ವಾಯು ಮಾಲಿನ್ಯ ತಡೆಗೆ ಒತ್ತಾಯಿಸಿ ಮನವಿ
ತೋರಣಗಲ್ಲು ಜನಪರ ಸಂಘಟನೆಗಳ ಜಂಟಿ ಸಮಿತಿಯಿಂದ ಎಡಿಸಿ ಪಿ.ಎಸ್. ಮಂಜುನಾಥ್‌ರಿಗೆ ಮನವಿ ಸಲ್ಲಿಸಲಾಯಿತು.
Team Udayavani, Jan 25, 2021, 5:46 PM IST
ಬಳ್ಳಾರಿ: ಜಿಲ್ಲೆಯ ಸಂಡೂರು ಮತ್ತು ಕುರುಗೋಡು ತಾಲೂಕಿನ ಕುಡಿತಿನಿ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಜಲ, ವಾಯು ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತೋರಣಗಲ್ಲು ಜನಪರ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಸಂಡೂರು, ಕುರುಗೋಡು ತಾಲೂಕಿನ ತೋರಣಗಲ್ಲು ಮತ್ತು ಕುಡತಿನಿ ಸುತ್ತಮುತ್ತಲು ಇರುವ ಕೈಗಾರಿಕೆಗಳಿಂದ ಹೊರಹೊಮ್ಮುವ ತ್ಯಾಜ್ಯ ಮತ್ತು ಧೂಳಿನ ಕಣಗಳಿಂದ ತೋರಣಗಲ್ಲು, ಸುಲ್ತಾನಪುರ ಗ್ರಾಮದ ಸುತ್ತಾಮುತ್ತ ಜಲ-ವಾಯು ವಿಷಪೂರಿತವಾಗಿವೆ. ದಿನದಿಂದ ದಿನಕ್ಕೆ ವಾಯು ಗುಣಮಟ್ಟದ ಸೂಚ್ಯಂಕ ಎಸ್ 1950 ಎಕ್ಯೂಎ ಹೆಚ್ಚಾಗಿದೆ. ನಾರಿಹಳ್ಳ ಮುಂತಾದ ನಾಲೆಗಳ ಮೂಲಕ ದರೋಜಿ ಕರೆಗೆ ವಿಷ ಪೂರಿತ ತ್ಯಾಜ್ಯ ಹರಿದು ಜಲ ಮಾಲಿನ್ಯವಾಗುತ್ತಿದೆ. ಕುಡಿತಿನಿ ಪಟ್ಟಣದಲ್ಲಿ ಧೂಳಿನಿಂದಾಗಿ ವಾಯು ಮತ್ತು ಕುಡಿಯುವ ನೀರಿನ ಮಾಲಿನ್ಯ ಉಂಟಾಗಿದೆ. ಪರಿಸರ ಮಾಲಿನ್ಯದ ಬಗ್ಗೆ ಕೈಗಾರಿಕೆಗಳ ಮೇಲೆ ಕಾನೂನು ರೀತಿ ಕೇಸು ದಾಖಲಿಸಿ ದಂಡ ವಿಧಿ ಸಿ, ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಆನ್‌ಲೈನ್ ಎಮಿಷನ್ ಮಾನಿಟರಿಂಗ್ ಸಿಸ್ಟಂನ್ನು ಪ್ರಮುಖ ಪರಿಸರ ಮಾಲಿನ್ಯ ಹಾಟ್‌ಸ್ಪಾಟ್ ಸ್ಥಳಗಳಲ್ಲಿ ಅಳವಡಿಸಬೇಕು. ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಸಮಿತಿಯ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಸುಲ್ತಾನಪುರ ಗ್ರಾಮವನ್ನು ಶೀಘ್ರ ಸ್ಥಳಾಂತರ ಮಾಡಬೇಕು. ಸ್ಥಳಾಂತರಗೊಳ್ಳುವರಿಗೆ ಹತ್ತಿರದ ಕೈಗಾರಿಕೆಗಳನ್ನು ಮುಚ್ಚಿಸಬೇಕು. ಕಲ್ಲಿದ್ದಲು ಬಳಸುವ ಕೈಗಾರಿಕೆಗಳು ಹೆಚ್ಚಾಗಿದ್ದು ಫಲವತ್ತಾದ ಮಣ್ಣು ಕೂಡ ಕಲುಷಿತಗೊಂಡು ಕೃಷಿ ಉತ್ಪಾದನೆ ಕುಂಠಿತಗೊಂಡಿದೆ. ಕೃಷಿಗೆ ಪರಿಹಾರ ನೀಡಬೇಕು. ಉತ್ತಮ ತಂತ್ರಜ್ಞಾನವನ್ನು ಬಳಿಸಿ ಗಾಳಿಯಿಂದ ಧೂಳಿನ ಕಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದವರು ಕೋರಿದ್ದಾರೆ. ಈ ಸಂದರ್ಭದಲ್ಲಿ ಸಮಿತಿ ಮುಖಂಡರುಗಳಾದ ಕೆ.ಜಂಬಯ್ಯ, ಜಂಗ್ಲಿ ಸಾಬ್, ಜೆ.ಎಂ. ಚೆನ್ನಬಸಯ್ಯ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.