ಹೋಸಪೇಟೆಯಲ್ಲಿ ಬಡವರ ಫ್ರಿಡ್ಜ್ ಗೆ ಭಾರಿ ಡಿಮ್ಯಾಂಡ್
ಒಂದು ಕೊಡ ನೀರಿನ ಸಾಮರ್ಥ್ಯದ ಮಡಿಕೆಗೆ 300 ರೂ.
Team Udayavani, Apr 12, 2021, 8:44 PM IST
ಹೊಸಪೇಟೆ: ಬೇಸಿಗೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ನಗರ-ಗ್ರಾಮೀಣ ಜನರು ತತ್ತರಿಸಿದ್ದಾರೆ. ತಾಪಮಾನ ಶಮನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮಣ್ಣಿನ ಮಡಿಕೆಗೆ ಭಾರೀ ಡಿಮ್ಯಾಂಡ್ ಬಂದಿದ್ದು, ಬಡವ-ಬಲ್ಲಿದರೆನ್ನದೇ ಎಲ್ಲರೂ ಮಡಿಕೆ ಮೊರೆ ಹೋಗುತ್ತಿದ್ದಾರೆ.
ನಗರ ಸೇರಿ ತಾಲೂಕಿನಲ್ಲಿ ಮಧ್ಯಾಹ್ನ ಸೂರ್ಯ ನೆತ್ತಿಗೇರಿದರೆ ಸಾಕು ಬಿಸಿಲಿನ ಜಳ ಅನುಭವವಾಗುತ್ತದೆ. 38ರಿಂದ 41 ಡಿಗ್ರಿ ಸೆಲ್ಸಿಯಸ್ ತನಕ ಉಷ್ಣಾಂಶ ದಾಖಲಾಗುತ್ತಿದೆ. ನಗರದ ನಗರಸಭೆ ಕಚೇರಿ ಎದುರುಗಡೆ ಮಣ್ಣಿನ ಮಡಕೆಗಳನ್ನು ಕುಂಬಾರರು ಇಟ್ಟು ಮಾರಾಟದಲ್ಲಿ ತೊಡಗಿದ್ದಾರೆ. ಮನೆಯಲ್ಲಿ ಎಷ್ಟೇ ನೀರು ಸಂಗ್ರಹಿಸಿದರೂ ಬಿಸಿಲಿನ ತಾಪಕ್ಕೆ ಛಾವಣಿ ಕಾಯ್ದು ನೀರು ಬೆಚ್ಚಗಾಗಿ ಕುಡಿಯಲು ಸಂಕಟವೆನಿಸುತ್ತಿದೆ. ಆದರೆ, ಮಡಿಕೆಯಲ್ಲಿನ ನೀರು ನೈಸರ್ಗಿಕವಾಗಿ ತಣ್ಣಗೆ ಉಳಿಯುವುದರಿಂದ ಈ ನೀರು ಕುಡಿದರೆ ದೇಹಕ್ಕೆ ಹಿತಕರ ಅನುಭವ ಮೂಡುವುದರಿಂದ ಮಣ್ಣಿನ ಮಡಿಕೆಗೆ ಎಲ್ಲಿಲ್ಲಿದ ಬೇಡಿಕೆ ಬಂದಿದೆ.
ಬಡವರ ಫ್ರಿಡ್ಜ್:
ಎಸಿ, ಪ್ರಿಜ್, ಏರ್‌ಕೂಲರ್ ಗಳಿಗೆ ಹೋಲಿಸಿದರೆ ಮಡಿಕೆಯ ಬೆಲೆ ತುಂಬಾ ಕಡಿಮೆ. ಹೀಗಾಗಿ ಇದನ್ನು ಬಡವರ μÅàಜ್ ಎಂತಲೂ ಕರೆಯುತ್ತಾರೆ. ನಿತ್ಯ ಕೂಲಿ ನೆಚ್ಚಿಕೊಂಡ ಬಡವರು, ರೈತರು, ಕಾರ್ಮಿಕರು ತಣ್ಣನೆ ನೀರನ್ನು ಕುಡಿಯಲು ಮಡಿಕೆಗಳನ್ನೇ ಬಳಸುತ್ತಾರೆ. ಇದಕ್ಕೆ ಮಾರು ಹೋಗಿರುವ ಜನಸಾಮಾನ್ಯರು, ಫ್ರಿಡ್ಜ್ ಏಕೆ? ಮಣ್ಣಿನ ಮಡಿಕೆ ಇದ್ದರೆ ಸಾಕು ಎಂಬ ವಿಚಾರಕ್ಕೆ ಬಂದಿದ್ದಾರೆ.
