ಬಳ್ಳಾರಿ-ಹೊಸಪೇಟೆ ವಿಭಾಗದಲ್ಲಿವೆ 23 ಲಕ್ಷ ವಾಹನ

ಆಗಸ್ಟ್‌ 31ರ ವರೆಗೆ 20 ಲಕ್ಷ ದ್ವಿಚಕ್ರ ವಾಹನ ನೋಂದಣಿ •ಒಟ್ಟು 15 ಎಮಿಷನ್‌ ಟೆಸ್ಟ್‌ ಕೇಂದ್ರ

Team Udayavani, Sep 14, 2019, 1:49 PM IST

14-Spectember-13

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಿನೇದಿನೆ ವಾಹನದಟ್ಟಣೆ ಹೆಚ್ಚುತ್ತಿದ್ದು, ಬಳ್ಳಾರಿ, ಹೊಸಪೇಟೆ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಸಾರಿಗೆ, ಶಾಲಾ, ಸರಕು ಸಾಗಾಣಿಕೆ, ದ್ವಿಚಕ್ರ ಸೇರಿ ಎಲ್ಲ ವಿಧದ ಒಟ್ಟು 23,70,389 ವಾಹನಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಗಣಿಗಾರಿಕೆ ಆರಂಭವಾದ ಬಳಿಕ ವಾಹನಗಳ ಸರಕು ಸಾಗಾಣಿಕೆ ವಾಹನಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಬಳ್ಳಾರಿ ವ್ಯಾಪ್ತಿ: ಬಳ್ಳಾರಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬಳ್ಳಾರಿ, ಸಿರುಗುಪ್ಪ, ಸಂಡೂರು ತಾಲೂಕುಗಳು ಬರಲಿದ್ದು, ಕಳೆದ ಆಗಸ್ಟ್‌ ತಿಂಗಳ 31ರ ವರೆಗೆ 20,19,988 ದ್ವಿಚಕ್ರವಾಹನಗಳು ನೋಂದಣಿಯಾಗಿವೆ. ಕಾರು 15,430, ಜೀಪ್‌ 1579, ಓಮಿನಿ ಬಸ್‌ 282, ಟ್ರ್ಯಾಕ್ಟರ್‌ 12,017, ಜೆಸಿಬಿ ಸೇರಿ ಇತರೆ ನಿರ್ಮಾಣಕ್ಕೆ ಸಂಬಂಧಿಸಿದ್ದ ವಾಹನಗಳು 186, ಇತರೆ 801 ವಾಹನಗಳು ನೋಂದಣಿ ಮಾಡಿಕೊಳ್ಳಲಾಗಿದೆ.

ಸರಕು ಸಾಗಣಿಕೆ ವಾಹನಗಳು: ಟ್ರಾಲಿ ಉದ್ದವುಳ್ಳ ಲಾರಿಗಳು 1794, ಟ್ರಕ್ಸ್‌ ಮತ್ತು ಲಾರಿಗಳು 5316 ಸೇರಿ ಒಟ್ಟು 7110 ನೋಂದಣಿಯಾಗಿವೆ. ಸರಕು ಸಾಗಿಸುವ ಲಘುವಾಹನಗಳಲ್ಲಿ ನಾಲ್ಕು ಚಕ್ರದ ಲಘುವಾಹನ 5589, ತ್ರಿಚಕ್ರ ವಾಹನಗಳು 1694 ಸೇರಿ ಒಟ್ಟು 7283 ಇವೆ. ಇನ್ನು ವಿವಿಧೆಡೆ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಕೊಂಡು ಹೋಗುವ ಸ್ಟೇಜ್‌ ಕ್ಯಾರೀಜೆಸ್‌ ಬಸ್‌ಗಳು 642, ವಿವಿಧ ಕಂಪನಿಗಳೊಂದಿಗೆ ಗುತ್ತಿಗೆ ಮಾಡಿಕೊಂಡು ಸಿಬ್ಬಂದಿ ಸಾಗಿಸುವ ಗುತ್ತಿಗೆ ಕ್ಯಾರೀಜೆಸ್‌ ಬಸ್‌ಗಳು 62, ಖಾಸಗಿಯಾಗಿ ಸೇವೆ ನೀಡುವ 196, ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಸಾಗಿಸುವ 423 ಬಸ್‌ಗಳು, ಇತರೆ ಸೇರಿ 44 ಬಸ್‌ಗಳು ಸೇರಿ ಒಟ್ಟು 1367 ಬಸ್‌ಗಳು ನೋಂದಣಿಯಾಗಿವೆ.

ಟ್ಯಾಕ್ಸಿ ಮಾದರಿ ಮೋಟರ್‌ ಕ್ಯಾಬ್‌ 1977, ಮ್ಯಾಕ್ಸಿಕ್ಯಾಬ್‌ 1073, ಇತರೆ 89 ಸೇರಿ ಒಟ್ಟು 3139 ವಾಹನಗಳು ಇವೆ. ಪ್ರಯಾಣಿಕರನ್ನು ಸಾಗಿಸುವ ತ್ರಿಚಕ್ರದ ಆಟೋರಿಕ್ಷಾ 4649, ಆರು ಪ್ರಯಾಣಿಕರ 269 ಸೇರಿ ಒಟ್ಟು 4918 ವಾಹನಗಳು ಇವೆ.

ಹೊಸಪೇಟೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಾರ್ಚ್‌ 31ರ ವರೆಗೆ ಒಟ್ಟು 2,86,857 ವಾಹನಗಳು ನೋಂದಣಿಯಾಗಿವೆ.

ಹೊಸಪೇಟೆ ವ್ಯಾಪ್ತಿ: ಇದರಲ್ಲಿ ದ್ವಿಚಕ್ರ ವಾಹನ 2,18,436, ಕಾರ್‌ 14085, ಜೀಪ್‌ 638, ಓಮಿನಿ ಬಸ್‌ 4251, ಟ್ರ್ತ್ರ್ಯಾಕ್ಟರ್‌ 14716, ನಿರ್ಮಾಣ ವಾಹನಗಳು 360 ಇತರೆ ವಾಹನಗಳು 1214 ಸೇರಿ ಒಟ್ಟು 2,61,733 ವಾಹನಗಳು ನೋಂದಣಿಯಾಗಿವೆ.

ಸರಕು ಸಾಗಾಣಿಕೆ ವಾಹನಗಳು: ಉದ್ದ ಟ್ರಾಲಿಯುಳ್ಳ ಲಾರಿಗಳು 3083, ಟ್ರಕ್‌ ಮತ್ತು ಲಾರಿಗಳು 6079 ಸೇರಿ ಒಟ್ಟು 9164 ನೋಂದಣಿ. ಸರಕು ಸಾಗಿಸುವ ಲಘುವಾಹನಗಳಲ್ಲಿ ನಾಲ್ಕು ಚಕ್ರದವಾಹನಗಳು 5469, ಮೂರು ಚಕ್ರದ 1171 ಸೇರಿ ಒಟ್ಟು 6640 ವಾಹನಗಳು ನೋಂದಣಿಯಾಗಿವೆ.

ಬಸ್‌ಗಳು: ವಿವಿಧೆಡೆ ಪ್ರಯಾಣಿಕರನ್ನು ಹತ್ತಿಕೊಳ್ಳುವ ಬಸ್‌ಗಳು 2, ಕೈಗಾರಿಕೆ ಸಿಬ್ಬಂದಿ ಸಾಗಿಸುವ ಬಸ್‌ಗಳು 20, ಖಾಸಗಿ ವಲಯದಲ್ಲಿ ಸೇವೆ ನೀಡುವ ಬಸ್‌ಗಳು 232, ಶಿಕ್ಷಣ ಸಂಸ್ಥೆಗಳ ಶಾಲಾ ಬಸ್‌ಗಳು 311, ಇತರೆ ಬಸ್‌ಗಳು 38 ಸೇರಿ ಒಟ್ಟು 603 ಬಸ್‌ಗಳು ನೋಂದಣಿಯಾಗಿವೆ. ಟ್ಯಾಕ್ಸಿ ಮಾದರಿಯ ಮೋಟರ್‌ ಕ್ಯಾಬ್‌ 1862, ಮ್ಯಾಕ್ಸಿಕ್ಯಾಬ್‌ 1229 ಸೇರಿ ಒಟ್ಟು 3159 ವಾಹನಗಳು.

ಲಘು ವಾಹನಗಳು ಆಟೋರಿಕ್ಷಾ 2887, 6 ಪ್ರಯಾಣಿಕರ ವಾಹನ 105 ಒಟ್ಟು 1995, ಇತರೆ 2566 ಸೇರಿ ಒಟ್ಟು 2,86,857 ವಾಹನಗಳು ಹೊಸಪೇಟೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿವೆ.

15 ಎಮಿಷನ್‌ ಟೆಸ್ಟ್‌ ಕೇಂದ್ರಗಳು: ಬಳ್ಳಾರಿ ಕಚೇರಿ ವ್ಯಾಪ್ತಿಯಲ್ಲಿ 4, ಹೊಸಪೇಟೆ ಕಚೇರಿ ವ್ಯಾಪ್ತಿಯಲ್ಲಿ 5 ಸೇರಿ ಒಟ್ಟು 15 ಎಮಿಷನ್‌ ಟೆಸ್ಟ್‌ ಕೇಂದ್ರಗಳು ಇವೆ. ಈ ಎಲ್ಲ ಕೇಂದ್ರಗಳು ಖಾಸಗಿಯವರಿಗೆ ನೀಡಲಾಗಿದೆ. ಎಮಿಷನ್‌ ಟೆಸ್ಟ್‌ ಕೇಂದ್ರ ಆರಂಭಿಸಲು ಆಸಕ್ತರು, ಸ್ಥಳೀಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ, ಟೆಸ್ಟಿಂಗ್‌ ಯಂತ್ರ ಸೇರಿ ಇತರೆ ಪರಿಕರಗಳು ಇದ್ದಲ್ಲಿ ಈ ಕುರಿತ ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸುತ್ತಾರೆ. ಬಳಿಕ ಅಲ್ಲಿಂದಲೇ ಕೇಂದ್ರ ಆಂಭಿಸಲು ಅನುಮತಿ ದೊರೆಯಲಿದೆ ಎಂದು ಸ್ಥಳೀಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್‌ ಮಲ್ನಾಡ್‌ ತಿಳಿಸಿದ್ದಾರೆ.

