ಪುನೀತ್ ಹೆಸರಲ್ಲಿ ಶಾಲೆ-ಆಸ್ಪತ್ರೆ
Team Udayavani, Nov 9, 2021, 7:45 PM IST
ಬಳ್ಳಾರಿ: ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜ್‌ಕುಮಾರ್ ನಿಧನರಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಮಾಜಿ ಸಚಿವಜಿ. ಜನಾರ್ಧನರೆಡ್ಡಿ, ಅವರ ಹೆಸರಲ್ಲಿ ಬಳ್ಳಾರಿಯಲ್ಲಿ ಬಡ ಮಕ್ಕಳಿಗಾಗಿ ಉಚಿತ ವಸತಿ ಶಾಲೆ ತೆರೆಯುವ,ಆಸ್ಪತ್ರೆ ಸ್ಥಾಪಿಸುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ನಗರ ಹೊರವಲಯದ ಬೆಳಗಲ್ಲು ರಸ್ತೆಯಲ್ಲಿನರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಮೆಮೋರಿಯಲ್‌ವಿಶ್ವಭಾರತಿ ಕಲಾನಿಕೇತನ ಬುದ್ಧಿಮಾಂದ್ಯ ಮಕ್ಕಳಶಾಲೆ ಆವರಣದಲ್ಲಿ ಸೋಮವಾರ ನಡೆದಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪತ್ನಿ ಲಕ್ಷ್ಮಿ ಅರುಣಾ,ನಗರ ಶಾಸಕ, ಸಹೋದರ ಜಿ.ಸೋಮೇಖರರೆಡ್ಡಿ ಅವರೊಂದಿಗೆ ಜನಾರ್ಧನರೆಡ್ಡಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ನಟ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆಇಂತಹ ಕಾರ್ಯಕ್ರಮ ಮಾಡುವ ಸಂದರ್ಭಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಪುನೀತ್‌ಅವರು ರಾಜ್ಯ ಕಂಡಿರುವ ಅಪೂರ್ವ ಕಲಾವಿದ.ಪಾಕಿಸ್ಥಾನದಲ್ಲೂ ಇಂಜಿನೀಯರ್ ಒಬ್ಬರು ಪುನೀತ್‌ಅಭಿಮಾನಿಯಾಗಿದ್ದರು. ಡಾ| ರಾಜ್‌ಕುಮಾರ್‌ಚಿತ್ರಗಳಿಂದ ಸಂಸ್ಕಾರ ಪಡೆದಂತೆ ಪುನೀತ್ ಅವರಚಿತ್ರಗಳು ಸಹ ಸಾಮಾಜಿಕ ಕಳಕಳಿಯಿಂದ ಕೂಡಿದ್ದವು.
ನನ್ನ ಮಗನ ಚಿತ್ರರಂಗ ಪ್ರವೇಶಕ್ಕೆ ಸಂಬಂಧಿಸಿದಂತೆಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದರು.ಹೀಗೆ ಕೊನೆಯ ದಿನಗಳಲ್ಲಿ ತುಂಬ ಹತ್ತಿರವಾಗಿದ್ದರುಎಂದ ಜನಾರ್ಧನರೆಡ್ಡಿ, ಹಂಪಿಯಲ್ಲಿ ಹಮ್ಮಿಕೊಂಡಿದ್ದಶ್ರೀಕೃಷ್ಣದೇವರಾಯರ 500ನೇ ಪಟ್ಟಾಭಿಷೇಕದಲ್ಲಿಗಣ್ಯವ್ಯಕ್ತಿಗಳಿದ್ದ ವೇದಿಕೆಯಲ್ಲಿ ಪುನೀತ್ ಅವರಿಗೆಸನ್ಮಾನಿಸಿದ್ದನ್ನು ಮೆಲುಕು ಹಾಕಿದರು. ಅವರಿಗೆಪದ್ಮಶ್ರೀ ಪ್ರಶಸ್ತಿ ಕೊಡಿಸಲು ಸರ್ಕಾರ ತನ್ನ ಕೆಲಸಮಾಡಲಿ ಎಂದರು.
