ಎಂಇಎಸ್-ಶಿವಸೇನೆ ಸಂಘಟನೆ ನಿಷೇಧಿಸಿ
Team Udayavani, Dec 29, 2021, 3:18 PM IST
ಬಳ್ಳಾರಿ: ರಾಜ್ಯದಲ್ಲಿ ಎಂಇಎಸ್, ಶಿವಸೇನೆಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡಬಣ) ಕಾರ್ಯಕರ್ತರನ್ನು ಪೊಲೀಸರು ಬಂಧಿ ಸಿಬಿಡುಗಡೆಗೊಳಿಸಿದರು.ನಗರದ ಕರವೇ ಕಚೇರಿಯಿಂದ ಪ್ರತಿಭಟನಾಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು,ಎಂಇಎಸ್, ಶಿವಸೇನೆ ಸಂಘಟನೆಗಳ ವಿರುದ್ಧಘೋಷಣೆ ಕೂಗಿದರು.
ಗಡಗಿ ಚೆನ್ನಪ್ಪ ವೃತ್ತದಲ್ಲಿಕೆಲಹೊತ್ತು ಪ್ರತಿಭಟನೆ ನಡೆಸಿ, ಬಳಿಕ ಅಲ್ಲಿಂದಜಿಲ್ಲಾ ಧಿಕಾರಿ ಕಚೇರಿಗೆ ತಲುಪಿದರು. ಈ ವೇಳೆಜಿಲ್ಲಾ ಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಕಾರ್ಯಕರ್ತರನ್ನು ಪೊಲೀಸರು ಬಂಧಿ ಸಿ,ಪೊಲೀಸ್ ವಾಹನಗಳಲ್ಲಿ ಹತ್ತಿಸಿಕೊಂಡು ಡಿಎಆರ್‌ಮೈದಾನಕ್ಕೆ ಕರೆದೊಯ್ದು ಕೆಲಹೊತ್ತಿನ ಬಳಿಕಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಅಪರಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್ ಅವರಿಗೆ ಮನವಿಸಲ್ಲಿಸಿದರು.
ಭಾಷಾವಾರು ಪ್ರಾಂತ್ಯ ವಿಂಗಡಣೆಯನಂತರ ಮಹಾರಾಷ್ಟ್ರ ರಾಜಕಾರಣಿಗಳು, ಅಲ್ಲಿನಸರ್ಕಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿಪದೇಪದೇ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಬಂದಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣಸಮಿತಿ ಎಂಬ ಸಂಘಟನೆ/ರಾಜಕೀಯ ಪಕ್ಷವನ್ನುಹುಟ್ಟುಹಾಕಿ ಅದಕ್ಕೆ ಮಹಾರಾಷ್ಟ್ರದಿಂದ ಹಣಕಾಸಿನನೆರವು ಹರಿಸಿ ಬೆಳಗಾವಿಯ ಕನ್ನಡಿಗರ ಮೇಲೆಮರಾಠಿಗರನ್ನು ಎತ್ತಿಕಟ್ಟಿ ಹಲವು ದಶಕಗಳಿಂದದ್ವೇಷದ ವಾತಾವರಣವನ್ನು ಸೃಷ್ಟಿಸಲಾಗಿದೆ.
ಎಂಇಎಸ್ ಜತೆಗೆ ಶಿವಸೇನೆ ಎಂಬ ರಾಜಕೀಯಪಕ್ಷದ ಘಟಕವೂ ಬೆಳಗಾವಿಯಲ್ಲಿ ಅಶಾಂತಿಯನ್ನುಉಂಟು ಮಾಡುತ್ತಿದೆ. ಹೀಗಾಗಿ ಈ ಎರಡೂಸಂಘಟನೆ, ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕುಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನುಒತ್ತಾಯಿಸಿದರು. ನಮ್ಮ ಸಂಘಟನೆ ಎಂಇಎಸ್,ಶಿವಸೇನೆಗಳು ನಡೆಸುತ್ತಿರುವ ನಾಡದ್ರೋಹಿ,ದೇಶದ್ರೋಹಿ ಕೃತ್ಯಗಳ ವಿರುದ್ಧ ಕಳೆದ ಎರಡುದಶಕಗಳಿಂದ ಹೋರಾಟ ನಡೆಸುತ್ತ ಬಂದಿದೆಯಲ್ಲದೆಇವುಗಳನ್ನು ನಿಷೇಧಿ ಸಬೇಕೆಂದು ಆಗ್ರಹಿಸುತ್ತಲೇ ಇದೆ.ಈಗ ಈ ಎರಡು ಸಂಘಟನೆಗಳ ಸಮಾಜಘಾತಕಕೃತ್ಯಗಳು ಮಿತಿಮೀರಿವೆ.
ರಾಜ್ಯದಲ್ಲಿ ದ್ವೇಷದವಾತಾವರಣ ನಿರ್ಮಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆತಂದಿರುವ ಹಿನ್ನೆಲೆಯಲ್ಲಿ ಸರ್ಕಾರ ತಡಮಾಡದೆ ನಮ್ಮಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.ವೇದಿಕೆ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಅಂಗಡಿಶಂಕರ್, ಶಿವಕುಮಾರ್, ತಿಪ್ಪಾರೆಡ್ಡಿ, ಶಶಿಕುಮಾರಬೆಟ್ಟಪ್ಪ, ರವಿ, ತೋಟದ ವಿರೇಶ್, ಹನುಮಂತರೆಡ್ಡಿ,ಸಿಂ ಗೇರಿ ಗೋವಿಂದ, ಎನ್.ಚಂದ್ರಮೋಹನ್,ಮೋಕಾ ಪಂಪನಗೌಡ, ಚಾಂದ್‌ಬಾಷ, ಬೆಳಗಲ್ಲುವಿರುಪಾಕ್ಷಿಗೌಡ, ಕುಡುತಿನ ಶಿವಕುಮಾರ,ತೋರಣಗಲ್ಲು ರಾಮಕೃಷ್ಣ, ಕಂಪ್ಲಿ ಅಧ್ಯಕ್ಷರುಮಲ್ಲಿಕಾರ್ಜುನ, ಹನುಮಂತ, ಮಾರೆಪ್ಪ, ಕಾಟ್ಟೆಗುಡ್ಡವಿ.ಕುಮಾರ್, ವಿರೇಶ್ ಗೆಣಿಕೆಹಾಳ್, ಗುಡಿಸಲುರಾಜು, ಗೆಣಿಕೆಹಾಳ್ ಹಸೇನ್‌ಸಾಬ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.