ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯ ಈದ್‌ಮಿಲಾದ್
ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯಪಾಯಸ, ಬ್ರೆಡ್ ದಾನಸ್ತಬ್ಧಚಿತ್ರಗಳ ಮೆರವಣಿಗೆ
Team Udayavani, Nov 11, 2019, 2:59 PM IST
ಬಳ್ಳಾರಿ: ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸಲ್ಮಾನರು ಸಡಗರ, ಸಂಭ್ರಮದಿಂದ ಭಾನುವಾರ ಆಚರಿಸಿದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ನಿಮಿತ್ತ ಭಾನುವಾರ ಬೆಳಗ್ಗೆ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸಲ್ಮಾನರು ಬಳಿಕ ಸಿಹಿ ಪಾಯಸ, ಬ್ರೆಡ್, ಬಿಸ್ಕತ್‌ಗಳನ್ನು ದಾನ ಮಾಡಿದರು.
ನಗರದ ಬಹುತೇಕ ಕಡೆ ರಸ್ತೆಬದಿಗಳಲ್ಲಿ ಪಾಯಸದೊಂದಿಗೆ ಬ್ರೆಡ್, ಬಿಸ್ಕತ್‌ಗಳನ್ನು ಸ್ಥಳೀಯರಿಗೆ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜತೆಗೆ ಹಬ್ಬದ ಮುನ್ನಾದಿನವಾದ ಶನಿವಾರ ರಾತ್ರಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಪ್ರವಚನಗಳು ನಡೆದವು.
ಬಳಿಕ ಮುಸಲ್ಮಾನ ಸಮುದಾಯದಿಂದ ನಗರದ ಮಿಲ್ಲರ್ ಪೇಟೆ, ಕೌಲ್‌ಬಜಾರ್, ಸಂಗಮ್ ವೃತ್ತ, ಬೆಳಗಲ್ ಕ್ರಾಸ್, ಬ್ರೂಸ್‌ಪೇಟೆ, ವಡ್ಡರಬಂಡೆ, ಹುಸೇನ್‌ನಗರ, ಕೊಲಿಮಿಬಜಾರ್, ದೊಡ್ಡ ಮಾರುಕಟ್ಟೆ ಬೆಂಗಳೂರು ರಸ್ತೆಗಳಲ್ಲಿ ಮೆಕ್ಕಾ, ಮದೀನಾದ ಪ್ರತಿಕೃತಿಗಳನ್ನು ಬೃಹತ್ ಮೆರವಣಿಗೆ ಮಾಡುವ ಮೂಲಕ ಗಮನ ಸೆಳೆದರು. ಮೆರವಣಿಗೆಯಲ್ಲಿ ಬೃಹತ್‌ಮಟ್ಟದ ಧ್ವನಿವರ್ಧಕಗಳನ್ನು ಬಳಸಿಕೊಳ್ಳುವ ಮೂಲಕ ಮುಸಲ್ಮಾನರು ಈದ್‌ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಪೊಲೀಸರು ಸ್ತಬ್ಧಚಿತ್ರ ಮೆರವಣಿಗೆ ವೇಳೆ ಸೂಕ್ತ ಬಂದೋಬಸ್ತ್ ಒದಗಿಸಿದರು. ಮೆರವಣಿಗೆ ನಡೆಯುತ್ತಿದ್ದ ಬಹುತೇಕ ರಸ್ತೆಗಳಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಭೋಜನಕೂಟ: ಹಬ್ಬದ ಅಂಗವಾಗಿ ಮುಸ್ಲಿಮರ ಮನೆಗಳಲ್ಲಿ ಭೋಜನ ಕೂಟಗಳು ಏರ್ಪಾಡಾಗಿದ್ದವು. ಸ್ನೇಹಿತರು, ಬಂಧುಗಳನ್ನು ಆಹ್ವಾನಿಸಿ ಭೋಜನ ಸವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.