ಯುವಸಮೂಹದ ಸಾಧನೆಗೆ ಸ್ವಾಮಿ ವಿವೇಕಾನಂದರೇ ಆದರ್ಶ
Team Udayavani, Jan 13, 2022, 7:31 PM IST
ಬಳ್ಳಾರಿ: ಗೂಗಲ್ ಸಿಇಒ ಸುಂದರ್ ಪಿಚೈ,ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲ ಮೊದಲಾದಭಾರತೀಯ ಯುವವರ್ಗ ಇಂದು ವಿಶ್ವದ ಅಗ್ರಕಂಪನಿಗಳ ಸಾರಥ್ಯ ವಹಿಸಿರುವುದಕ್ಕೆ ವಿವೇಕಾನಂದರತತ್ವಾದರ್ಶಗಳೇ ಕಾರಣ ಎಂದು ಭೌತಶಾಸ್ತ್ರ ವಿಭಾಗದಪ್ರಾಧ್ಯಾಪಕರು ಮತ್ತು ಐಕ್ಯೂಎಸಿ ನಿರ್ದೇಶಕ ಪ್ರೊ| ಜೆ.ತಿಪ್ಪೇರುದ್ರಪ್ಪ ಅಭಿಪ್ರಾಯ ಪಟ್ಟರು.
ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯವಿವಿಯಲ್ಲಿ ವಿದ್ಯಾರ್ಥಿ ಕಲ್ಯಾಣ ಘಟಕದ ವತಿಯಿಂದಬುಧವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ159ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಯುವಕರಿಂದ ಮಾತ್ರ ದೇಶದ ವಿಕಸನ ಸಾಧ್ಯಎಂದು ವಿವೇಕಾನಂದರು ಹೇಳಿದ್ದರು.
ವೇದ ಮತ್ತುಯೋಗವನ್ನು ಪ್ರಪಂಚದೆಲ್ಲೆಡೆ ಹರಡಿದ ಕೀರ್ತಿವಿವೇಕಾನಂದರಿಗೆ ಸಲ್ಲುತ್ತದೆ. ಸ್ವಾತಂತ್ರÂ ಸಂಗ್ರಾಮದಲ್ಲಿಏಳು, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರುಎಂದು ದೇಶದ ಯುವಕರಿಗೆ ಸ್ವಾಮಿ ವಿವೇಕಾನಂದರುಕರೆ ನೀಡಿದ್ದರು ಎಂದು ಅವರು ಸ್ಮರಿಸಿದರು.ಯುವಜನತೆಯು ವಿವೇಕಾನಂದರ ಗುಣಗಳಾದಕರುಣೆ, ನಿರ್ಭಿಡತೆ, ಬುದ್ಧಿಮತ್ತೆ, ಜವಾಬ್ದಾರಿತನ,ಜ್ಞಾನಾರ್ಜನೆ, ಪ್ರಶ್ನಿಸುವ ಕಲೆ, ಏಕಾಗ್ರತೆಯನ್ನುಮೈಗೂಡಿಸಿಕೊಂಡರೆ ಎಂಥ ಸಾಧನೆಯನ್ನಾದರುಮಾಡಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ| ಸಿದ್ದುಪಿ ಆಲಗೂರ ಮಾತನಾಡಿ, ಭಾರತೀಯ ಸಂಸ್ಕೃತಿ,ಹಿಂದುತ್ವದ ಮಹತ್ವವನ್ನು ಎಲ್ಲೆಡೆ ಪಸರಿಸಿದ ಕೀರ್ತಿಸ್ವಾಮಿ ವಿವೇಕಾನಂದರಿಗೆ ಸಲ್ಲಬೇಕು. ಸ್ವ ಹಿತಾಸಕ್ತಿಗಿಂತಸಮಾಜ, ದೇಶಕ್ಕೆ ಕೊಡುಗೆ ನೀಡಿದಾಗ ಮಹಾನ್‌ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ. ಪ್ರತಿಯೊಬ್ಬರುವಿವೇಕಾನಂದರ ಆದರ್ಶ, ಚಿಂತನೆ ಅಳವಡಿಸಿಕೊಂಡುತಮ್ಮ ಉಜ್ವಲ ಭವಿಷ್ಯ ಹಾಗೂ ಭವ್ಯ ರಾಷ್ಟ್ರ ನಿರ್ಮಾಣಕ್ಕೆಮಾದರಿಯಾಗಬೇಕು ಎಂದು ಕರೆ ನೀಡಿದರು.ಕುಲಸಚಿವ ಪ್ರೊ| ಎಸ್.ಸಿ. ಪಾಟೀಲ್, ಕುಲಸಚಿವ(ಮೌಲ್ಯಮಾಪನ) ಪ್ರೊ|ಶಶಿಕಾಂತ್ ಉಡಿಕೇರಿ, ವಿತ್ತಾಧಿಕಾರಿ ಡಾ| ಕೆ.ಸಿ. ಪ್ರಶಾಂತ್ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.