ಮೈಲಾರ ಜಾತ್ರೆಗೆ ಅಧಿಕೃತ ಚಾಲನೆ
ಹಾಲು ಉಕ್ಕಿಸಿ-ಸ್ವಾಮಿಗೆ ವಿಶೇಷ ಪೂಜೆ
Team Udayavani, Feb 21, 2021, 5:01 PM IST
ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರ ಗ್ರಾಮದಲ್ಲಿ ರಥ ಸಪ್ತಮಿಯಂದು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಹಾಲು ಉಕ್ಕಿಸಿ,
ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆಗೆ ಅಧಿಕೃತ ಚಾಲನೆ ನೀಡಲಾಯಿತು.
ಪೂಜೆ ನಂತರದಲ್ಲಿ ಕಾರ್ಣಿಕ ಹೇಳುವ ಗೊರಯ್ಯ ರಾಮಣ್ಣನಿಗೆ ವಂಶ ಪಾರಂಪರ್ಯ ಧರ್ಮಕರ್ತ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಕಂಕಣಧಾರಣೆ ಮಾಡಿದರು. ಗೊರವಯ್ಯನು ನುಡಿಯುವ ದೈವವಾಣಿಯ 11 ಅಡಿ ಎತ್ತರ ಬಿಲ್ಲ ಅನ್ನು ಪೂಜೆ ಮಾಡಲಾಯಿತು. ನಂತರದಲ್ಲಿ ದೇವಸ್ಥಾನದ ಬಾಬುದಾರರಿಗೆ. ಕಂಚಾವೀರರಿಗೆ ಕಂಕಣಧಾರಣೆ ಮಾಡಿದರು. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್ ಪ್ರಕಾಶ್ ರಾವ್, ಕಾರ್ಯನಿರ್ವಾಹಕ ಆಧಿಕಾರಿ ಗಂಗಾಧರ ಹಾಜರಿದ್ದರು.
ನಿಷೇಧಾಜ್ಞೆ: ಕೊರೊನಾ ಹಿನ್ನೆಲೆಯಲ್ಲಿ ಫೆ.19ರಿಂದ ಮಾ.2ರ ವರೆಗೂ ಮೈಲಾರ ಸುಕ್ಷೇತ್ರದಲ್ಲಿ ಹೊರಗಿನ ಭಕ್ತರು ಸುