ನಾಲ್ಕು ದಿನಗಳ ಆಮರಣಾಂತ ಸತ್ಯಾಗ್ರಹ ಅಂತ್ಯ
Team Udayavani, Oct 24, 2021, 2:01 PM IST
ಬಳ್ಳಾರಿ: ಎಸ್‌ಟಿ ಮೀಸಲಾತಿ ಹೆಚ್ಚಿಸುವಂತೆಒತ್ತಾಯಿಸಿ ನಗರದ ಡಿಸಿ ಕಚೇರಿ ಎದುರು ಎಸ್‌ಟಿಮೀಸಲಾತಿ ಹೋರಾಟ ಸಮಿತಿ ಕಳೆದ ನಾಲ್ಕುದಿನಗಳಿಂದ ಹಮ್ಮಿಕೊಂಡಿದ್ದ ಆಮರಣಾಂತ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಶನಿವಾರ ಅಂತ್ಯಗೊಳಿಸಲಾಯಿತು.
ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಕೂಡ್ಲಿಗಿ ಶಾಸಕಎನ್.ವೈ. ಗೋಪಾಲಕೃಷ್ಣ, ಮಾಜಿ ಶಾಸಕ ನಾರಾಸೂರ್ಯನಾರಾಯಣರೆಡ್ಡಿ, ವಾಲ್ಮೀಕಿ ಪೀಠದಮರಡಿ ಜಂಬಯ್ಯ ನಾಯಕ ಅವರು, ಸತ್ಯಾಗ್ರಹಕ್ಕೆಕೂತಿದ್ದ ಯುವ ಮುಖಂಡರಾದ ಬಿ.ಆರ್.ಎಲ್.ಶ್ರೀನಿವಾಸ್, ಗಡ್ಡಂ ತಿಮ್ಮಪ್ಪ ಅವರಿಗೆ ಮನವೊಲಿಸಿ ಎಳೆನೀರು ಕುಡಿಸುವ ಮೂಲಕ ಆಮರಣಾಂತ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎನ್.ವೈ. ಗೋಪಾಲಕೃಷ್ಣ, ವಾಲ್ಮೀಕಿ ಸಮುದಾಯಕ್ಕೆಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7.5ಕ್ಕೆಹೆಚ್ಚಿಸಬೇಕೆಂಬ ಸಮುದಾಯದ ಬೇಡಿಕೆನ್ಯಾಯಯುತವಾಗಿದೆ. ಇಂಥ ಹೋರಾಟವು ಸಹನಡೆಯಲೇಬೇಕಿತ್ತು. ಅದು ಬಳ್ಳಾರಿಯಿಂದಲೇನಡೆದಿರುವುದು ಇಲ್ಲಿನ ನಾಯಕರ ಕೆಚ್ಚನ್ನುತೋರಿಸುತ್ತದೆ.
ಮೀಸಲಾತಿ ಹೆಚ್ಚಳಕ್ಕಾಗಿ ಸತ್ಯಾಗ್ರಹಕೈಗೊಂಡಿರುವ ಯುವ ಮುಖಂಡರಾದ ಬಿ.ಆರ್.ಎಲ್.ಶ್ರೀನಿವಾಸ್, ಗಡ್ಡಂ ತಿಮ್ಮಪ್ಪ ಅವರುಹೋರಾಟವನ್ನು ಆರಂಭಿಸಿದ್ದಾರೆ. ಮುಂದೆ ಇನ್ನುಸಾಕಷ್ಟು ಇದೆ. ಸಮುದಾಯದ ಎಲ್ಲ ಶಾಸಕರನ್ನುಬೆಂಗಳೂರಿನಲ್ಲಿ ಸಭೆ ಕರೆದು ಒಮ್ಮತದ ನಿರ್ಣಯಕೈಗೊಂಡು ಅದಕ್ಕೊಂದು ಮಾರ್ಗಸೂಚಿಗಳನ್ನು ರೂಪಿಸಬೇಕು. ಮುಖ್ಯಮಂತ್ರಿಗಳನ್ನು ಸಹಭೇಟಿಯಾಗಿ ಒತ್ತಡ ಹೇರಲಾಗುವುದು ಎಂದವರು ಭರವಸೆ ನೀಡಿದರು.
ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಮಾತನಾಡಿ, ಸತ್ಯಾಗ್ರಹ ನಡೆಸಿರುವಶ್ರೀನಿವಾಸ್ ಪಾಲಿಕೆ ಚುನಾವಣೆಗೂ ಮುನ್ನ ನನ್ನಬಳಿಗೆ ಬಂದಿದ್ದರು. ನಾನೇ ಟಿಕೆಟ್ ಕೊಡಿಸಿದೆ.
ಅವರು ಜಯಗಳಿಸಿ ಬಂದಿದ್ದಾರೆ. ಅಲ್ಲಿವರೆಗೂಶ್ರೀನಿವಾಸ್ ಎಂದರೆ ಯಾರಿಗೂ ಗೊತ್ತಿರಲಿಲ್ಲ.ವಾಲ್ಮೀಕಿ ಶ್ರೀಗಳಿಗೆ ನೂರು ಕೆಜಿ ತುಲಾಭಾರಮಾಡಿಸಿದ್ದೇನೆ. ಸಮುದಾಯದ ಬೇಡಿಕೆನ್ಯಾಯಯುತವಾಗಿದೆ ಎಂದು ತಿಳಿಸಿದರು.
ವಾಲ್ಮೀಕಿ ಪೀಠದ ಧರ್ಮದರ್ಶಿ ಮರಡಿಜಂಬಯ್ಯ ನಾಯಕ ಮಾತನಾಡಿ, ಅ.20ರಂದು ನಡೆದ ವಾಲ್ಮೀಕಿ ಜಯಂತಿಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕಾರ ಹಾಕಿಆಮರಣಾಂತ ಸತ್ಯಾಗ್ರಹ ಕೂತಿರುವುದುಬಳ್ಳಾರಿಯಲ್ಲೇ ಮೊದಲು. ಈ ಮೊದಲುಸ್ವಾಮೀಜಿಗಳ ನೇತೃತ್ವದಲ್ಲಿ 20 ದಿನಗಳ ಕಾಲ400 ಕಿಮೀ ಪಾದಯಾತ್ರೆ ನಡೆಸಿ, ವಿಧಾನಸೌಧಕ್ಕೆಮುತ್ತಿಗೆ ಹಾಕಿದ್ದೇವೆ.
1958ರಿಂದ ಸಮುದಾಯಕ್ಕೆಶೇ.3 ರಷ್ಟು ಮೀಸಲಾತಿ ನೀಡಲಾಗಿದ್ದು, ಅದುಇಂದಿಗೂ ಮುಂದುವರೆದಿದೆ. ಬಾಕಿ ಉಳಿದಿರುವಮೀಸಲಾತಿಯನ್ನು ನೀಡುವಂತೆ ಕಳೆದ 30ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಮೀಸಲಾತಿಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದರೂ, ಬೇರೆ ರಾಜ್ಯಗಳಲ್ಲಿ ಹೆಚ್ಚಿಸಲಾಗಿದೆ.
ಈ ನಿಟ್ಟಿನಲ್ಲಿರಾಜ್ಯ ಸರ್ಕಾರವು ಕ್ರಮಕೈಗೊಳ್ಳಬೇಕು ಎಂದವರುಆಗ್ರಹಿಸಿದರು.ಸತ್ಯಾಗ್ರಹದಲ್ಲಿ ವಿ.ಎಸ್.ಶಿವಶಂಕರ್,ಮುಖಂಡರಾದ ಅಸುಂಡಿ ಹೊನ್ನೂರಪ್ಪ,ಜಗನ್ನಾಥ್, ವಿಜಯಕುಮಾರ್, ಎರಗುಡಿಮಲ್ಲಯ್ಯ, ರುದ್ರಪ್ಪ, ಹುಲಿಗೇಶಿ,ವಿಜಯಕುಮಾರ್ ಸೇರಿದಂತೆ ಸಮುದಾಯದನೂರಾರು ಜನರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.