ಬಳ್ಳಾರಿ ನಗರದಲ್ಲಿ 12,227 ಅನಧಿಕೃತ ಕಟ್ಟಡಗಳು ಪತ್ತೆ
ಇ-ಖಾತೆ ಮೂಲಕ ಆಸ್ತಿ ತೆರಿಗೆ ಪಾವತಿಗೆ ಕ್ರಮ
Team Udayavani, Jun 27, 2020, 8:58 AM IST
ಬಳ್ಳಾರಿ: ದಿನೇ ದಿನೇ ಬೃಹತ್ ಮಟ್ಟದಲ್ಲಿ ವಿಸ್ತಾರಗೊಳ್ಳುತ್ತಿರುವ ಗಣಿನಗರಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ ಅನಧಿಕೃತ ಕಟ್ಟಡ, ನಿವೇಶನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕುರಿತು ಸಮೀಕ್ಷೆ ನಡೆಸಿದ್ದ ಪಾಲಿಕೆಗೆ ನಗರದಲ್ಲಿ 12,227 ಅನಧಿಕೃತ ಕಟ್ಟಡ, ನಿವೇಶನಗಳು ಇರುವುದು ಕಂಡುಬಂದಿದ್ದು, ಇಂತಹ ಕಟ್ಟಡಗಳಿಂದ ತೆರಿಗೆ ಕಟ್ಟಿಸಿಕೊಳ್ಳಲು ಪಾಲಿಕೆ ಸಿದ್ಧತೆ ನಡೆಸಿದೆ.
ಕಳೆದ ಮೇ ತಿಂಗಳಲ್ಲಿ ಬಳ್ಳಾರಿ ನಗರಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸರ್ವೇ ನಡೆಸಿ, ಅನಧಿಕೃತ ಕಟ್ಟಡ ಆಸ್ತಿಗಳನ್ನು ಪತ್ತೆ ಹಚ್ಚುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪಾಲಿಕೆ ಅಧಿಕಾರಿಗಳು ಬಳ್ಳಾರಿ ಮಹಾನಗರ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಸಮೀಕ್ಷಾ ಕಾರ್ಯ ನಡೆಸಿ 12,227 ಅನ ಧಿಕೃತ ಕಟ್ಟಡ, ನಿವೇಶನಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ನಗರದಲ್ಲಿ ಈವರೆಗೆ 65,076 ಕಟ್ಟಡ ನಿವೇಶನಗಳ ನೋಂದಣಿ ಮಾಡಿಸಿಕೊಂಡು ಆಸ್ತಿ ತೆರಿಗೆ ಪಾವತಿಸಲಾಗುತ್ತಿದೆ ಎಂದು ಗುರುತಿಸಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಬಡಾವಣೆಗಳು ತಲೆಯೆತ್ತಿದ್ದು, ಸಾವಿರಾರು ಕಟ್ಟಡಗಳು ನಿರ್ಮಾಣವಾಗಿವೆ. ಇದೀಗ ಜನವಸತಿ ಪ್ರದೇಶಗಳಾಗಿ ಪರಿವರ್ತನೆಯಾಗಿರುವ ರೇಣುಕಾನಗರ, ವಿಶಾಲನಗರ, ಬಳ್ಳಾರಪ್ಪ ಕಾಲೋನಿ, ಹನುಮಾನ್ ನಗರ, ವಡ್ಡರಗೇರಿ ಸೇರಿ ಹಲವಾರು ಬಡಾವಣೆಗಳಿಗೆ ಪಾಲಿಕೆಯಿಂದಲೂ ಕುಡಿಯುವ ನೀರು, ಬೀದಿದೀಪ, ಒಳಚರಂಡಿ, ತೆರೆದ ಚರಂಡಿ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಇಷ್ಟೆಲ್ಲ ಸೌಲಭ್ಯ ಅನುಭವಿಸುತ್ತಿರುವ ಈ ಜನವಸತಿ ಪ್ರದೇಶಗಳಲ್ಲಿನ ಜನರು ಪಾಲಿಕೆಗೆ ಮಾತ್ರ ತೆರಿಗೆ ಕಟ್ಟುವಲ್ಲಿ ಮುಂದೆ ಬರುತ್ತಿಲ್ಲ. ಎರಡು ಪಟ್ಟು ಆಸ್ತಿ ತೆರಿಗೆ ಪಾತಿಸಿ, ಆಸ್ತಿ ದಾಖಲೀಕರಣ ಮಾಡಿಕೊಳ್ಳುವಂತೆ ಸೂಚಿಸಿದ್ದರೂ, ಬಹುತೇಕರು ಮುಂದೆ ಬರುತ್ತಿಲ್ಲ. ಇದೀಗ ಡಿಜಟಲೀಕರಣಕ್ಕೆ ಮುಂದಾಗಿರುವ ಪಾಲಿಕೆಯವರು ಪ್ರತಿ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಿ ಅನಧಿಕೃತ ಕಟ್ಟಡ, ನಿವೇಶನಗಳನ್ನು ಪತ್ತೆಹಚ್ಚಿ, ಆಸ್ತಿ ತೆರಿಗೆ ಪಾವತಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.
