ಮನಸೆಳೆಯುತ್ತಿವೆ ಗುಲ್‌ಮೋಹರ್ ಹೂಗಳು
ರಸ್ತೆ ಬದಿಯಲ್ಲಿ ನೋಡಿದಲ್ಲೆಲ್ಲ ಕೆಂಪು ಹೂಗಳ ದರ್ಶನ
Team Udayavani, May 16, 2022, 3:38 PM IST
ಸಿರುಗುಪ್ಪ: ಮೇ ತಿಂಗಳಲ್ಲಿಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ನೋಡಿದಲ್ಲೆಲ್ಲ ಈಗ ಕೆಂಪು ಪುಷ್ಪಗಳು ಸೂಜಿಗಲ್ಲಿನಂತೆ ಗಮನ ಸೆಳೆಯುತ್ತಿವೆ.
ಮೇಫ್ಲವರ್ ಎಂದೇ ಕರೆಯಲ್ಪಡುವ ಗುಲ್ ಮೋಹರ್ ಹೂ ಅರಳುವ ಸಮಯ ಇದಾಗಿದ್ದು, ನಗರ ಸೇರಿದಂತೆ ಗ್ರಾಮ, ರಸ್ತೆ, ಹೊಲ, ಗದ್ದೆ, ಶಾಲೆಗಳ ಬಳಿ ಗುಲ್‌ಮೋಹರ್ ಅರಳಿರುವುದು ಈಗ ಕಾಣಸಿಗುತ್ತದೆ. ಉಷ್ಣವಲಯದ ಮರವಾಗಿರುವ ಇದು ಪ್ರಪಂಚದ ಎಲ್ಲೆಡೆ ಬೆಳೆಯುತ್ತದೆ. ಮದುವೆ, ಹಬ್ಬ ಮತ್ತು ಗೃಹ ಪ್ರವೇಶದ ಸಂದರ್ಭದಲ್ಲಿ ಇದರ ಹೂ ಗೊಂಚಲನ್ನು ಕಿತ್ತು ಚಪ್ಪರಗಳ ಮೇಲೆ ಅಲಂಕರಿಸುವ ಪರಂಪರೆ ಗ್ರಾಮೀಣ ಭಾಗಗಳಲ್ಲಿ ಇನ್ನೂ ಉಳಿದಿದೆ. ಸುಮಾರು 10-60ಅಡಿ ಎತ್ತರ ಬೆಳೆಯುವ ಇದನ್ನು ಪಾರ್ಕ್‌ಗಳಲ್ಲಿ ಮತ್ತು ರಸ್ತೆಗಳ ಬದಿಯಲ್ಲಿ ಹೆಚ್ಚಾಗಿ ಬೆಳೆಸಲಾಗುತ್ತದೆ. ಇದು ಕೆಂಪು ಹೂ, ಕಿತ್ತಳೆಗೆಂಪು, ಕೇಸರಿ ಲತೆಗಳು, ಹಸಿರು ವೃಕ್ಷಕ್ಕೆ ಬಾಸಿಂಗ ತೊಡಿಸಿದಂತೆ ಆಕರ್ಷಕವಾಗಿ ಕಾಣುತ್ತದೆ.
ಮಳೆಗಾಲದ ಮುಂಜಾವಿನ ರಸ್ತೆಯಲ್ಲಿ ಪುಷ್ಪಗಳು ಉದುರಿದಾಗ ಪುಷ್ಪದ ಚಾದಾರ ಎದ್ದುಕಾಣುತ್ತದೆ. ಹಳದಿ ಮತ್ತು ಬಿಳಿ ಹೂಗಳ ಸಂತತಿ ಕಾಣಬಹುದು, ಇದರ ಪುಷ್ಪ ಪಾತ್ರೆಯನ್ನು ಕಿತ್ತು ಇದರೊಳಗಿನ ಕೇಸರದ ಕೊಕ್ಕೆಯನ್ನು ತೆಗೆದು ಆಟವಾಡುವ ಸಂಭ್ರಮ ಗ್ರಾಮೀಣ ಭಾಗದಲ್ಲಿ ಇಂದಿಗೂ ಕಾಣಬಹುದಾಗಿದೆ.