15 ವರ್ಷ ಮೇಲ್ಪಟ್ಟ ವಾಹನಗಳನ್ನು ಸಾರಿಗೆ, ಮಾಲಿನ್ಯ ನಿಯಂತ್ರಣ ಮಂಡಳಿ, ಸಂಚಾರಿ ಪೊಲೀಸರು ತಪಾಸಣೆ ಮಾಡಿಸಬೇಕು. ಇದಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪ್ರತ್ಯೇಕ ತಪಾಸಣಾ ವಾಹನವೂ ಇದೆ. ಈ ವಾಹನದಲ್ಲಿ ಎವಿಎಂ ಸ್ಮೋಕ್‌ ಮೀಟರ್‌ ಎಂಬ ಎರಡು ಯಂತ್ರಗಳು ಇದ್ದು, ಇವುಗಳ ಸಹಾಯದಿಂದ ಡೀಸೆಜ್‌, ಪೆಟ್ರೋಲ್ ವಾಹನಗಳು ಹೊರಬಿಡುವ ಹೊಗೆಯನ್ನು ಪರಿಶೀಲಿಸಿ, ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಬಂದರೆ ಅಂಥ ವಾಹನಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಆದರೆ, ಜಿಲ್ಲೆಯಲ್ಲಿ ಕೇವಲ ಒಂದೇ ವಾಹನವಿದ್ದು, ಮೂರು ಇಲಾಖೆಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಸಂಚಾರಿ ಪೊಲೀಸರಿಂದಲೂ ಕಳೆದ ಒಂದು ವರ್ಷದಲ್ಲಿ 15 ಪ್ರಕರಣಗಳು ದಾಖಲಾಗಿವೆ.

ವಾಹನ ಸಂಖ್ಯೆಗೆ ಟೆಸ್ಟಿಂಗ್‌ ಪ್ರಮಾಣ ಪತ್ರ: ಜಿಲ್ಲೆಯಲ್ಲಿ ಇರುವ ಎಲ್ಲ ಎಮಿಷನ್‌ ಟೆಸ್ಟ್‌ ಕೇಂದ್ರಗಳು ಅಧಿಕೃತವಾಗಿವೆ. ಡೀಸೆಲ್ ವಾಹನಗಳು ಪ್ರತಿ 6 ತಿಂಗಳಿಗೊಮ್ಮೆ, ಪೆಟ್ರೋಲ್ ವಾಹನಗಳು ವರ್ಷಕ್ಕೊಮ್ಮೆ ಎಮಿಷನ್‌ ಟೆಸ್ಟ್‌ ಮಾಡಿಸಿಕೊಳ್ಳಬೇಕು. ಕೇಂದ್ರಗಳಲ್ಲಿ ಯಂತ್ರಗಳಿಂದ ಹೊಗೆಯನ್ನು ಪರಿಶೀಲಿಸಿದಾಗ ಶೇ. 4.5ಕ್ಕಿಂತ ಹೆಚ್ಚು ಹೊಗೆ ಬಂದರೆ ಅಂಥ ವಾಹನಗಳು ಫೇಲ್ ಎಂದೇ ಪ್ರಮಾಣ ಪತ್ರದಲ್ಲಿ ದಾಖಲಾಗುತ್ತದೆ. ಅದಕ್ಕಿಂತ ಕಡಿಮೆ ಬಂದರೆ ಪಾಸ್‌ ಎಂದು ನಮೂದಾಗುತ್ತದೆ. ಆದರೆ, ಕೇಂದ್ರಗಳಲ್ಲಿ ನಡೆಯುವುದೇ ಬೇರೆ. ಕೇಂದ್ರಗಳವರು ಹೊಗೆಯನ್ನು ಪರಿಶೀಲಿಸದೆ ಕೇವಲ ವಾಹನ ಸಂಖ್ಯೆಯನ್ನು ಪಡೆದು ಪ್ರಮಾಣ ಪತ್ರ ನೀಡುತ್ತಿದ್ದಾರೆ. ಈ ಪ್ರಮಾಣ ಪತ್ರವನ್ನಷ್ಟೇ ಪರಿಶೀಲಿಸುವ ಸಂಬಂಧಪಟ್ಟ ಅಧಿಕಾರಿಗಳು ವಾಹನವನ್ನು ಮರು ಪರಿಶೀಲಿಸದೆ ಅಂಥ ವಾಹನಗಳಿಗೆ ಪಾಸಿಂಗ್‌ ನೀಡುತ್ತಿದ್ದಾರೆ.

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.