ಉಪ್ಪಾರ ಪ್ರತಿಭಾ ಪುರಸ್ಕಾರ ನಾಡಿದ್ದು
Team Udayavani, Dec 24, 2021, 9:05 PM IST
ಬಳ್ಳಾರಿ: ರಾಜ್ಯ ಉಪ್ಪಾರ ಮಹಾಸಭಾದಿಂದಡಿ.26 ರಂದು ಧಾರವಾಡ ಮಯೂರಆದಿತ್ಯ ರೆಸಾರ್ಟ್‌ನಲ್ಲಿ ರಾಜ್ಯದ ಮಟ್ಟದಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದ್ದು, ಸಮುದಾಯದಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಮಹಾಸಭಾ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‌ಕುಮಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2020-2021ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.80 ಕ್ಕಿಂತಹೆಚ್ಚು ಅಂಕ ಗಳಿಸಿದ್ದ ಸಮುದಾಯದವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದರಾಜ್ಯಾದ್ಯಂತ 1437 ಅರ್ಜಿಗಳು ಆನ್‌ಲೈನ್‌ಮೂಲಕ ಸಲ್ಲಿಕೆಯಾಗಿವೆ. ಈ ಪೈಕಿ ಬಳ್ಳಾರಿಜಿಲ್ಲೆಯಿಂದಲೂ 48 ಅರ್ಜಿಗಳು ಬಂದಿದ್ದು,ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೂ,ಪುಸ್ತಕ, ಪೆನ್ನು, ಮೆಡಲ್‌ನ್ನು ನೀಡಿ ಸನ್ಮಾನಿಸಿಪೊÅàತ್ಸಾಹಿಸಲಾಗುವುದು.
ಜತೆಗೆ ಮಾಹಿತಿಕೊರತೆಯಿಂದ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗದವಿದ್ಯಾರ್ಥಿಗಳಿಂದಲೂ ಅವರ ಅಂಕಪಟ್ಟಿ ಸೇರಿಹಲವು ದಾಖಲೆಗಳನ್ನು ವಾಟ್ಸ್‌ಆ್ಯಪ್‌ನಲ್ಲೇತರಿಸಿಕೊಂಡು ಅಂತಹ ವಿದ್ಯಾರ್ಥಿಗಳಿಗೂಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದುಎಂದವರು ವಿವರಿಸಿದರು.ಮಹಾಸಭಾದಿಂದ ಬಡತನರೇಖೆಗಿಂತ ಕೆಳಗಿರುವ ಕುಟುಂಬಗಳಿಂದಮಕ್ಕಳನ್ನು ದತ್ತು ಪಡೆಯಲಾಗುತ್ತದೆ.ಈಗಾಗಲೇ 15 ಮಕ್ಕಳನ್ನು ದತ್ತು ಪಡೆದುಶಿಕ್ಷಣ ಕೊಡಿಸಲಾಗುತ್ತಿದ್ದು, 8 ವಿದ್ಯಾರ್ಥಿಗಳುಪಿಯುಸಿ, ಉಳಿದವರು ಬಿ.ಕಾಂ ವ್ಯಾಸಂಗಮಾಡುತ್ತಿದ್ದಾರೆ.
ಮಹಾಸಭಾದಿಂದಸಮುದಾಯದ ಆಸಕ್ತ ವಿದ್ಯಾರ್ಥಿಗಳಿಗೆಕೆಎಎಸ್, ಪಿಎಸ್‌ಐ ಸ್ಪರ್ಧಾತ್ಮಕ ಪರೀಕ್ಷೆಗಳಿಗೆತರಬೇತಿ ಕೊಡಿಸಲಾಗುತ್ತಿದೆ ಎಂದುತಿಳಿಸಿದರು.ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ರಾಜ್ಯದಎಲ್ಲ ಜಿಲ್ಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು,ಅವರ ಪೋಷಕರು ಸಾವಿರಾರು ಸಂಖ್ಯೆಯಲ್ಲಿಆಗಮಿಸಲಿದ್ದಾರೆ.
ಭಗೀರಥ ಪೀಠದಗುರುಗಳಾದ ಪುರುಷೋತ್ತಮಾನಂದಸ್ವಾಮೀಜಿಗಳು, ಉಪ್ಪಾರ ಸಮಾಜದ ಸರ್ವಪೂಜ್ಯರು, ರಾಜಕೀಯ ಮುಖಂಡರು,ಸಮಾಜದ ಹಿರಿಯರು, ಮಹಿಳಾಮುಖಂಡರು ಮತ್ತು ಯುವ ನಾಯಕರನ್ನುಆಹ್ವಾನಿಸಲಾಗಿದ್ದು, ಎಲ್ಲರೂ ಆಗಮಿಸಿಯಶಸ್ವಿಗೊಳಿಸಬೇಕೆಂದು ಕೋರಿದಅವರು, ಶೀಘ್ರದಲ್ಲೇ ಬಳ್ಳಾರಿ ನಗರದಲ್ಲೂಜಿಲ್ಲಾ ಮಟ್ಟದ ಸಮ್ಮೇಳನ ಆಯೋಜಿಸಿ,ಆಗಲೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆಸನ್ಮಾನಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಭಗೀರಥಉಪ್ಪಾರ ಸಂಘದ ಪ್ರಧಾನಕಾರ್ಯದರ್ಶಿ ದುರುಗೇಶ್, ಯುವಕಸಂಘದ ಅಧ್ಯಕ್ಷ ಯು.ಆದಿತ್ಯ, ನಗರ ಅಧ್ಯಕ್ಷಶ್ರೀರಾಮ, ಯುವ ಮುಖಂಡ ರವಿಕುಮಾರ್,ಬಸವರಾಜ, ಚರಕುಂಟೆ ಈರಣ್ಣ, ಕೃಷ್ಣಪ್ಪ,ಮಲ್ಲಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.