ರಂಗಭೂಮಿ ಮೌಲ್ಯ ಬಿತ್ತುವ ಮಾಧ್ಯಮ
25 ದಿನಗಳ ರಂಗ ತರಬೇತಿ ಶಿಬಿರಕ್ಕೆ ಚಾಲನೆ
Team Udayavani, Feb 15, 2021, 4:34 PM IST
ಬಳ್ಳಾರಿ: ರಂಗಭೂಮಿಯು ಸಂಬಂಧಗಳನ್ನು ಬೆಸೆಯುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಬಿತ್ತುವ ಏಕೈಕ ಮಾಧ್ಯಮವಾಗಿದೆ ಎಂದು ಚಿತ್ರದುರ್ಗದ ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ಅಭಿಪ್ರಾಯ ಪಟ್ಟರು.
ನಗರದ ಡಿಆರ್‌ಕೆ ರಂಗಸಿರಿಯ ರಾಮಕೃಷ್ಣ ವಿಲಾಸ ವೇದಿಕೆಯಲ್ಲಿ ರಂಗಜಂಗಮ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ 25 ದಿನಗಳ ರಂಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಂಗಭೂಮಿಯು ಕಲೆಗಳೆಲ್ಲವನ್ನೂ ತನ್ನೊಡಲೊಳಗೆ ಅಡಗಿಸಿಕೊಂಡಿದೆ. ಇಂದಿನ ತಂತ್ರಜ್ಞಾನ ಯುಗದ ಅಬ್ಬರದಲ್ಲೂ ತನ್ನತನವನ್ನು ಅಚ್ಚಳಿಯದೇ ಸಮಾಜಮುಖೀ ಚಿಂತನೆಯತ್ತ ತೊಡಗಿಸಿಕೊಂಡಿರುವುದು ನಿಜಕ್ಕೂ ಅಭಿಮಾನದ ಸಂಗತಿಯಾಗಿದೆ. ರಂಗಭೂಮಿ ಜೀವಂತ
ಕಲೆಯಾಗಿ ವಾಸ್ತವಾಂಶಗಳನ್ನು ಬಿತ್ತರಿಸುವ ಕಲಾ ಮಾಧ್ಯಮವಾಗಿದೆ. ಮನುಷ್ಯನ ವ್ಯಕ್ತಿತ್ವದ ಹಲವಾರು ವೈವಿಧ್ಯತೆಗಳನ್ನು ಪರಿಚಯಿಸಲಿದೆ. ವ್ಯಕ್ತಿ ವಿಕಸನದತ್ತ ತೆಗೆದುಕೊಂಡು ಹೋಗುವ ಶ್ರೀಮಂತ ಕಲೆಯಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗನಿರ್ದೇಶಕ ಸಾಂಬಶಿವ ದಳವಾಯಿ ಮಾತನಾಡಿ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹೀಗೆ ಪ್ರತಿಯೊಂದು ಕ್ಷೇತ್ರಗಳಿಗೆ ರಂಗಭೂಮಿ ಮೂಲಕ ಜಾಗೃತಿ ಮೂಡಿಸುವ ಕಲಾ ವೇದಿಕೆಯಾಗಿದೆ.
ರಂಗಭೂಮಿ ಕ್ಷೇತ್ರವು ಪ್ರಾಯೋಗಿಕವಾಗಿ ಅಭಿನಯದ ಮೂಲಕ ಗೊತ್ತುಪಡಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಅವಶ್ಯಕತೆ ಇದೆ. ಪಠ್ಯದ ವಿಷಯವಸ್ತುಗಳನ್ನು ವಿದ್ಯಾರ್ಥಿಗಳಿಗೆ
ನೇರವಾಗಿ ಪರಿಚಯಿಸುವ ಸಾಧನೆಗೆ ರಂಗಭೂಮಿ ಉತ್ತಮ ಮಾರ್ಗದರ್ಶಕವಾಗಿದೆ ಎಂದರು.
ವಿಎಸ್‌ಕೆ ವಿವಿ ಪ್ರಾಧ್ಯಾಪಕ ಪ್ರೊ| ಶಾಂತಾನಾಯ್ಕ ಮಾತನಾಡಿ, ಕಥಾವಸ್ತುವನ್ನೇ ಹೊಸ ವಿನ್ಯಾಸದೊಂದಿಗೆ ಪುನಃಶ್ಚೇತನಗೊಳಿಸಿ ಹೊಸ ಅಲೆಯನ್ನು ಎಬ್ಬಿಸಿ ನಾಟಕಗಳನ್ನು ರಚಿಸಿ ಕಾಲದಿಂದ ಕಾಲದ ಬದಲಾವಣೆಗಳನ್ನು ರಂಗಭೂಮಿಯಲ್ಲಿ ತೋರಿಸಲು
ಸಾಧ್ಯವಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿ, ಸಮಕಾಲೀನ ಜನಜೀವನವನ್ನು ಪ್ರತಿಬಿಂಬಿಸುವ ಸಾಮಾಜಿಕ ನಾಟಕ ಕಥೆ ಕಾದಂಬರಿಗಳು ಒಂದು ಸಮುದಾಯದ ಆತ್ಮಚರಿತ್ರೆ ಇದ್ದಂತೆ. ಪ್ರತಿಭೆಗಳನ್ನು ಗುರುತಿಸುವ ಮೂಲಕ ಕನ್ನಡ ನಾಟಕ ಸಾಹಿತ್ಯದಲ್ಲಿ
ಹೊಸ ಸಂಚಲನವನ್ನುಂಟು ಮಾಡಿ ವಿಚಾರವನ್ನು ಅವಲೋಕಿಸುವ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುವ ವಿವಾದಗಳ ಜೊತೆಗೆ ಮಾನವೀಯ ನೆಲೆಗಳನ್ನು ಹುಡುಕುವ ಒಂದು ಕೇಂದ್ರ ರಗಭೂಮಿಯಾಗಿದೆ ಎಂದು ತಿಳಿಸಿದರು.
ರಂಗಜಂಗಮ ಸಂಸ್ಥೆ ಅಧ್ಯಕ್ಷ ವಿಷ್ಣು ಹಡಪದ, ಶಿಬಿರದ ಸಂಚಾಲಕ ರಂಗನಿರ್ದೇಶಕ ಡಾ| ಅಣ್ಣಾಜಿ ಕೃಷ್ಣಾರೆಡ್ಡಿ, ರಂಗ ಪದವೀಧರ ಕೆ.ನಾಗರಾಜ್ ಹಾಗೂ ಚನ್ನಕೇಶವರೆಡ್ಡಿ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.
ಓದಿ : ರಾಜಕೀಯ ಪ್ರೇರಿತ ಮೀಸಲಾತಿಗಳು ಒಳ್ಳೆಯ ಬೆಳವಣಿಗೆಯಲ್ಲ: ಸದಾನಂದ ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.