![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Nov 5, 2021, 5:58 PM IST
ಹೊಸಪೇಟೆ: ಇತ್ತೀಚಿಗೆ ನಿಧನ ಹೊಂದಿದ ನಟ ಪುನೀತ್‌ರಾಜ್ ಕುಮಾರ್ ಅವರ ಆತ್ಮಕ್ಕೆ ಶಾಂತಿಕೋರಿ ನಗರದಲ್ಲಿಅವರ ಅಭಿಮಾನಿಗಳು ಶನಿವಾರ ರಾತ್ರಿ ಅಹೋರಾತ್ರಿ ಭಜನೆನಡೆಸಿದರು.ನಗರದ ಉಕ್ಕಡಕೇರಿ, ಮ್ಯಾಸಕೇರಿ, ಏಕಲವ್ಯ ವೃತ್ತಸೇರಿದಂತೆ ನಗರದ ವಿವಿಧಡೆ ಆಹೋರಾತ್ರಿ ಭಜನೆ ಹಾಡುವ ಮೂಲಕ ಅಗಲಿದ ನೆಚ್ಚಿನ ನಟನ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು.
ಈ ಭಾಗದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಿ ಅವರಕುಟುಂಬ, ಬಂಧು-ಮಿತ್ರರು ಭಜನೆಗಳನ್ನು ಹಾಡುವುದುವಾಡಿಕೆ. ಇದರಿಂದ ಮೃತರಿಗೆ ಸ್ವರ್ಗ ಪ್ರಾಪ್ತಿಯಾಗಲಿದೆಎಂಬುದು ನಂಬಿಕೆ. ಈ ಹಿನ್ನೆಲೆಯಲ್ಲಿ ಪುನೀತ್‌ರಾಜಕುಮಾರ್ ಅವರ ಅಭಿಮಾನಿಗಳು ಭಜನೆ ಮಾಡಿನಮನ ಸಲ್ಲಿಸಿದರು.
ಮತ್ತೂಂದೆಡೆ ನಗರದಲ್ಲಿ ಅಗಲಿದ ನಟ ಪುನೀತ್‌ರಾಜಕುಮಾರ್ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿಸಲ್ಲಿಸುವ ವೇಳೆ ಪುನೀತ್ ಅವರ ಫೋಟೋ ಬಲಭಾಗದಿಂದ ಹೂವು ಬಿದ್ದು ಅಚ್ಚರಿ ಮೂಡಿಸಿದ ಘಟನೆ ನಡೆದಿದೆ. ಈಘಟನೆಯ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗಿದೆ. ಪುನೀತ್ ಅವರ ಭಾವಚಿತ್ರ ಹೂವಿನಅಲಂಕಾರ ಮಾಡಿ, ಪೂಜೆ ಸಲ್ಲಿಸಿ ಮತ್ತೆ ಹುಟ್ಟಿ ಬಾ ಪುನಿತ್‌ಅಣ್ಣ ಎಂದು ಅಭಿಮಾನಿ ಭಾವುಕರಾಗಿ ಹೇಳುತ್ತಿದ್ದಂತೇ ಫೋಟೋ ಬಲಗಡೆಯಿಂದ ಹೂವು ಬಿದ್ದಿದ್ದು ನೆರೆದಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.