ವೆಂಕೋಬಿ ಸಂಗನಕಲ್ಲು
Team Udayavani, Feb 11, 2022, 4:22 PM IST
ಬಳ್ಳಾರಿ: ಚುನಾವಣೆ ಬಹಿಷ್ಕರಿಸಿ, ಮತದಾನದ ಹಕ್ಕನ್ನುತ್ಯಜಿಸಿದರೂ ತಾಲೂಕಿನ ಹರಗಿನಡೋಣಿ ಗ್ರಾಮಸ್ಥರಕುಡಿಯುವ ನೀರಿನ ಬವಣೆ ಮಾತ್ರ ನೀಗುತ್ತಿಲ್ಲ. ಕೆರೆ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸುವುದಾಗಿಜನಪ್ರತಿನಿಧಿ ಗಳು ನೀಡಿರುವ ಭರವಸೆಯೂ ಇನ್ನು ದಾಖಲೆಗಳಲ್ಲಿದ್ದು, ವೇಗ ಪಡೆದುಕೊಳ್ಳುತ್ತಿಲ್ಲ.
ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಅನಾದಿಕಾಲದಿಂದಲೂ ಕುಡಿವ ನೀರಿನ ಸಮಸ್ಯೆಯಿದೆ.ವರ್ಷದ ಅರ್ಧ ದಿನಗಳು ಮಳೆಯ ಅಂತರ್ಜಲವನ್ನೇ ಆಶ್ರಯಿಸಿರುವ ಗ್ರಾಮಸ್ಥರು, ಅವು ಬತ್ತಿದ ಬಳಿಕ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಅನಾವರಣಗೊಳ್ಳುತ್ತದೆ.
ಬೇಸಿಗೆಯಮೂರ್‍ನಾಲ್ಕು ತಿಂಗಳುಗಳ ಕಾಲ ಜಿಲ್ಲಾಡಳಿತದಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡುವಕುಡಿಯುವ ನೀರಿಗಾಗಿ ಗ್ರಾಮಸ್ಥರ ನಡುವೆಮಾರಾಮಾರಿಗಳು ನಡೆದಿವೆ. ಊಟ ಮಾಡಿದರೆತಟ್ಟೆಗಳನ್ನು ತೊಳೆಯಲು ನೀರು ಬೇಕಾಗುತ್ತದೆ ಎಂದು ಪೇಪರ್ ಪ್ಲೇಟ್‌ಗಳಲ್ಲಿ ಊಟ ಮಾಡಿ ಬಿಸಾಡಿರುವಹಲವು ಉದಾಹರಣೆಗಳಿವೆ. ಗ್ರಾಮಸ್ಥರು ಇಷ್ಟೆಲ್ಲಸಂಕಷ್ಟ ಎದುರಿಸಿದರೂ ಜೀವಜಲಕ್ಕೆ ಶಾಶ್ವತ ಪರಿಹಾರಇನ್ನೂ ಗಗನಕುಸುಮವಾಗಿದೆ.
ಚುನಾವಣೆ ಬಹಿಷ್ಕರಿಸಿದ್ದ ಗ್ರಾಮಸ್ಥರು: ಗ್ರಾಮದಲ್ಲಿ600ಕ್ಕೂ ಹೆಚ್ಚು ಮನೆಗಳಿದ್ದು, ಅಂದಾಜು 5ಸಾವಿರ ಜನಸಂಖ್ಯೆ ಹೊಂದಿದೆ. ಗ್ರಾಮಕ್ಕೆ ಶಾಸಕರು,ಸಂಸದರು ಯಾರೇ ಭೇಟಿ ನೀಡಿದರೂ, ಶುದ್ಧಕುಡಿವ ನೀರು ಒದಗಿಸಲು ಶಾಶ್ವತ ಪರಿಹಾರಕಲ್ಪಿಸುವಂತೆ ಗ್ರಾಮಸ್ಥರು ಏಕೈಕ ಬೇಡಿಕೆಯನ್ನುಮುಂದಿಟ್ಟಿದ್ದಾರೆ.
ಆದರೆ ಈಡೇರಿಸುವುದಾಗಿಭರವಸೆ ನೀಡುವ ಜನಪ್ರತಿನಿ ಧಿಗಳು ನಂತರಗ್ರಾಮದ ಗೋಜಿಗೆ ಹೋಗಿಲ್ಲ. ಇದರಿಂದ ಬೇಸತ್ತಿದ್ದಗ್ರಾಮಸ್ಥರು, 2018ರಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆನಡೆದ ಉಪಚುನಾವಣೆಯನ್ನು ಬಹಿಷ್ಕರಿಸಿದ್ದರು.ಗ್ರಾಮದಲ್ಲಿ ಸ್ಥಾಪಿಸಿದ್ದ ಎರಡು ಮತಗಟ್ಟೆಗಳಿಗೆಒಬ್ಬರು ಸಹ ಹೋಗಿ ಮತದಾನ ಮಾಡದೆ ಕುಡಿವನೀರಿಗಾಗಿ ತಮ್ಮ ಮತದಾನದ ಹಕ್ಕನ್ನೇ ತ್ಯಜಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು.
ಚುನಾವಣೆ ಬಳಿಕ ಅಂದಿನ ಸಂಸದವಿ.ಎಸ್.ಉಗ್ರಪ್ಪ, ಶಾಸಕ ಬಿ.ನಾಗೇಂದ್ರ ಸಂಬಂಧಪಟ್ಟಅಧಿ ಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿ, ಕೆರೆ ನಿರ್ಮಿಸಿಶಾಶ್ವತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದರು.ಆದರೆ, ಶಾಸಕರ ಅವ ಧಿ ಕೊನೆಗೊಳ್ಳುತ್ತಿದ್ದರೂ, ಕೆರೆಮಾತ್ರ ನಿರ್ಮಾಣಗೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.