ಪುನೀತ್ ಅವರು 16ಕ್ಕೂ ಹೆಚ್ಚು ವೃದ್ಧಾಶ್ರಮಗಳನ್ನುನಡೆಸುತ್ತಿದ್ದರು. 2 ಸಾವಿರಕ್ಕೂ ಹೆಚ್ಚು ಬಡ ಮಕ್ಕಳಿಗೆಉಚಿತವಾಗಿ ವಿದ್ಯಾಭ್ಯಾಸ ಕೊಡಿಸುತ್ತಿದ್ದರು.ಲೆಕ್ಕವಿಲ್ಲದಷ್ಟು ಜನರಿಗೆ ದಾನಧರ್ಮಗಳನ್ನುಮಾಡಿದ್ದಾರೆ. ಹೀಗೆ ಸೇವಾ ಕಾರ್ಯಕ್ರಮದಲ್ಲಿತೊಡಗಿರುವ ಪುನೀತ್ ಅವರು ನಮ್ಮೆಲ್ಲರಕಣ್ತೆತೆರೆಸಿದ್ದಾರೆ. ಹಾಗಾಗಿ ಅವರಂತೆ ನಾವು ಸಹಬಳ್ಳಾರಿಯಲ್ಲಿ ಉಚಿತ ಶಿಕ್ಷಣ ನೀಡಲು ಶೀಘ್ರದಲ್ಲೇಶಾಲೆ ತೆರೆಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರ ಶಾಸಕ ಜಿ.ಸೋಮಶೇಖರ ರೆಡ್ಡಿಮಾತನಾಡಿ, ನಟ ಪುನೀತ್ ರಾಜ್‌ಕುಮಾರ್,ಸಹೋದರ ಜನಾರ್ಧನರೆಡ್ಡಿ ಇಬ್ಬರ ಕನಸು ಒಂದೇ ಆಗಿದೆ. ಜನಾರ್ದನರೆಡ್ಡಿ 1996ರಲ್ಲೇ ಬಳ್ಳಾರಿಯಲ್ಲಿ ವೃದ್ಧಾಶ್ರಮ ಸ್ಥಾಪಿಸಿ ಸೇವೆಯಲ್ಲಿ ತೊಡಗಿದ್ದಾರೆ.ಪುನೀತ್ 46 ವರ್ಷಕ್ಕೆ ಮೃತಪಟ್ಟಿರುವುದು ನೋವುತಂದಿದೆ. ಬಳ್ಳಾರಿಯ ಹೊಸ ಬಸ್ ನಿಲ್ದಾಣಕ್ಕೆಪುನೀತ್ ಅವರ ಹೆಸರನ್ನು ಇಡಲು ಸರ್ಕಾರದ ಜತೆಗೆಸಮಾಲೋಚನೆ ನಡೆಸಲಾಗುವುದು ಎಂದ ಅವರು,ತಂದೆಯವರ ಮಾತಿನಂತೆ ಕೆಎಂಎಫ್ ಜಾಹೀರಾತನ್ನುಉಚಿತವಾಗಿ ಮಾಡಿಕೊಟ್ಟಿದ್ದರು.
ಬಳ್ಳಾರಿಯಲ್ಲಿ ರಾಜ್‌ಕುಮಾರ್ ಪಾರ್ಕ್, ರಸ್ತೆಗೆ ರಾಜ್‌ಕುಮಾರ್ ಹೆಸರುನಾಮಕರಣ ಮಾಡಿದಾಗಿನಿಂದ ನಮ್ಮೊಡನೆ ಉತ್ತಮಬಾಂಧವ್ಯ ಹೊಂದಿದ್ದರು ಎಂದು ಸ್ಮರಿಸಿದರು. ಬಳಿಕವೃದ್ಧಾಶ್ರಮದಲ್ಲಿನ ವೃದ್ಧರಿಗೆ ಬಟ್ಟೆಗಳನ್ನು ವಿತರಿಸಿದರು.ಬುಡಾ ಅಧ್ಯಕ್ಷ ಪಾಲಣ್ಣ ಸೇರಿ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.