ವಾರಾಂತ್ಯ ಕರ್ಫ್ಯೂಗೆ ಉತ್ತಮ ಬೆಂಬಲ
Team Udayavani, Jan 9, 2022, 4:47 PM IST
ಬಳ್ಳಾರಿ: ಹೆಚ್ಚುತ್ತಿರುವ ಕೋವಿಡ್ ಮೂರನೇಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವಿಧಿ ಸಿರುವ “ವೀಕೆಂಡ್ ಕರ್ಫ್ಯೂ’ಗೆಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಸಾರಿಗೆ ಬಸ್, ಆಟೋ, ಸರಕು ಸಾಗಾಣಿಕೆವಾಹನ, ಬೇಕರಿ, ಹಣ್ಣು, ಕಿರಾಣಿ, ಔಷಧಮಳಿಗೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲಮಳಿಗೆಗಳು ಬಂದ್ ಆಗಿದ್ದವು.
ಬಹುತೇಕಜನದಟ್ಟಣೆಯೂ ಕಡಿಮೆಯಾಗಿತ್ತು.ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿಪೊಲೀಸ್ ಇಲಾಖೆ ಶುಕ್ರವಾರ ನಗರದಪ್ರಮುಖ ವೃತ್ತ, ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ರಸ್ತೆಗಳನ್ನು ಬಂದ್ ಮಾಡಿಸಂಚಾರ ಸ್ಥಗಿತಗೊಳಿಸಲಾಗಿದೆ. ಗಡಗಿಚನ್ನಪ್ಪ ವೃತ್ತ, ಬ್ರೂಸ್‌ಪೇಟೆ ಪೊಲೀಸ್‌ಠಾಣೆ ವೃತ್ತ, ಮೋತಿ ವೃತ್ತ, ಎಪಿಎಂಸಿ ರಸ್ತೆ,ಎಸ್‌ಪಿ ವೃತ್ತ ಸೇರಿ ಬಹುತೇಕ ವೃತ್ತಗಳಲ್ಲಿಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು.
ಇದನ್ನು ಬೆಳಗಿನ ಜಾವವೇ ಗಮನಿಸಿದಜನರಲ್ಲಿ ಎರಡು ದಿನಗಳ ಕಾಲ ಕರ್ಫ್ಯೂಖಚಿತಪಡಿಸಿದೆ. ಇದರಿಂದ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಇತ್ತಾದರೂಪ್ರಯಾಣಿಕರ ಕೊರತೆ ಕಾಡುತ್ತಿತ್ತು. ಬಸ್‌ಗಳು ಸಹ ಹೆಚ್ಚಾಗಿ ರಸ್ತೆಗಿಳಿಯದೆ ನಗರದಹೊಸ ಬಸ್ ನಿಲ್ದಾಣ ಬಸ್‌ಗಳಿಲ್ಲದೇ ಬಿಕೋಎನ್ನುತ್ತಿತ್ತು. ಆಟೋಗಳ ಸಂಖ್ಯೆಯೂಬಹುತೇಕ ಕಡಿಮೆಯಾಗಿತ್ತು. ಪೆಟ್ರೋಲ್‌ಬಂಕ್‌ಗಳು ತೆರೆದಿದ್ದವು.
ಚಿತ್ರಮಂದಿರಗಳುಪ್ರದರ್ಶನಗಳನ್ನು ಸ್ಥಗಿತಗೊಳಿಸಿದ್ದವು.ನಗರದ ಪ್ರಮುಖ ಬೆಂಗಳೂರು ರಸ್ತೆಯಲ್ಲಿಬಹುತೇಕ ವಾಣಿಜ್ಯ ಮಳಿಗೆಗಳು ಬಂದ್‌ಆಗಿದ್ದವು. ಕಿರಾಣಿ, ಹಣ್ಣಿನ ಬಂಡಿಗಳು,ಅಂಗಡಿಗಳು ತೆರೆದಿತ್ತಾದರೂ, ಗ್ರಾಹಕರಕೊರತೆ ಕಾಡುತ್ತಿತ್ತು. ಇನ್ನು ಬಟ್ಟೆ,ಚಿನ್ನಾಭರಣ ಸೇರಿ ಇನ್ನಿತರೆ ವಾಣಿಜ್ಯಮಳಿಗೆಗಳು, ಬಾರ್, ರೆಸ್ಟೋರೆಂಟ್‌ಗಳು,ಹೊಟೇಲ್‌ಗಳು, ಟೀ ಸ್ಟಾಲ್‌ಗಳು ಬಂದ್‌ಆಗಿದ್ದವು. ಎಪಿಎಂಸಿಯಲ್ಲೂ ಕಿರಾಣಿಅಂಗಡಿಗಳನ್ನು ಹೊರತುಪಡಿಸಿ ಬಹುತೇಕಮಳಿಗೆಗಳು ಬಂದ್ ಆಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.