ಆರಂಭದಲ್ಲಿ ಒಂದನೇ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಸರ್ವೇ ಮಾಡಿದಾಗ, ಅಲ್ಲಿ 1806 ಆಸ್ತಿಗಳ ಪೈಕಿ 957 ಅನಧಿಕೃತ ಕಟ್ಟಡಗಳು ಪತ್ತೆಯಾದವು. ಈ ಹಿನ್ನೆಲೆಯಲ್ಲಿ ಎಲ್ಲಾ ವಾರ್ಡ್‌ಗಳ ಸರ್ವೇ ಕಾರ್ಯ ಮಾಡಲಾಗಿದೆ. 2,3,4,8,10,11,12,13,24,25 ನೇ ವಾರ್ಡ್ ಗಳಲ್ಲಿ ಬಿಟ್ಟರೆ, ಉಳಿದ ಎಲ್ಲಾ ವಾರ್ಡ್ ಗಳಲ್ಲಿ ಅನ ಧಿಕೃತ ಆಸ್ತಿಗಳು ಪತ್ತೆಯಾಗಿವೆ. 5 ನೇ ವಾರ್ಡ್‌ನಲ್ಲಿ ಅತಿ ಹೆಚ್ಚು 1388 ಕಟ್ಟಡ ನಿವೇಶನಗಳು ಅನಧಿಕೃತವಾಗಿವೆ. 6 ನೇ ವಾರ್ಡ್‌ನಲ್ಲಿ 818, 7ನೇ ವಾರ್ಡ್ 106, 9ನೇ ವಾರ್ಡ್ 606, 14ನೇ ವಾರ್ಡ್ 186, 15ನೇ ವಾರ್ಡ್ 155, 16ನೇ ವಾರ್ಡ್ 78, 17ನೇ ವಾರ್ಡ್ 574, 18ನೇ ವಾರ್ಡ್ 50, 19ನೇ ವಾರ್ಡ್ 180, 20ನೇ ವಾರ್ಡ್ 458, 21ನೇ ವಾರ್ಡ್ 145, 22ನೇ ವಾರ್ಡ್ 813, 23 ನೇ ವಾರ್ಡ್ 11, 26ನೇ ವಾರ್ಡ್ 412, 27ನೇ ವಾರ್ಡ್ 483, 28ನೇ ವಾರ್ಡ್ 257, 29ನೇ ವಾರ್ಡ್ 955, 30 ನೇ ವಾರ್ಡ್ 770, 31ನೇ ವಾರ್ಡ್ 965, 32ನೇ ವಾರ್ಡ್ 270, 33ನೇ ವಾರ್ಡ್ 416, 34ನೇ ವಾರ್ಡ್ 99, 35ನೇ ವಾರ್ಡ್ 775 ಅನಧಿಕೃತ ಆಸ್ತಿಗಳು ಪತ್ತೆಯಾಗಿವೆ. ಈ ಎಲ್ಲಾ ಆಸ್ತಿಗಳಿಂದ ಈಗ ತೆರಿಗೆ ವಸೂಲಿ ಮಾಡಲು ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಳ್ಳತ್ತಿದೆ.
ಇದೀಗ ಇಂತಹ ಆಸ್ತಿಗಳನ್ನು ಪತ್ತೆ ಹಚ್ಚಿರುವ ಪಾಲಿಕೆಯವರು ಇ-ಖಾತೆ ಸಂಖ್ಯೆ ನೀಡಿ, ತೆರಿಗೆ ವಸೂಲಿ ಮಾಡಲು ಯೋಜನೆಯೊಂದನ್ನು ರೂಪಿಸಿದೆ. ಪಾಲಿಕೆಯಿಂದ ಒಂದು ಆ್ಯಪ್ ರಚಿಸಿ ಅದರಲ್ಲಿಯೇ ಪ್ರತಿ ಆಸ್ತಿಯ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗುವಂತೆ ಮಾಡಲಿದೆ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ಬಡಾವಣೆಗಳಲ್ಲಿ ಅನಧಿಕೃತ ಕಟ್ಟಡ, ನಿವೇಶನಗಳನ್ನು ಸರ್ವೇ ಮೂಲಕ ಪತ್ತೆ ಹಚ್ಚಲಾಗಿದೆ. ಇಂತಹ ಕಟ್ಟಡಗಳಿಂದ ತೆರಿಗೆ ಪಾವತಿಸಿಕೊಳ್ಳುವ ಸಲುವಾಗಿ ಇ-ಖಾತೆ ವ್ಯವಸ್ಥೆ ಮಾಡಲಾಗಿದ್ದು, ಕಟ್ಟಡಕ್ಕೆ ಒಂದು ಸಂಖ್ಯೆ ನೀಡಲಾಗುತ್ತದೆ. ಸಾರ್ವಜನಿಕರು ಆ ಸಂಖ್ಯೆಯ ಮೇಲೆ ತೆರಿಗೆ ಪಾವತಿಸಬಹುದು. ಅಲ್ಲದೇ, ಸದ್ಯ ಅನಧಿ ಕೃತ ಕಟ್ಟಡಗಳಿಂದ ಪಾಲಿಕೆಗೆ 20-25 ಕೋಟಿ ರೂ. ಆಸ್ತಿ ತೆರಿಗೆ ನಿರೀಕ್ಷೆ ಇದೆ. ಈ ಅನ ಧಿಕೃತ ಕಟ್ಟಡಗಳು ಅಧಿ ಕೃತಗೊಂಡರೆ 2.5 ಕೋಟಿ ರೂ. ವಾರ್ಷಿಕ ಆಸ್ತಿ ತೆರಿಗೆ ಹೆಚ್ಚಲಿದೆ. -ತುಷಾರಮಣಿ, ಆಯುಕ್ತರು, ಮಹಾನಗರ ಪಾಲಿಕೆ, ಬಳ್ಳಾರಿ.
-ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.