ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ದತ್ತಿ ಕಾರ್ಯಕ್ರಮ
ಮಹಾಮನೆ ಕಾರ್ಯಕ್ರಮವನ್ನು ಹರಗಿನಡೋಣಿ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
Team Udayavani, Feb 19, 2021, 4:38 PM IST
ಬಳ್ಳಾರಿ: ಭಾಷೆ ಮೊದಲು, ವ್ಯಾಕರಣ ನಂತರ ಎಂಬಂತೆ ಚಿತ್ರ ಮೊದಲು ಕಲೆ ನಂತರ. ಮನಸ್ಸಿನ ಆಸರ, ಬೇಸರ, ಆನಂದಗಳ
ತೋರಿಸುವ ಮೊದಲು ಮಾಧ್ಯಮ ಚಿತ್ರ. ಮಗು ತೋಚಿದ್ದನ್ನೆಲ್ಲಾ ಗೀಚಿದಾಗಲೇ ಚಿತ್ರ ಮೂಡಿ ಬರುವುದು ಎಂದು ಸರ್ಕಾರಿ
(ಮಾ.ಪು) ಪ್ರೌಢಶಾಲೆ ಶಿಕ್ಷಕಿ ಡಾ|ಎ.ಎನ್. ಸಿದ್ದೇಶ್ವರಿ ಹೇಳಿದರು.
ಇಲ್ಲಿನ ತಿಲಕ್‌ನಗರದ ಭವಾನಿ ಚಿತ್ರಕಲಾಮಂದಿರದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ 248ನೇ ಮಹಾಮನೆ ಲಿಂಗೈಕ್ಯ ತುಳಜಮ್ಮ ಲಕ್ಷ್ಮಪ್ಪ ಜಾಧವ್ ದತ್ತಿ ಮತ್ತು ಬೆಲ್ಲದ ಚೆನ್ನಪ್ಪ ಚಿತ್ತವಾಡ್ಗಿ ದತ್ತಿ ಕಾರ್ಯಕ್ರಮದಲ್ಲಿ “”ಜಾನಪದ ಚಿತ್ರಕಲಾ ಪ್ರಕಾರಗಳು” ವಿಷಯದ ಕುರಿತು ಮಾತನಾಡಿದರು. ಕಾಡು ಮಾನವ ನಾಡಿನ ಸಂಪರ್ಕಕ್ಕೆ ಬಂದಾಗಿನಿಂದ ತನ್ನ ಬದುಕಿನಲ್ಲಿ ಜನ್ಮಜಾತ ಚಿತ್ರಕಲೆಯನ್ನು ಉಳಿಸಿಕೊಂಡು ಬಂದಿದ್ದಾನೆ. ಓದು, ಬರಹ ಬಾರದಿದ್ದ ಕಾಲದಲ್ಲಿ ತನ್ನ ದಿನದ ಬದುಕಿನಲ್ಲಿ ಮನೆಯ ಗೋಡೆಗಳ ಅಲಂಕಾರ, ರಂಗೋಲಿ, ಅಚ್ಚು
ಹಾಕುವುದು, ಪಾತ್ರೆ, ಪಗಡೆ, ಬಟ್ಟೆ ಬರೆಗಳ ಅಲಂಕರಣ ಮತ್ತು ಮದುವೆ ಕಾರ್ಯಗಳಲ್ಲಿ ಬಾಸಿಂಗ, ದಂಡೆ, ಮದುಮಕ್ಕಳ ಮನೆ, ಕಂಬಳಿ ಹಾಸಕ್ಕಿ ಮನೆಗೆ ಚಟ್ ಬಡಿಯುವ ಕಾರ್ಯಗಳು ಜಾನಪದ ಕಲೆಗಳಾಗಿದ್ದು ನೈಜ ಮತ್ತು ಚೈತನ್ಯಪೂರ್ಣ ಕಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹರಗಿನಡೋಣಿ ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯವಹಿಸಿ ಮಾತನಾಡಿ, ಜಾನಪದ ಕಲೆಗಳಲ್ಲಿ ರಚನೆ, ಅಧಿಕಾರ, ಬಳಸಿದ ಬಣ್ಣಗಳಿಗೆಲ್ಲಾ ವಿಶೇಷ ಅರ್ಥಗಳಿಂದ ಕೂಡಿದ್ದು, ಅವುಗಳೆಲ್ಲ ನಮ್ಮ ಧಾರ್ಮಿಕ ಪರಂಪರೆ, ನಂಬಿಕೆಗಳ ಹಿನ್ನೆಲೆಯಲ್ಲಿ ರಚನೆಗೊಂಡಿವೆ ಎಂದರು.
ಭವಾನಿ ಚಿತ್ರಕಲಾಮಂದಿರದ ಸಂಸ್ಥಾಪಕ ಆರ್.ಎಲ್. ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಕಲಾ ವಿದ್ಯಾರ್ಥಿ ಮಾಲತೇಶ್‌ನ ವಚನ ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭವಾಯಿತು. ಮೆಹಬೂಬ್ ಎಂ. ಸ್ವಾಗತಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ದತ್ತಿ ಧಾತ್ರಿಗಳನ್ನು ಪರಿಚಯಿಸಿದರು. ರಾಜಶೇಖರ್ ನಿರೂಪಿಸಿದರು. ಸಭೆಯಲ್ಲಿ ಕೂಡ್ಲಿಗಿ ನಿವೃತ್ತ ಕಲಾ ಶಿಕ್ಷಕಿ ಭಾರತಿ, ದುರುಗಣ್ಣ ಹಾಗೂ
ಚಿತ್ರಕಲಾ ವಿದ್ಯಾರ್ಥಿಗಳು ಇದ್ದರು.
ಓದಿ : ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ: ಸಮಗ್ರ ವರದಿ ಕೇಳಿದ ಹೈಕೋರ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.