ಬೇಡಿಕೆ ಈಡೇರಿಕೆಗೆ ಒತ್ತಾಯ
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ವೇತನ ಹೆಚ್ಚಿಸಿ: ಪ್ರತಿಭಟನೆ
Team Udayavani, Nov 28, 2019, 1:28 PM IST
ಬಳ್ಳಾರಿ: ವಿವಿಧೋದ್ದೇಶ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ವಿಶಿಷ್ಟಚೇತನರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಹಾಗೂ ವಿಶಿಷ್ಟಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಗ್ರಾಮೀಣ ಪುನರ್ವಸತಿ ಯೋಜನೆಯನ್ನು ವಿಶಿಷ್ಟಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಳೆದ 11ವರ್ಷಗಳಿಂದ ವಿಶಿಷ್ಟಚೇತನರಿಗಾಗಿ ವಿಶಿಷ್ಟಚೇತನರೇ ಆದ ಪದವೀಧರ ವಿಶಿಷ್ಟಚೇತನರನ್ನು ಎಂಆರ್‌ಡಬ್ಲೂ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ವಿಶಿಷ್ಟಚೇತನರನ್ನು ವಿಆರ್‌ಡಬ್ಲೂ ಆಗಿ ತಿಂಗಳ ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದು, ಎಂಆರ್‌ಡಬ್ಲೂ ಅವರಿಗೆ ಸದ್ಯ 6 ಸಾವಿರ ರೂ., ವಿಆರ್ ಡಬ್ಲೂ ಅವರಿಗೆ 3ಸಾವಿರ ರೂ. ತಿಂಗಳ ಗೌರವಧನ ಪಾವತಿಸಲಾಗುತ್ತಿದೆ. ನ್ಯಾಯಬದ್ಧವಾದ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇಲ್ಲಿವರೆಗೆ ಕ್ರಮವಿಲ್ಲ. ಸಂಬಂ ಸಿದ ಇಲಾಖೆ ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಿಧೋದ್ದೇಶ ಹಾಗೂ ಪುನರ್ವಸತಿ ಕಾರ್ಯಕರ್ತರ ಭದ್ರತೆ ಆಗುವವರೆಗೂ ಗೌರವಧನ ಹೆಚ್ಚಿಸಬೇಕು. ವಿಶಿಷ್ಟಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೂ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ವಿವಿಧೋದ್ದೇಶ ಮತ್ತು ಪುನರ್ವಸತಿ ಕಾರ್ಯಕರ್ತರ ಮಹಿಳೆಯರಿಗೆ ಗರ್ಭಿಣಿ ಸಮಯದಲ್ಲಿ 6 ತಿಂಗಳ ವೇತನ ಸಹಿತ ರಜೆ ನೀಡಬೇಕು, ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕೆಲಸ ನಿರ್ವಹಿಸುವ ಎಂಆರ್‌ಡಬ್ಲೂ ಹಾಗೂ ವಿಆರ್‌ಡಬ್ಲೂ ಅಕಾಲಿಕ ಮರಣ ಹೊಂದಿದರೆ 50 ಸಾವಿರದಿಂದ 2 ಲಕ್ಷ ರೂ.ವರೆಗೆ ಸಹಾಯಧನ ಹೆಚ್ಚಿಸಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ನಿರ್ದೇಶಕ ಜಿ.ರುದ್ರೇಗೌಡ, ಒಕ್ಕೂಟದ ಜಿಲ್ಲಾಧ್ಯಕ್ಷ ಕರಿಬಸಯ್ಯ, ಜಿಲ್ಲಾ ಸಂಚಾಲಕ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾಧ್ಯಕ್ಷ ಡಿ.ನೇಮ್ಯಾನಾಯ್ಕ, ರಾಜ್ಯ ನಿರ್ದೇಶಕ ಆರ್.ಧನರಾಜ್ ಸೇರಿದಂತೆ ನೂರಾರು ವಿಶಿಷ್ಟಚೇತನರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.