ್ತಮ ಆರೋಗ್ಯ ಹೊಂದಿದಲ್ಲಿ ಮಾತ್ರ ಚಟುವಟಿಕೆಯಿಂದ ಇರಲು ಸಾಧ್ಯ. ಆರೋಗ್ಯದ ಕುರಿತು ಎಂದಿಗೂ ನಿರ್ಲಕ್ಷ್ಯ ವಹಿಸದಿರಿ ಹಾಗೂ ಶೌಚದ ನಂತರ ಕೈಗಳನ್ನು ಸಾಬೂನಿನಿಂದ
ತೊಳೆಯುವುದರಿಂದ ಪರೋಕ್ಷವಾಗಿ ಜಂತು ಹುಳು ಸೋಂಕು ತಡೆಯಬಹುದು ಎಂದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹಾಲಿಂಗನಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿ ಡಾ| ಇಂದ್ರಾಣಿ, ಜಿಲ್ಲಾ ಸರ್ವೆಕ್ಷಣಾ ಧಿಕಾರಿ ಡಾ| ಮರಿಯಂ ಬಿ, ತಾಲೂಕಾ ಆರೋಗ್ಯಾಧಿಕಾರಿ ಡಾ| ಕೆ.ಜಿ. ವೀರೇಂದ್ರಕುಮಾರ, ವೈದ್ಯಾಧಿಕಾರಿ ಡಾ| ಕರುಣಾ, ಶಿಕ್ಷಣ ಇಲಾಖೆಯ
ಇಸಿಓ ಮೋಹಿನುದ್ದೀನ್, ಗಿರಿಮಲ್ಲ, ಉಪನ್ಯಾಸಕರಾದ ಯು. ಶ್ರೀನಿವಾಸ ಮೂರ್ತಿ, ಎ. ಈರಣ್ಣ, ಶ್ಯಾಮಣ್ಣ, ಡಿಎನ್‌ಓ ಸರೋಜ, ಆರ್‌ಬಿಎಸ್‌ಕೆ ಜಿಲ್ಲಾ ಸಂಯೋಜಕ ಮನೋಹರ, ಎವಿಡೆನ್ಸ್ ಆಕ್ಷನ್‌ನ ಷಡಾಕ್ಷರಿ, ಟಿಡಿವೈಎಚ್‌ಇಓ ಕೃಷ್ಣಾ ನಾಯ್ಕ, ಶಾಂತವ್ವ ಉಪ್ಪಾರ, ವಿಜಯಲಕ್ಷ್ಮೀ ಕುರಡಪ್ಪನವರ, ಮೇಘರಾಜ್, ನೇತ್ರಾ ಸೇರಿದಂತೆ ಶಾಲಾ ವಿಧ್ಯಾರ್ಥಿನಿಯರು ಹಾಗೂ ಉಪನ್ಯಾಸಕರು, ಟ್ಯಾಂಕ್‌ಬಂಡ್ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಈಶ್ವರ ಎಚ್.ದಾಸಪ್ಪವನರ ಸ್ವಾಗತಿಸಿದರು. ಉಪನ್ಯಾಸಕ ಚಾಂದಪಾಶಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫಲಪ್ರದ?
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫಲಪ್ರದ?
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.