ಸಾರ್ವತ್ರಿಕ ಮುಷ್ಕರಕ್ಕೆ ಬಳ್ಳಾರಿಯಲ್ಲಿ ಬೆಂಬಲ
Team Udayavani, Mar 10, 2022, 4:36 PM IST
ಬಳ್ಳಾರಿ: ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕವಿರೋಧಿ ಕಾರ್ಮಿಕ ಸಂಹಿತೆಗಳನ್ನುರದ್ದುಗೊಳಿಸಲು ಆಗ್ರಹಿಸಿ ಖಾಸಗೀಕರಣ ಹಾಗೂಇತರೆ ಜನ ವಿರೋಧಿ ನೀತಿಗಳನ್ನು ವಿರೋಧಿ ಸಿ,ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಒತ್ತಾಯಿಸಿ ಮಾ.28, 29 ರಂದು ಎರಡುದಿನಗಳ ಕಾಲ ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆಕರೆ ನೀಡಲಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲೂಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಮುಖಂಡರಾದ ಜೆ.ಸತ್ಯಬಾಬು, ಎ.ದೇವದಾಸ್,ಆದಿಮೂರ್ತಿ, ಕೆ.ತಾಯಪ್ಪ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸರ್ಕಾರಗಳ ಈ ಜನವಿರೋಧಿ ಮತ್ತುಕಾರ್ಪೋರೇಟ್ ಪರ ನೀತಿ ನಿಯಮಾವಳಿಗಳವಿರುದ್ಧ ಒಂದು ಒಗ್ಗಟ್ಟಿನ ಮತ್ತುದೀರ್ಘಕಾಲಿನ ಚಳವಳಿ ಬೆಳೆಸುವುದು ಇವತ್ತಿನಅವಶ್ಯಕತೆಯಾಗಿದೆ. ಹಲವು ಹೋರಾಟಗಳಿಂದಗಳಿಸಿದ್ದ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಫ್ಯಾಸಿವಾದಿಬಿಜೆಪಿ ಸರ್ಕಾರದ ದಾಳಿಗಳನ್ನು ಎದುರಿಸಲುಜನರು ಬೀದಿಗಿಳಿಯುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಕೇಂದ್ರೀಯ ಕಾರ್ಮಿಕಸಂಘಟನೆಗಳು ಕರೆ ನೀಡಿರುವ ಮಾರ್ಚ್28 ಮತ್ತು 29ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕಮುಷ್ಕರಕ್ಕೆ ಎಲ್ಲ ಯೂನಿಯನ್‌ಗಳ ಕಾರ್ಮಿಕರುಭಾಗವಹಿಸಿ ಯಶಸ್ವಿಗೊಳಿಸುವ ಮೂಲಕಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು.ಖಾಸಗೀಕರಣ ಸ್ಥಗಿತಗೊಳಿಸಬೇಕು.
ಎನ್‌ಎಂಪಿಯನ್ನು ರದ್ದುಗೊಳಿಸಬೇಕು. ತೆರಿಗೆಪಾವತಿಸದ ಕುಟುಂಬಗಳಿಗೆ ತಿಂಗಳಿಗೆ 7500 ರೂ.ಗಳ ಪರಿಹಾರ, ಆದಾಯ ಬೆಂಬಲ ನೀಡಬೇಕು.ಉದ್ಯೋಗ ಖಾತ್ರಿಯನ್ನು ನಗರ ಪ್ರದೇಶಗಳಿಗೂವಿಸ್ತರಿಸಬೇಕು ಎಂದು ರಾಜ್ಯ, ಕೇಂದ್ರ ಸರ್ಕಾರಗಳಮೇಲೆ ಒತ್ತಡ ಹೇರಬೇಕು ಎಂದವರುಕೋರಿದರು.ಸುದ್ದಿಗೋಷ್ಠಿಯಲ್ಲಿ ಎಲ್‌ಐಸಿ ಯೂನಿಯನ್‌ಕಾರ್ಯದರ್ಶಿ ಡಿ.ವಿ.ಸೂರ್ಯನಾರಾಯಣ,ಎಐಯುಟಿಯುಸಿ ಮುಖಂಡರಾದಡಾ| ಪ್ರಮೋದ್, ಎ.ಶಾಂತಾ, ಕಾರ್ಮಿಕಮುಖಂಡರಾದ ಕಾಂತಯ್ಯ, ಪತ್ತಾರ್, ಪಾಂಡು,ಸಂಗನಕಲ್ಲು ಕಟ್ಟೆಬಸಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.