ವೃತ್ತ-ಕ್ರೀಡಾಂಗಣಕ್ಕೆ ಪುನೀತ್ ಹೆಸರು ನಾಮಕರಣ ಮಾಡಿ
ballari news
Team Udayavani, Nov 5, 2021, 1:38 PM IST
ಹೊಸಪೇಟೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಅವರ ಸ್ಮರಣಾರ್ಥ ಹೊಸಪೇಟೆಯ ಪ್ರಮುಖವೃತ್ತವೊಂದಕ್ಕೆ ಅವರ ಹೆಸರನ್ನಿಡಬೇಕು. ಅಥವಾಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್ ರಾಜಕುಮಾರ ಜಿಲ್ಲಾಕ್ರೀಡಾಂಗಣ ಅಂತ ನಾಮಕರಣ ಮಾಡಬೇಕುಎಂದು ಪುನೀತ್ ರಾಜಕುಮಾರ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ನಗರದ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಸಭೆಸೇರಿದ್ದ ಅಭಿಮಾನಿಗಳು ಪುನೀತ್ ರಾಜಕುಮಾರ್‌ಅವರು ಹಂಪಿ, ಹೊಸಪೇಟೆ ಮೇಲೆ ಅಪಾರ ಪ್ರೀತಿಹೊಂದಿದ್ದರು. ಈಚೆಗೆ ಹಂಪಿ ಹಾಗೂ ಹೊಸಪೇಟೆಹಳ್ಳಿ ಭಾಗಕ್ಕೂ ಬಂದು ಹೋಗಿದ್ದರು. “ನನ್ನನ್ನೂಯಾರು ಕೈಬಿಟ್ಟರೂ ಹೊಸಪೇಟೆ ಜನ ಕೈಬಿಡುವುದಿಲ್ಲ’ಎಂದು ಪುನೀತ್ ಹೇಳಿದ್ದರು. ಅವರು ಈ ಭಾಗದಲ್ಲಿಶೂಟಿಂಗ್‌ಗೆ ಬಂದಾಗಲೂ ಹೊಸಪೇಟೆಯಅಭಿಮಾನಿಗಳ ಬಗ್ಗೆ ವಿಶೇಷ ಪ್ರೀತಿ ತೋರುತ್ತಿದ್ದರು.
ಬೆಂಗಳೂರಿಗೆ ಹೋದಾಗಲು ಹೊಸಪೇಟೆ ಜನರಮೇಲೆ ಪ್ರೀತಿ ತೋರಿದ್ದಾರೆ. ಹಾಗಾಗಿ ಅವರಹೆಸರನ್ನು ಪ್ರಮುಖ ವೃತ್ತಕ್ಕೆ ಇಟ್ಟು ಅವರ ಹೆಸರುಚಿರಸ್ಥಾಯಿಯಾಗುವಂತೆ ಮಾಡಬೇಕು.ಇದಾಗದಿದ್ದರೆ ದೊಡ್ಮನೆ ಹುಡುಗ ಚಿತ್ರದಚಿತ್ರೀಕರಣ ನಡೆದ ಕ್ರೀಡಾಂಗಣಕ್ಕೆ ಅವರ ಹೆಸರನ್ನಿಡಬೇಕು.
ಇದೇ ಕ್ರೀಡಾಂಗಣದಲ್ಲಿಪುನೀತ್ ಅವರು ಶಿವಣ್ಣ ಅಭಿನಯದ ಟಗರುಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದರು. ಅವರನೆನಪಿಗಾಗಿ ಈ ಕಾರ್ಯ ಮಾಡಬೇಕು ಎಂದುಸಭೆಯಲ್ಲಿ ಒತ್ತಾಯ ಕೇಳಿಬಂತು. ದೀಪಾವಳಿಹಬ್ಬದ ಬಳಿಕ ಸಚಿವ ಆನಂದ್ ಸಿಂಗ್ ಅವರನ್ನುಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪುನೀತ್ ರಾಜಕುಮಾರ ಅಭಿಮಾನಿಗಳಾದಗುಜ್ಜಲ ರಘು, ಗುಜ್ಜಲ ಪುರುಷೋತ್ತಮ್, ಕಿಚಿಡಿವಿಶ್ವ, ಎಸ್.ಎಸ್. ಚಂದ್ರಶೇಖರ, ಜೋಗಿ ತಾಯಪ್ಪ,ಕೆ.ಎಂ. ಸಂತೋಷ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ಹೊಸ ಸೇರ್ಪಡೆ
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.