ಬಿಜೆಪಿಯವರಿಗೆ ತಕ್ಕ ಉತ್ತರ ನೀಡಿ: ಲಾಡ್
ಸಂಡೂರಿನ ಎಲ್ಲ ರಸ್ತೆಗಳ ಕಾಮಗಾರಿ ಪೂರ್ಣ•ಸಮಪಾಲು-ಸಮಬಾಳು ಕಾಂಗ್ರೆಸ್ ತತ್ವ
Team Udayavani, May 28, 2019, 10:14 AM IST
ಸಂಡೂರು: ವಾರ್ಡ್ ನಿವಾಸಿಗಳನ್ನು ಉದ್ದೇಶಿಸಿ ಮಾಜಿ ಸಚಿವ ಸಂತೋಷ್ ಲಾಡ್, ಈ.ತುಕಾರಾಂ ಮಾತನಾಡಿದರು.
ಸಂಡೂರು: ಸುಳ್ಳು ಭರವಸಗಳನ್ನೇ ನೀಡಿ ಮತ ಕೇಳಲು ಬರುತ್ತಿರುವ ಬಿಜೆಪಿ ಪಕ್ಷದವರಿಗೆ ತಕ್ಕ ಉತ್ತರ ನೀಡಿ ಎಂದು ಸಂತೋಷ್ ಲಾಡ್ ತಿಳಿಸಿದರು.
ಪಟ್ಟಣದ 13,14 ಹಾಗೂ ಇತರ ವಾರ್ಡ್‌ಗಳಲ್ಲಿ ಬಹಿರಂಗ ಪ್ರಚಾರ ನಡೆಸಿ ಬಳಿಕ ಮಾತನಾಡಿದ ಅವರು, ಸಂತೋಷ್ ಲಾಡ್ ಎಂದೂ ಸಹ ಜಾತಿವಾದಿಯಲ್ಲಿ, ಧರ್ಮ ವಿರೋಧಿಯೂ ಅಲ್ಲ, ಟಿಕೆಟ್ ಸಿಗದ ಕೆಲವು ಮುಸ್ಲಿಂ ಸಹೋದರರು ಸಂತೋಷ್ ಲಾಡ್ ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ. ತಾಲೂಕಿನಾದ್ಯಂತ ಎಲ್ಲ ಹುದ್ದೆಗಳನ್ನು ಮುಸ್ಲಿಂ ಬಾಂಧವರಿಗೆ ನೀಡಿದ್ದೇವೆ. ತಾಪಂ ಅಧ್ಯಕ್ಷರಾಗಿ, ವಾಡಾ ಅಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ನಾಮನಿರ್ದೇಶನ ಸದಸ್ಯರಾಗಿ, ತಾಪಂ ಸದಸ್ಯರಾಗಿ ಮುಸ್ಲಿಂ ಬಾಂಧವರನ್ನು ಆಯ್ಕೆ ಮಾಡಿದ್ದೇವೆ. ಆದರೆ ಕೆಲವರು ವೈಯಕ್ತಿಕ ಕಾರಣಕ್ಕೆ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಡೂರಿಗೆ ತುಂಗಭದ್ರಾ ನೀರು ತರಲು 50 ಕಿಮೀ ಪೈಪ್ ಹಾಕಿ ನೀರು ತಂದಿದ್ದೇವೆ. ಸಂಡೂರಿನ ಎಲ್ಲಾ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಿದ್ದೇವೆ. 100 ಹಾಸಿಗೆ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯ ಒದಗಿಸಲಾಗಿದೆ. ಪ್ರತಿ ಹೋಬಳಿಯಲ್ಲಿ 3 ವಸತಿ ಶಾಲೆ ನಿರ್ಮಿಸಿದ್ದೇವೆ. ನಮ್ಮಿಂದ ಕಿತ್ತುಕೊಳ್ಳಲು ಯತ್ನಿಸಿದ್ದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರವನ್ನು ಉಳಿಸಿದ್ದೇವೆ. ಶುದ್ಧ ಕುಡಿಯುವ ನೀರನ್ನು ನೀಡಿದ್ದೇವೆ. ಆದರೂ ಸಹ ಜನತ ಸುಳ್ಳು ಮಾತಿಗೆ ಮಾರುಹೋಗಿ ಬಿಜೆಪಿಗೆ ಬೆಂಬಲ ನೀಡುವುದು ಸರಿಯಲ್ಲ. ನಿಮ್ಮ ಆಶೀರ್ವಾದದಿಂದ ರಾಜಕೀಯಕ್ಕೆ ಬಂದಿದ್ದೇವೆ. ಇಲ್ಲಿಯೇ ಹುಟ್ಟಿದ್ದೇವೆ. ಇಲ್ಲಿಯೇ ಸಾಯುತ್ತೇವೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಮಾತನಾಡಿ, ಸಂಡೂರಿನ ಪೂರ್ಣ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ನಿಮ್ಮ ಬೆಂಬಲವೇ ನಮ್ಮ ಕೆಲಸಕ್ಕೆ ಸ್ಫೂರ್ತಿಯಾಗಿದೆ. ಎಲ್ಲಾ ವರ್ಗದ ಜನತೆಗೆ ಸಮಪಾಲು ಸಮಬಾಳು ತತ್ವ ಅಳವಡಿಸಿಕೊಂಡು ಹೋಗುತ್ತಿದ್ದು, ಆದ್ದರಿಂದ ಕಾಂಗ್ರೆಸ್ ಬೆಂಬಲಿಸಲು ಮನವಿ ಮಾಡಿದರು. ವಾರ್ಡ್ ಸದಸ್ಯರು, ಕಾಂಗ್ರೆಸ್ ಮುಖಂಡರಾದ ರೋಷನ್ ಜಮೀರ್, ಸಿ.ಎಚ್.ಪೀರಾ, ಇತರ ಹಲವಾರು ಗಣ್ಯರು ಪ್ರಚಾರದಲ್ಲಿ ಭಾಗಿಗಳಾಗಿ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.