26ಕ್ಕೆ ನಂದಿನಿ ಸಮೃದ್ದಿ ಹಾಲು ಮಾರುಕಟ್ಟೆಗೆ
Team Udayavani, Jan 12, 2022, 5:25 PM IST
ಬಳ್ಳಾರಿ: ರಾಯಚೂರು, ಬಳ್ಳಾರಿ, ವಿಜಯನಗರ,ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟದಿಂದ ಶೇ.6ರಷ್ಟು ಜಿಡ್ಡಿನಾಂಶವುಳ್ಳ ಕೆನೆಭರಿತ “ನಂದಿನಿ ಸಮೃದ್ಧಿ’ಹಾಲನ್ನು ಇದೇ ಜ.26ರಂದು ಮಾರುಕಟ್ಟೆಗೆಬಿಡುಗಡೆಗೊಳಿಸಲಾಗುವುದು ಎಂದು ಒಕ್ಕೂಟದಅಧ್ಯಕ್ಷ, ಶಾಸಕ ಭೀಮಾನಾಯ್ಕ ತಿಳಿಸಿದರು.
ನಗರದ ಒಕ್ಕೂಟದ ಕೇಂದ್ರ ಕಚೇರಿಯಲ್ಲಿಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಒಕ್ಕೂಟದಿಂದ ಈಗಾಗಲೇನಾಲ್ಕು ಮಾದರಿಯ ನಂದಿನಿ ಟೋನ್x ಹಾಲು(ಶೇ.3ರಷ್ಟು ಜಿಡ್ಡಿನಾಂಶ), ನಂದಿನಿ ಶುಭಂ(ಶೇ.4.5 ಜಿಡ್ಡಿನಾಂಶ), ಶುಭಂ ಗೋಲ್ಡ್ (ಶೇ.5ಜಿಡ್ಡಿನಾಂಶ), ನಂದಿನಿ ಸ್ಪೆಷಲ್ ಹಾಲು (ಶೇ.4ಜಿಡ್ಡಿನಾಂಶ) ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ.ಇದೀಗ ಶೇ.6ರಷ್ಟು ಜಿಡ್ಡಿನಾಂಶವುಳ್ಳ ಕೆನೆಭರಿತ”ನಂದಿನಿ ಸಮೃದ್ಧಿ’ ಹಾಲಿಗೆ ಒಕ್ಕೂಟ ವ್ಯಾಪ್ತಿಯಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳಜಿಲ್ಲೆಗಳ ಹೊಟೇಲ್, ಟೀ ಶಾಪ್ ಮಾಲೀಕರು ಮತ್ತುನೆರೆಯ ಆಂಧ್ರ ಪ್ರದೇಶದ ಅನಂತಪುರ, ಕರ್ನೂಲ್,ಕಡಪ ಜಿಲ್ಲೆಗಳು, ತೆಲಂಗಾಣ ರಾಜ್ಯಗಳಿಂದಬೇಡಿಕೆಯಿಟ್ಟಿರುವ ಹಿನ್ನೆಲೆಯಲ್ಲಿ ಇದೇ ಜ.26ರಂದುಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದುಅವರು ವಿವರಿಸಿದರು.
ನಂದಿನಿ ಸಮೃದ್ಧಿ ಹಾಲನ್ನು ಮೊದಲ ದಿನವೇ10 ಸಾವಿರ ಲೀಟರ್ ಹಾಲನ್ನು ಮಾರುಕಟ್ಟೆಗೆಕಳುಹಿಸುವುದಾಗಿ ತಿಳಿಸಿದ ಅಧ್ಯಕ್ಷ ಭೀಮಾನಾಯ್ಕ,ಆಂಧ್ರಕ್ಕೆ 4 ಸಾವಿರ ಲೀಟರ್ ಸರಬರಾಜುಮಾಡಲಾಗುವುದು. ಇದನ್ನು ಕೆಲವೇ ದಿನಗಳಲ್ಲಿ10-15 ಸಾವಿರ ಲೀಟರ್‌ಗೆ ಹೆಚ್ಚಿಸಲಾಗುವುದುವಿಶ್ವಾಸ ವ್ಯಕ್ತಪಡಿಸಿದರು.ಒಕ್ಕೂಟದಲ್ಲಿ ನಾಲ್ಕು ಜಿಲ್ಲೆಗಳಿಂದ ಪ್ರತಿದಿನರೈತರಿಂದ ಸರಾಸರಿ 2 ಲಕ್ಷ ಲೀಟರ್ ಗುಣಮಟ್ಟದಹಾಲು ಸಂಗ್ರಹವಿದ. ಇದರಲ್ಲಿ 1.34 ಲಕ್ಷ ಲೀಟರ್‌ಸಂಸ್ಕರಿಸಿದ, ಪರಿಶುದ್ಧ ಹಾಲನ್ನು ಮಾರುಕಟ್ಟೆಗೆಕಳುಹಿಸಲಾಗುತ್ತಿದ್ದು, ಉಳಿದ ಹಾಲನ್ನುನಂದಿನಿ ಇನ್ನಿತರೆ ಉತ್ಪನ್ನಗಳ ತಯಾರಿಕೆಗೆ ಬಳಕೆಮಾಡಿಕೊಳ್ಳಲಾಗುತ್ತಿದೆ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.