ಸೂಗನಗೌಡಗೆ ಶೌರ್ಯ, ಕೃಷ್ಣೋಜಿಗೆ ವಿಶಿಷ್ಟ ಸೇವಾ ಪ್ರಶಸ್ತಿ
ಅತ್ಯುತ್ತಮ ಕರ್ತವ್ಯಕ್ಕೆ ಅರಸಿ ಬಂದ ಪ್ರಶಸ್ತಿ
Team Udayavani, Jan 26, 2021, 4:14 PM IST
ಬಳ್ಳಾರಿ: ನಗರದ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕ ವಾಹನ ಚಾಲ ಸೂಗನಗೌಡರಿಗೆ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಲಭಿಸಿದೆ.
ಕಳೆದ 2018 ಆಗಸ್ಟ್ 29 ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಬಳಿಯ ಕೃಷ್ಣಾ ನದಿಯಲ್ಲಿ 5 ಲಕ್ಷ ಕ್ಯೂಸೆಕ್ ನೀರು ಬಿಟ್ಟಾಗ ಉಂಟಾದ ಪ್ರವಾಹದಲ್ಲಿ 6 ಜನ ಕುರಿಗಾಹಿಗಳೊಂದಿಗೆ 165 ಕುರಿಗಳನ್ನು ರಕ್ಷಣೆ ಮಾಡುವ ಮೂಲಕ ಸೂಗನಗೌಡ ನಾಡಿನ ಗಮನಸಳೆದಿದ್ದರು.
ಸೇವೆಗೆ ಸೇರಿದ ನಾಲ್ಕೂವರೆ ವರ್ಷಗಳಲ್ಲಿ ಮೇಲಧಿಕಾರಿಗಳು ಸೂಚಿಸಿದ ಜವಾಬ್ದಾರಿಗಳನ್ನು ಹಾಗೂ ನನ್ನ ಕರ್ತವ್ಯವನ್ನು ಸಮರ್ಪಕವಾಗಿ ಮತ್ತು ಶ್ರದ್ಧೆಯಿಂದ ನಿರ್ವಹಿಸಿರುವುದು 72ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ 2021 ನೇ ಸಾಲಿನ ರಾಷ್ಟ್ರಪತಿಯವರ ಶೌರ್ಯ ಪ್ರಶಸ್ತಿ ಪದಕ ಘೋಷಣೆಗೆ ಕಾರಣವಾಗಿದೆ.
ಪ್ರಶಸ್ತಿ ಸಂದಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ ಅಗ್ನಿಶಾಮಕ ಚಾಲಕ ಸೂಗನಗೌಡ, ನನ್ನ ಕರ್ತವ್ಯವನ್ನು ಮತ್ತಷ್ಟು ಶ್ರದ್ಧೆಯಿಂದ ಹಾಗೂ
ಉತ್ಸಾಹದಿಂದ ಮಾಡಲು ನೆರವಾಗಿದೆ ಎಂದರು.
ಭಾರತ ಅತ್ಯುನ್ನತ ಪ್ರಶಸ್ತಿ ದೊರೆತಿರುವುದು ತುಂಬಾ ಸಂತೋಷದ ಸಂಗತಿ. ಕರ್ತವ್ಯದ ಸಮಯದಲ್ಲಿ ಸದಾ ನೆರವು ನೀಡಿದ ಎಲ್ಲ ಮೇಲಧಿ ಕಾರಿಗಳಿಗೆ, ಸಿಬ್ಬಂದಿ ವರ್ಗಕ್ಕೆ ಅಭಾರಿ ಎಂದು ತಿಳಿಸಿದರು.
