150 ಅಡಿ ಕನ್ನಡ ಧ್ವಜದ ಅದ್ಧೂರಿ ಮೆರವಣಿಗೆ
Team Udayavani, Nov 17, 2018, 5:03 PM IST
ಸಿರುಗುಪ್ಪ: ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ 63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 150 ಅಡಿ ಉದ್ದದ ಕನ್ನಡ ಧ್ವಜದ ಮೆರವಣಿಗೆ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.
ಗ್ರಾಮದ ವೀರಯೋಧ ದಿ| ಮಂಜುನಾಥ್ ಸ್ಮಾರಕದಿಂದ ಆರಂಭವಾದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ
ನಡೆಯಿತು. ಅದ್ಧೂರಿಯಾಗಿ ನಡೆದ ಕನ್ನಡ ಧ್ವಜದ ಮೆರವಣಿಗೆಯಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಛದ್ಮವೇಷ ಧರಿಸಿದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ವಿಶೇಷ ಗಮನ ಸೆಳೆದರು. ಬಳಿಕ ಗ್ರಾಮದ ಪ್ರಮುಖ ವೃತ್ತದಲ್ಲಿ ಮಾನವ ಸರಪಳಿ
ಮೂಲಕ ಕನ್ನಡ ಕಹಳೆ ಮೊಳಗಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ನಾಗರಾಜಸ್ವಾಮಿ, ಗಡಿಭಾಗದ ಕನ್ನಡಿಗರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಎಲ್ಲಾ ಕನ್ನಡಪರ ಸಂಘಟನೆಗಳು ಸಂಘಟಿತರಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೂ ರಾಜ್ಯದ ಗಡಿಗಳಲ್ಲಿರುವ ಅನೇಕ ಸಮಸ್ಯೆಗಳು ಇಂದಿಗೂ ಜೀವಂತವಾಗಿದ್ದು, ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಕರವೇ ಮುಖಂಡ ಎನ್.ವಿರೂಪಾಕ್ಷಿ ಮಾತನಾಡಿ, ಪ್ರತಿನಿತ್ಯ ಕನ್ನಡ ಭಾಷೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂತಹ ಕಿಡಿಗೇಡಿತನವನ್ನು ಕನ್ನಡ ನಾಡಿನ ಜನತೆ ಸಹಿಸುವುದಿಲ್ಲ. ಕನ್ನಡ ನಾಡು-ನುಡಿ ರಕ್ಷಣೆಗಾಗಿ ಸರ್ವರೂ ಒಗ್ಗಟ್ಟಿನ
ಮನೋಭಾವನೆಯಿಂದ ಹೋರಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕೊಳ್ಳಿ ದ್ಯಾವಮ್ಮ, ಉಪಾಧ್ಯಕ್ಷ ಜಿ.ಸಂಪತ್‌ಕುಮಾರ್, ಮುಖಂಡರಾದ ಎಸ್.ಎಂ.ಅಡಿವೆಯ್ಯ ಸ್ವಾಮಿ, ನೆನಕ್ಕಿ ವಿರೂಪಾಕ್ಷಪ್ಪ, ಎನ್.ವಿರೂಪಾಕ್ಷಪ್ಪ, ಜಿ.ಮಲ್ಲಿಕಾರ್ಜುನಗೌಡ, ವಿ.ಹನುಮೇಶ, ಜೆ.ಯರ್ರಿಸ್ವಾಮಿ, ಲಕ್ಷ್ಮಣ, ಸದ್ದಾಂ,
ಜಲಾಲಿಬಾಷಾ, ಎನ್.ಕುಮಾರ್, ಎ.ಮಲ್ಲನಗೌಡ, ಬಿ.ಸಣ್ಣ ಈರಯ್ಯ, ಆರ್.ವೆಂಕಟೇಶ, ಮೌಲಾಸಾಬ್, ವಿ.ತಿಪ್ಪಯ್ಯ, ಲಿಂಗನಗೌಡ, ಬಿ.ಮಲ್ಲಯ್ಯ, ಎಚ್. ಬಂಡಾರಿ, ರಾರಾವಿ ವೆಂಕಟೇಶ್, ಕೊಳ್ಳಿ ಪವಾಡಿನಾಯ್ಕ, ಸಲೀಂ, ಮುತ್ತು, ಟೈಲರ್
ಶಶಿ, ಶೇಖರ್, ಲಕ್ಷೇಶ, ಖಾಜಾಪೀರ್, ಗುಜ್ರಿ ಮೌಲಾಸಾಬ್, ಬಿ.ಮಾಬುಸಾಬ್, ಪಂಚಾಕ್ಷರಿಗೌಡ, ಶಿವಪ್ಪ, ಬಿಚುಗತ್ತಿ ಮಲ್ಲಯ್ಯ, ದಾನಪ್ಪ, ಶೇûಾವಲಿ, ಬಕ್ಕಾಟೆ ಈರಯ್ಯ, ದಾನಪ್ಪ, ರμàಕ್, ಖಾದರ್ ಬಾಷಾ ಸೇರಿದಂತೆ ಶಾಲಾ- ಕಾಲೇಜು ವಿದ್ಯಾರ್ಥಿಗಳು
ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.