ಮನಸಿದ್ದರೆ ಸಾಧನೆ ಸುಲಭ
ನಾನಾವಟೆ ವಿದ್ಯಾಸಂಸ್ಥೆಯಲ್ಲಿ ಆದಿತ್ಯ ಅಡಿಗರನ್ನು ಸನ್ಮಾನಿಸಲಾಯಿತು.
Team Udayavani, Feb 8, 2021, 5:42 PM IST
ಸಂಡೂರು: ಸಾಧನೆ ಮಾಡುವ ಮನಸ್ಸಿದ್ದರೆ ಅಸಾಧ್ಯವಾದುದು ಯಾವುದು ಇಲ್ಲ ಎನ್ನುವ ಅಂಶವನ್ನು ಗುದುಗಿನ ಆದಿತ್ಯ ಅಡಿಗ ಮಾಡಿ ತೋರಿಸಿದ್ದು ಅವರ ಸಾಧನೆ ಪ್ರತಿ ವಿದ್ಯಾರ್ಥಿಗೂ ಸ್ಫೂರ್ತಿದಾಯಕವಾದುದು ಎಂದು ಕಾರ್ಯದರ್ಶಿ ಚಿದಂಬರ್ ಎಸ್. ನಾನಾವಟೆ ತಿಳಿಸಿದರು.
ಅವರು ಪಟ್ಟಣದ ಎಸ್.ವಿ. ನಾನಾವಟೆ ಪಿಯು ಕಾಲೇಜು ಹಾಗೂ ನಾನಾವಟೆ ಅಕಾಡೆಮಿಯಿಂದ ಸಿಎ ಮತ್ತು ಸಿಪಿಟಿಯ ಒಂದು ದಿನದ ಕಾರ್ಯಾಗಾರ ಮತ್ತು ಆದಿತ್ಯ ಅಡಿಗರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗದುಗಿನ ಜ್ಯೋತಿಷಿಯಾದ ಚಂದ್ರಶೇಖರ್ ಅಡಿಗ ಮತ್ತು ಸುಜಾತ ಅಡಿಗ ದಂಪತಿ ತಮ್ಮ ಮಗನಿಗೆ ಉತ್ತಮ ಸಂಸ್ಕಾರ ನೀಡಿದ ಪರಿಣಾಮ ಇಂದು ಅವರು ರಾಜ್ಯದಲ್ಲಿಯೇ ಲೆಕ್ಕ ಪರಿಶೋಧನೆ ಪರೀಕ್ಷೆಯಲ್ಲಿ 10ನೇ ರ್‍ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ, ಶಾಲೆಗೆ ಕೀರ್ತಿ ತಂದಿದ್ದಾರೆ. ಅವರ ಈ ಶ್ರಮ ನಮ್ಮ ವಿದ್ಯಾರ್ಥಿಗಳಿಗೂ ತಿಳಿಯಲಿ ಎನ್ನುವ ಉದ್ದೇಶದಿಂದ ಒಂದು ದಿನದ ಕಾರ್ಯಾಗಾರದಲ್ಲಿ ಅವರನ್ನು ಕರೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಕೋರಲಾಗಿದ್ದು ಪೂರ್ಣ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಆದಿತ್ಯ ಅಡಿಗ ಮಾತನಾಡಿ, ವಿಷಯದ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಬೇಕು. ನಿರಂತರ ಅಧ್ಯಯನ ಮತ್ತು ಓದುವಿಕೆಗೆ ಹೆಚ್ಚು ಒತ್ತು ನೀಡಿದಾಗ ಸಮಸ್ಯೆಯನ್ನು ಸರಳವಾಗಿ ನಿಭಾಯಿಸಬಹುದು ಎಂದರು. ಎಸ್ ವಿಎನ್ ಪಿಯು ಕಾಲೇಜ್ ಡೀನ್ ಪಿ.ಎಸ್. ಕುಮಾರರೆಡ್ಡಿ, ಸಿಬಿಎಸ್‌ಇ ಶಾಲೆ ಪ್ರಾಂಶುಪಾಲ ರವಿಕಾಂತ್ ಚಕ್ರಿಗಾರಿ ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಓದಿ: 51 ಸಾವಿರ ಗಡಿ ತಲುಪಿ ದಾಖಲೆ ಬರೆದ ಷೇರುಪೇಟೆ: ಸೆನ್ಸೆಕ್ಸ್ 617 ಅಂಕ ಜಿಗಿತ, ನಿಫ್ಟಿ 15,000
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.