2019ರ ಮಾ.19ರಂದು ಧಾರವಾಡ ನಗರದಲ್ಲಿ ಬಹುಮಹಡಿ ಕಟ್ಟಡ ಕುಸಿತದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಶ್ರೇಯಸ್ಸು ಇವರದ್ದು. ಸೂಗನಗೌಡ ಅವರು 2019 ಆ. 11ರಂದು ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ತುಂಗಭದ್ರ ನದಿ ಪ್ರವಾಹದಲ್ಲಿ ಸಿಲುಕಿದ ಜನರ ಪ್ರಾಣರಕ್ಷಣೆ ಮಾಡಲು ತಮ್ಮ ಜೀವದ ಹಂಗುತೊರೆದು ರಕ್ಷಣೆ ಮಾಡುವಾಗ ರಬ್ಬರ್ ಬೋಟ್ ಮುಳಗಿ
ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಸುಮಾರು 2ಕಿಮೀ ದೂರದಲ್ಲಿ ನೀರಿನ ಪ್ರವಾಹದಿಂದ ಮೇಲೆ
ಎದ್ದುದಡ ಸೇರಿದ್ದನ್ನು ಸ್ಮರಿಸಬಹುದು.
ಅಗ್ನಿಶಾಮಕ ಚಾಲಕ ಸೂಗನಗೌಡ ಅವರ ಈ ಒಂದು ಉತ್ತಮ ಕಾರ್ಯಕ್ಕಾಗಿ ರಾಷ್ಟ್ರಪತಿಗಳು 2021ನೇ ಸಾಲಿನ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶೌರ್ಯ ಪ್ರಶಸ್ತಿ ಪದಕವನ್ನು ಘೊಷಿಸಿದ್ದಾರೆ.
ಎಂದು ಬಳ್ಳಾರಿ ಪ್ರಾದೇಶಿಕ ಅಗ್ನಿಶಾಮಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಚಾಲಕ ಸೂಗನಗೌಡ ಅವರು ರಾಯಚೂರು ತಾಲೂಕಿನ ನಾಗಲಾಪುರ ಗ್ರಾಮದವರಾಗಿದ್ದು, ಇವರು 2016 ಮೇ 18ರಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಅಗ್ನಿಶಾಮಕ ಚಾಲಕರಾಗಿ ನೇಮಕಗೊಂಡು ಬಳ್ಳಾರಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೊಪ್ಪಳದ ಅಗ್ನಿಶಾಮಕ ಠಾಣಾಧಿ ಕಾರಿ ಜಿ. ಕೃಷ್ಣೋಜಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ: ಕೊಪ್ಪಳದ ಅಗ್ನಿಶಾಮಕ ಠಾಣಾ ಧಿಕಾರಿಗಳಾಗಿ
ಸೇವೆ ಸಲ್ಲಿಸುತ್ತಿರುವ ಜಿ. ಕೃಷ್ಣೋಜಿ ಅವರು ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ
ಪಾತ್ರರಾಗಿದ್ದಾರೆ.
ಕೃಷ್ಣೋಜಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದವರಾಗಿದ್ದು ಇವರ ಸೇವಾ ಅವ ಧಿಯಲ್ಲಿ 17 ಬಾರಿ ಉತ್ತಮ ಕಾರ್ಯಕ್ಕಾಗಿ ನಗದು ಬಹುಮಾನ ಇಲಾಖೆಯಿಂದ ಪಡೆದಿರುತ್ತಾರೆ. ಬಳ್ಳಾರಿ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿ ಕಾರಿ ಎಸ್. ರವಿಪ್ರಸಾದ್ ಅವರು ದೇಶದ ಪರಮೋಚ್ಚ ಪ್ರಶಸ್ತಿ ದೊರೆತಿದೆ. ಇವರ ಈ ಕಾರ್ಯ, ಸಾಹಸ ಇತರರಿಗೆ ಮಾದರಿ. ಈ ಸಾಲಿನಲ್ಲಿ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಇಲಾಖೆ ರಾಜ್ಯಾದ್ಯಂತ 7 ಜನರಿಗೆ ರಾಷ್ಟ್ರಪತಿಗಳ ಪ್ರಶಸ್ತಿ ದೊರೆತಿದೆ.
ನಮ್ಮ ವಲಯದ ಇಬ್ಬರಿಗೆ ಶೌರ್ಯ ಪ್ರಶಸ್ತಿ ನೀಡಿರುವುದು ತುಂಬಾ ಖುಷಿ ಮತ್ತು ಹೆಮ್ಮೆಯ ಸಂಗತಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.