ಶಾಲಾ ಅಂಗಳದಲ್ಲಿರುವ ಗುಂಡಿಗಳಿಂದ ಅಪಾಯ!
Team Udayavani, Sep 11, 2021, 2:54 PM IST
ಸಿರುಗುಪ್ಪ: ತಾಲೂಕಿನ ಶಾನವಾಸಪುರ ಗ್ರಾಮದವ್ಯಾಪ್ತಿಯಲ್ಲಿ ಬರುವ ಸಿರಿಗೇರಿ ಕ್ರಾಸ್‌ನಲ್ಲಿರುವಸರ್ಕಾರಿ ಪ್ರೌಢಶಾಲೆ ಅಂಗಳದಲ್ಲಿ ಬಿಸಿಯೂಟದಕೋಣೆಗಳನ್ನು ನಿರ್ಮಿಸಲು ಗುಂಡಿಗಳನ್ನು ತೆಗೆದುಮೂರು ತಿಂಗಳಾದರೂ ಕೋಣೆ ನಿರ್ಮಾಣವಾಗಿಲ್ಲ.
ತೆಗೆದ ಗುಂಡಿಗಳನ್ನು ಮುಚ್ಚಿಲ್ಲ. ಇದರಿಂದಾಗಿವಿದ್ಯಾರ್ಥಿಗಳಿಗೆ ತೊಂದರೆಯುಂಟಾಗುತ್ತಿದೆ.ಈ ಪ್ರೌಢಶಾಲೆಯಲ್ಲಿ 8-10ನೇ ತರಗತಿಯಲ್ಲಿಒಟ್ಟು 260 ವಿದ್ಯಾರ್ಥಿಗಳು ವಿದ್ಯಾಭ್ಯಾಸಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರ ಪ್ರೌಢಶಾಲೆ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದರಿಂದಪ್ರತಿನಿತ್ಯವೂ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ.
ಈ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸಲು ಕೋಣೆ ಇರುವುದಿಲ್ಲ. ಆದ್ದರಿಂದಬಿಸಿಯೂಟದ ಕೋಣೆಯನ್ನು ಉದ್ಯೋಗ ಖಾತ್ರಿಯೋಜನೆಯಡಿ ಶಾನವಾಸಪುರ ಗ್ರಾಪಂ ವತಿಯಿಂದನಿರ್ಮಿಸಲು ಮುಂದಾಗಿದ್ದು, ಬಿಸಿಯೂಟದ ಕೋಣೆನಿರ್ಮಾಣಕ್ಕಾಗಿ ಪಿಲ್ಲರ್ ಅಳವಡಿಸಲು ಆಳವಾದಗುಂಡಿಗಳನ್ನು ತೆರೆದಿದ್ದಾರೆ.
ಆದರೆ ಇಲ್ಲಿವರೆಗೆ ಶಾಲೆಗೆ ವಿದ್ಯಾರ್ಥಿಗಳುಬಾರದೇ ಇರುವುದರಿಂದ ಶಾಲಾ ಆಡಳಿತ ಮಂಡಳಿಬಿಸಿಯೂಟದ ಕೋಣೆಗಾಗಿ ತೆಗೆದ ಗುಂಡಿಗಳ ಬಗ್ಗೆಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ ಈಗ ಶಾಲೆಆರಂಭವಾಗಿದ್ದು ವಿದ್ಯಾರ್ಥಿಗಳು ಬರುತ್ತಿದ್ದಾರೆ.ಅಂಗಳದಲ್ಲಿ ವಿದ್ಯಾರ್ಥಿಗಳು ಆಟವಾಡುವಸಂದರ್ಭದಲ್ಲಿ ಗುಂಡಿಗೆ ಬಿದ್ದು ಅಪಾಯವಾಗುವಸಾಧ್ಯತೆ ಇರುವುದರಿಂದ ಗ್ರಾಮ ಪಂಚಾಯಿತಿಅಧಿಕಾರಿಗಳನ್ನು ಕಂಡು ಕಾಮಗಾರಿ ಮುಗಿಸಿಕೊಡಿ ಅಥವಾ ಗುಂಡಿಗಳನ್ನು ಮುಚ್ಚಿ ಎಂದು ಶಿಕ್ಷಕರು ಒತ್ತಾಯ ಮಾಡುತ್ತಿದ್ದಾರೆ.
ಆದರೆ ಗ್ರಾಪಂಅಧಿಕಾರಿಗಳು ಮತ್ತು ಆಡಳಿತ ಮಂಡಳಿಯು ಶಿಕ್ಷಕರಒತ್ತಾಯಕ್ಕೆ ಕ್ಯಾರೆ ಎನ್ನುತ್ತಿಲ್ಲ. ಇದರಿಂದಾಗಿ ಇಲ್ಲಿನವಿದ್ಯಾರ್ಥಿಗಳು ಭಯದಲ್ಲಿಯೇ ಅಂಗಳದಲ್ಲಿ ಆಟಆಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರುತಿಂಗಳ ಹಿಂದೆ ಬಿಸಿಯೂಟದ ಕೊಠಡಿ ನಿರ್ಮಾಣಕ್ಕೆಗುಂಡಿಗಳನ್ನು ತೆಗೆಯಲಾಗಿದೆ. ಆದರೆ ಕೊಠಡಿನಿರ್ಮಾಣವಾಗಿಲ್ಲ. ಈ ಗುಂಡಿಗಳು ವಿದ್ಯಾರ್ಥಿಗಳ ಪ್ರಾಣಕ್ಕೆ ಅಪಾಯ ತರುವ ಸಾಧ್ಯತೆ ಇರುವುದರಿಂದಈ ಗುಂಡಿಗಳನ್ನು ಮುಚ್ಚಬೇಕು ಅಥವಾ ಕೊಠಡಿನಿರ್ಮಾಣ ಕಾರ್ಯ ಮುಗಿಸಬೇಕೆಂದು ವಿದ್ಯಾರ್ಥಿಗಳಪಾಲಕ ಶಿವಕುಮಾರಗೌಡ ಒತ್ತಾಯಿಸಿದ್ದಾರೆ.
ಆರ್.ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.