9 ಲಕ್ಷ ಮನೆಗಳ ನಿರ್ಮಾಣ: ಶ್ರೀರಾಮುಲು
Team Udayavani, Mar 3, 2022, 5:03 PM IST
ಬಳ್ಳಾರಿ: ನಗರದ ಬಸವನಕುಂಟೆ ಪ್ರದೇಶದಲ್ಲಿಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಆವಾಸ್‌ಯೋಜನೆ-ಸರ್ವರಿಗೂ ಸೂರು (ನಗರ) ಯೋಜನೆಅಡಿಯಲ್ಲಿ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ1260 ಮನೆಗಳ ನಿರ್ಮಾಣ ಕಾರ್ಯಕ್ಕೆ ಜಿಲ್ಲಾಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮಂಗಳವಾರಭೂಮಿಪೂಜೆ ನೆರವೇರಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ಪ್ರತಿ ಮನೆಗೆ ತಗಲುವ ವೆಚ್ಚ 6.97ಲಕ್ಷರೂಗಳಾಗಲಿದ್ದು, ಎಸ್ಸಿ/ಎಸ್ಟಿ ಫಲಾನುಭವಿಗಳಿಗೆಕೇಂದ್ರ ಸರ್ಕಾರ 1.50ಲಕ್ಷ, ರಾಜ್ಯ ಸರ್ಕಾರ 2 ಲಕ್ಷರೂ. ಎಸ್ಸಿಪಿ/ಟಿಎಸ್ಪಿ ಸಹಾಯಧನ 75 ಸಾವಿರಒದಗಿಸಲಿದ್ದು, ಫಲಾನುಭವಿ ವಂತಿಗೆ (ಶೇ.10)69,700 ರೂ. ಭರಿಸಲಿದ್ದಾರೆ. ಬ್ಯಾಂಕ್ ಸಾಲ 2.2 ಲಕ್ಷರೂ. ಒದಗಿಸಲಾಗುತ್ತದೆ. ಅದೇ ರೀತಿ ಅಲ್ಪಸಂಖ್ಯಾತರುಹಾಗೂ ಇತರೆ ವರ್ಗದವರಿಗೆ ಕೇಂದ್ರದ1.50ಲಕ್ಷ ರೂ., ರಾಜ್ಯ ಸರ್ಕಾರ 1.20ಲಕ್ಷ ರೂ.ಸಹಾಯಧನ ಒದಗಿಸಲಿದ್ದು, ಫಲಾನುಭವಿ ವಂತಿಗೆ(ಶೇ.15)1.04ಲಕ್ಷ ರೂ. ಭರಿಸಲಿದ್ದಾರೆ.
ಬ್ಯಾಂಕ್‌ಸಾಲ 3.22ಲಕ್ಷ ರೂ. ಒದಗಿಸಲಾಗುತ್ತದೆ. ಇದರಿಂದಸುಸಜ್ಜಿತ ಮನೆಯನ್ನು ನಿರ್ಮಿಸಿಕೊಳ್ಳಬಹುದಾಗಿದೆಎಂದವರು ತಿಳಿಸಿದರು.ಕಳೆದ 2017-18ನೇ ಸಾಲಿನಲ್ಲಿ ಕರ್ನಾಟಕಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಳ್ಳಾರಿನಗರದಲ್ಲಿ 14688 ಲಕ್ಷ ರೂ.ಗಳ ವೆಚ್ಚದಲ್ಲಿ 2801ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಈಸಾಲಿನಲ್ಲಿ ಬಳ್ಳಾರಿ ನಗರದಲ್ಲಿ 23086 ಲಕ್ಷ ರೂ.ಗಳ ವೆಚ್ಚದಲ್ಲಿ 3511 ಮನೆಗಳು ನಿರ್ಮಿಸಲುಉದ್ದೇಶಿಸಲಾಗಿದೆ ಎಂದರು.
ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 10,194ಕೋಟಿ ರೂ. ವೆಚ್ಚದಲ್ಲಿ 9.74ಲಕ್ಷ ಮನೆಗಳನ್ನುನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇವುಗಳನ್ನು3 ವರ್ಷದೊಳಗೆ ನಿರ್ಮಿಸುವ ಗುರಿಯನ್ನು ಸರ್ಕಾರಹಾಕಿಕೊಂಡಿದೆ. ಬಳ್ಳಾರಿ ನಗರದಲ್ಲಿ 1264 ಮನೆಗಳಿಗೆಭೂಮಿಪೂಜೆ ನೆರವೇರಿಸಲಾಗಿದ್ದು, ಉಳಿದ ಮನೆಗಳಕಾಮಗಾರಿಯೂ ಶೀಘ್ರ ಆರಂಭಿಸಲಾಗುವುದು ಎಂದಸಚಿವ ಶ್ರೀರಾಮುಲು, ಬಳ್ಳಾರಿ ನಗರದ 60 ಸ್ಲಂಗಳ50 ಸಾವಿರ ಜನರಿಗೆ ಹಕ್ಕುಪತ್ರಗಳನ್ನು ಅದಷ್ಟು ಶೀಘ್ರವಿತರಿಸಲಾಗುವುದು ಎಂದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ2022-23ರೊಳಗೆ ಗುಡಿಸಲು ಮುಕ್ತ ಭಾರತ ಕನಸುಕಂಡಿದ್ದು, ಅದರಂತೆ ಬಳ್ಳಾರಿ ನಗರದಲ್ಲಿ ಗುಡಿಸಲಿನಲ್ಲಿವಾಸಿಸುತ್ತಿರುವ ಬಡ ಜನರಿಗೆ ವಿವಿಧ ಯೋಜನೆಗಳಡಿಮನೆಗಳನ್ನು ಒದಗಿಸುವುದಕ್ಕೆ ನಮ್ಮ ಸರ್ಕಾರ ಆದ್ಯತೆನೀಡಿದೆ ಎಂದರು.ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಪಾಲನ್ನ,ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕೊಳಗೇರಿಅಭಿವೃದ್ಧಿ ಮಂಡಳಿ ಅಧಿ ಕಾರಿಗಳು ಮತ್ತಿತರರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.