ಮಕ್ಕಳ ಸಾವಯವ ಕೃಷಿ ಮಾದರಿಗೆ ಪ್ರಶಸ್ತಿ
Team Udayavani, Sep 23, 2018, 5:29 PM IST
ಹಗರಿಬೊಮ್ಮನಹಳ್ಳಿ: ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಿಂದ ಪಟ್ಟಣದ ರೇಣುಕಾ ಕಾಲೇಜಿನಲ್ಲಿ ನಡೆದ ವಿಜ್ಞಾನ ಮಾದರಿ ವಸ್ತುಪ್ರದರ್ಶನದಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆ ವಿದ್ಯಾರ್ಥಿಗಳ ವಿಜ್ಞಾನದ ಮಾದರಿಗಳು ವಿಶೇಷ ಆಕರ್ಷಣೆ ಪಡೆದಿದ್ದವು.
ಸಾವಯವ ಕೃಷಿ, ಆರೋಗ್ಯ , ನಿರ್ವಹಣೆ ಸೇರಿದಂತೆ ಒಟ್ಟು 6 ವಿಭಾಗಗಳಲ್ಲಿ ತಾಲೂಕಿನ 24 ಪ್ರೌಢಶಾಲೆ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಮಾದರಿ ವಸ್ತುಗಳನ್ನು ಪ್ರದರ್ಶಿಸಿದರು. ವ್ಯವಸಾಯ ಮತ್ತು ಸಾವಯವ ಕೃಷಿ ವಿಭಾಗದಲ್ಲಿ ಬ್ಯಾಸಿಗೆದೇರಿ ಶಾಲೆ ಆರ್.ಜಿ.ಚೇತನಾ ಮತ್ತು ತಂಡ ಸಿದ್ಧಪಡಿಸಿದ ವಿಜ್ಞಾನದ ಪ್ರಥಮ ಸ್ಥಾನ ಪಡೆಯಿತು. ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದಲ್ಲಿ ಪಟ್ಟಣದ ಪ್ರಸಿದ್ಧಿ ಶಾಲೆ ವಿದ್ಯಾರ್ಥಿಗಳಾದ ಹಿತೇಶ್ ತಂಡ, ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ವಟ್ಟಮ್ಮನಹಳ್ಳಿ ನಾಗರಾಜ ತಂಡ, ತ್ಯಾಜ್ಯ ನಿರ್ವಹಣೆ ಕುರಿತ ವಿಜ್ಞಾನದ ಮಾದರಿಯಲ್ಲಿ ಅಲಬೂರು ಶಾಲೆ ಮಧುರಾ ಮತ್ತು ತಂಡ, ಸಾರಿಗೆ ಮತ್ತು ಸಂಪರ್ಕ ವಿಭಾಗದಲ್ಲಿ ಪ್ರಸಿದ್ಧಿ ಶಾಲೆ ಚೇತನ ಮತ್ತು ತಂಡ, ಗಣಿತಶಾಸ್ತ್ರದಿಂದ ವಿನ್ಯಾಸಗೊಳಿಸುವಿಕೆ ಅಂಕಸಮುದ್ರ ಶಾಲೆ ರೇಣುಕಾ ತಂಡ ರಚಿಸಿದ್ದ ವಿಜ್ಞಾನ ಮಾದರಿಗಳು ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವು.
ರೇಣುಕಾ ಶಾಲೆಯಿಂದ ಸಿದ್ಧಪಡಿಸಿದ ಜೈವಿಕ ಗೊಬ್ಬರ ಮತ್ತು ಇಂಧನವಾಗಿ ಪಾಚಿ ಬಳಕೆ, ವಿಟಮಿನ್‌ಯುಕ್ತ ಆಹಾರ, ಸಿರಿಧಾನ್ಯಗಳು, ಆದರ್ಶ ವಿದ್ಯಾಲಯದ ಸ್ವಯಂಚಾಲಿನ ಬೀದಿದೀಪ, ಗಣಿತಶಾಸ್ತ್ರ ಬಳಸಿ ಪ್ರದೇಶದಿಂದ ಪ್ರದೇಶಕ್ಕೆ ಕಡಿಮೆ ದೂರದ ಮಾರ್ಗ ಪತ್ತೆ, ತ್ಯಾಜ್ಯ ನಿರ್ವಹಣೆ ಮಾದರಿ ವಿಶೇಷ ಆಕರ್ಷಣೆ ಪಡೆದವು. ವಸ್ತುಪ್ರದರ್ಶನದಲ್ಲಿ ಜೈವಿಕ ಕ್ರಿಯಾ ಘಟಕದಿಂದ ಸಾವಯವ ಗೊಬ್ಬರದ ಉತ್ಪಾದನೆ, ಸೂರ್ಯಕಾಂತಿ ಸೌರವಿದ್ಯುತ್ ಕೋಶ, ಸೌರಶಕ್ತಿಯಿಂದ ಬೀದಿ ದೀಪದ ಬೆಳಕು, ವಿವಿಧ ಕೃಷಿ ಸಾಧನಗಳು, ಜೀವಾಮೃತದಲ್ಲಿ ಸೂಕ್ಷ್ಮಾಣು ಜೀವಿಗಳು ಎಂಬುವ ಪ್ರದರ್ಶನ ಗಮನ ಸೆಳೆದವು.
ಡಯಟ್‌ನ ಜಿಲ್ಲಾ ನೋಡೆಲ್ ಅಧಿಕಾರಿ ಹುಚ್ಚಪ್ಪ ಹುಲಿಬಂಡಿ ವಿಜೇತರಿಗೆ ವಿತರಿಸಿ ಮಾತನಾಡಿದರು. ತಾಲೂಕು ನೋಡೆಲ್ ಅಧಿಕಾರಿ ಎಚ್.ಮುಸ್ತಾಕ್ ಅಹಮದ್, ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ್, ಮುಖ್ಯ ಶಿಕ್ಷಕರಾದ ಕೊಟ್ರಯ್ಯ, ಚಂದ್ರೇಗೌಡ, ನಾಗರಾಜ, ವಿಜ್ಞಾನ ಶಿಕ್ಷಕರಾದ ಸಂತೋಷ್‌ಕುಮಾರ್, ವಿಜಯಲಕ್ಷ್ಮೀ ಸುಕುಮುನಿ ಸ್ವಾಮಿ, ರವಿಚಂದ್ರ ನಾಯ್ಕ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.