ಇನ್ನು ನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯನ್ನು ಮಡಿಕೆಗೆ ಸುತ್ತಿದರೆ ಸಾಕು, ಒಳಗಿರುವ ನೀರು ಮತ್ತಷ್ಟು ತಣ್ಣಗಾಗಿ, ನೀರು ಕುಡಿದರೆ ಇನ್ನೂ ಕುಡಿಯಬೇಕು ಅನಿಸುತ್ತೆ. ಅಷ್ಟೇ ದೇಹಕ್ಕೆ ಆರೋಗ್ಯದಾಯಕ ಎನ್ನುತ್ತಾರೆ ಜನರು.
ಬೇಸಿಗೆಯಲ್ಲಷ್ಟೇ ಬೇಡಿಕೆ:
ಮಣ್ಣಿನ ಮಡಿಕೆಗೆ ಬೇಸಿಗೆಯಲ್ಲಿ ಮಾತ್ರ ಬೇಡಿಕೆಯಿದೆ. ಮಳೆ ಹಾಗೂ ಚಳಿಗಾಲದಲ್ಲಿ ಯಾರು ಕೇಳುವುದಿಲ್ಲ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಅತ್ಯಧುನಿಕ ಮಾದರಿಯ ನಾನಾ ರೀತಿಯ ವಸ್ತುಗಳು ಮಾರುಕಟ್ಟೆಗೆ ಬರುತ್ತಿರುವುದರಿಂದ ಪುರಾತನ ಕಾಲದಿಂದಲೂ ಬಂದಿರುವ ಮಣ್ಣಿನ ವಸ್ತುಗಳಿಗೆ ಬೆಲೆ ಇಲ್ಲದಂತಾಗಿದೆ ಎನ್ನುತ್ತಾರೆ ಕುಂಬಾರರು.
ಯಾವ ಮಡಿಕೆಗೆ ಎಷ್ಟುಬೆಲೆ?:
ಒಂದು ಕೊಡಪಾನ ನೀರಿನ ಸಾಮರ್ಥ್ಯದಲ್ಲಿ ಮಡಿಕೆಗೆ 300 ರೂ., 3 ಕೊಡಪಾನ ನೀರು ಹಿಡಿಯುವ ನಲ್ಲಿ ಹರವಿಗೆ 450 ರೂ., ಹರವಿಗೆ 150ರಿಂದ 400 ರೂ., ಸಣ್ಣ ಮಡಿಕೆಗೆ 150 ರಿಂದ 250 ರೂ. ಮಾರಾಟ ಮಾಡಲಾಗುತ್ತದೆ. ಕಳೆದ 2020ರಲ್ಲಿ ಕೋವಿಡ್ ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತು. ಇದರಿಂದ ಕುಂಬಾರರು ಮಡಕೆ ತಯಾರಿಸಿದ್ದರೂ ಮಾರಾಟ ಮಾಡಲು ಆಗಿರಲಿಲ್ಲ. ಇದರಿಂದ ಹಾಕಿದ ಬಂಡವಾಳವೂ ಬಾರದೆ ಸಂಕಷ್ಟದಲ್ಲಿ ದಿನ ದೂಡಿದ್ದರು. ಜಾಗ ಬದಲಿಸಿದೆ ಗ್ರಾಹಕರು ಬರುವುದಿಲ್ಲ. ಹೀಗಾಗಿ ಒಂದೇ ಕಡೆ ಇರುತ್ತೇವೆ ಎಂದು ಕುಂಬಾರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.