ಅವರೆ ಕಾಯಿಯಂತಹ ಉದ್ದನೆಯ ಕತ್ತಿ ಆಕಾರದ ಕೋಡು, ಸಣ್ಣ ಗಾತ್ರದ 20-30 ಬೀಜಗಳನ್ನು ಹೊಂದಿರುತ್ತದೆ. 5 ಸೆಂ.ಮೀ. ಉದ್ದ ಬೆಳೆಯುವ ಹಸಿರು ಬಣ್ಣದ ಕೋಡು ಬಲಿತಾಗ ಕಡು ಕಂದು ಬಣ್ಣ ಹೊಂದಿದರೆ ಮರದ ಕಾಂಡ ಬೂದಿ ಮಿಶ್ರಿತ ಕಂದು ಬಣ್ಣ ಪಡೆಯುತ್ತದೆ. ಬೀಜ ಮತ್ತು ರೆಂಬೆ ನೆಟ್ಟು ಹೊಸ ಸಸ್ಯ ಬೆಳೆಸಬಹುದು. ಅಲಂಕಾರಕ್ಕೆ ಇಲ್ಲವೆ ನೆರಳಿಗಾಗಿ ಸಾಲು ಮರದಂತೆ ಬೆಳೆಸುತ್ತಾರೆ. ಮೇ, ಜೂನ್, ಜುಲೈಗಳಲ್ಲಿ ಹೂಗಳಿಂದ ಜನರನ್ನು ಆಕರ್ಷಿಸುವ ಈ ಮರ ವರ್ಷಪೂರ್ತಿ ನೆರಳು ನೀಡುತ್ತವೆ. ಬೇಸಿಗೆಯ ದಾಹ ನೀಗಲು ಸಂಜೆ ಮತ್ತು ಬೆಳಿಗ್ಗೆ ವಾಯು ವಿಹಾರಿಗಳು ನಡೆದಾಡುವಾಗ ಮರದ ನೆರಳಿನಲ್ಲಿ ಸ್ವಲ್ಪ ಸಮಯ ಕುಳಿತು ವಿಶ್ರಮಿಸುತ್ತಾರೆ. ನಗರದ ಕೃಷ್ಣನಗರ, ಮಹಾವೀರ ನಗರ ಬಡಾವಣೆಯಲ್ಲಿ ಗುಲ್ ಮೋಹರ್ ಲತೆಗಳು ಹಸಿರು ವೃಕ್ಷಕ್ಕೆ ಕೆಂಪು ಛತ್ರಿ ತೊಟ್ಟಂತೆ ಜನರನ್ನು ಆಕರ್ಷಿಸುತ್ತದೆ. ಬೀಜದಿಂದ ಉತ್ಪಾದಿಸುವ ಅಂಟು ಎಣ್ಣೆಯನ್ನು ಜವಳಿ, ಚರ್ಮ, ಸಾಬೂನು, ಔಷಧ ಮೊದಲಾದ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ.
ಈ ವೃಕ್ಷದ ಮೂಲ ಮಡಗಾಸ್ಕರ್, ಸೆಭಾಷಿಯೇ ಕುಟುಂಬದ ಸೀತಂತಿನಿಯೋಯಿಡೆ ಉಪ ಕುಟುಂಬಕ್ಕೆ ಸೇರಿದೆ. ಇದರ ಸಸ್ಯ ಶಾಸ್ತ್ರೀಯ ಹೆಸರು ಡೊಲೋನಿಕ್ಸ್ ರೇಜಿಯಾ, ಕನ್ನಡದಲ್ಲಿ ಕತ್ತಿಕಾಯಿ, ಹಿಂದಿಯಲ್ಲಿ ಗುಲ್‌ಮೋಹರ್, ಬೆಂಕಿ ಮರ, ದೊಡ್ಡ ರತ್ನಗಂದಿ, ಸೀಮೆ ಸಂಕೇಶ್ವರ, ಕೃಷ್ಣಾಚುರ, ರಾಧಾಚುರ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ
-ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.