ಚೌಡಯ್ಯ ಕಾಯಕದಲ್ಲಿ ದೈವತ್ವ ಕಂಡ ಶರಣರು
ನೇರ, ನಿಷ್ಠುರ ವಚನಗಳಿಂದ ಸಮಾಜ ತಿದ್ದುವ ಕಾರ್ಯ: ಪ್ರಸನ್ನಕುಮಾರ್
Team Udayavani, Jan 23, 2021, 6:03 PM IST
ಹರಪನಹಳ್ಳಿ: ಅಂಬಿಗರ ಚೌಡಯ್ಯ ನಾಡು ಕಂಡ ಅಪರೂಪದ ಶರಣ. ಜಾತ್ಯತೀತ ಸಮಾಜ ಕಟ್ಟಬೇಕೆನ್ನುವ ಉದ್ದೇಶದಿಂದ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ಸಮಾಜದಲ್ಲಿನ ಮೂಢನಂಬಿಕೆ, ಡಾಂಭಿಕತನ, ಲೋಪದೋಷ ತೊಲಗಿಸಿ ನೇರ, ನಿಷ್ಠುರ ವಚನ ರಚಿಸುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ ಎಂದು ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಗುರುವಾರ ಏರ್ಪಡಿಸಲಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ನಿಜಶರಣ ಅಂಬಿಗರ ಚೌಡಯ್ಯನವರು ಕಾಯಕದಲ್ಲಿ ದೆ„ವತ್ವ ಕಂಡವರು. ಜಾತಿ, ಮತ, ಪಂಥದ ಹೆಸರಿನಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಕಂದಾಚಾರಗಳನ್ನು ತೊಲಗಿಸಿ, ವಚನಗಳ ಮೂಲಕ ಸಮಾಜದಲ್ಲಿ ಲೋಪದೋಷಗಳನ್ನು ತಿದ್ದಿ, ಸಮಾಜ ಸುಧಾರಣೆಗೆ ಶ್ರಮಿಸಿದವರು. ಅಂಬಿಗರ ಚೌಡಯ್ಯನವರ ಹೆಸರೆ ವಚನಗಳ ನಾಮಾಂಕಿತವಾಗಿತ್ತು. ಅದರಕ್ಕೆ ಕವಿ, ಉದರಕ್ಕೆ ಸಿಹಿ ಎನ್ನುವ ಹಾಗೆ ಅವರ ವಚನಗಳು ನೇರ ನಿಷ್ಠುರವಾಗಿದ್ದರೂ ವಚನಗಳಲ್ಲಿನ ಸಾರ ಅರ್ಥಪೂರ್ಣವಾಗಿತ್ತು ಎಂದರು. ತಹಶೀಲ್ದಾರ್ ಎಲ್.ಎಂ.ನಂದೀಶ್ ಮಾತನಾಡಿ, ಕಾಯಕತತ್ವ, ಸದಾಚಾರ, ಸನ್ಮಾರ್ಗದಿಂದ ಸಂಪಾದನೆ, ಇದ್ದುದರಲ್ಲಿ ತೃಪ್ತಿಪಡುವುದರ ಮೂಲಕ ಆದರ್ಶ ಬದುಕನ್ನು ಸಾಗಿಸಬೇಕು ಎನ್ನುವುದೇ ಅಂಬಿಗರ ಚೌಡಯ್ಯನವರ ಸಂದೇಶವಾಗಿತ್ತು ಎಂದರು.
ವಕೀಲ ಕಣವಿಹಳ್ಳಿ ಮಂಜುನಾಥ, ತಾಲೂಕು ಮಟ್ಟದ ವಿವಿಧ ಅ ಧಿಕಾರಿಗಳು, ಕಂದಾಯ ಇಲಾಖೆಯ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
“ಕೈ’ ಬಿಡದ ಸಂಡೂರು ಮತದಾರ; ಬಿಜೆಪಿಗೆ ಜಯದ ಕಾತರ: 13 ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.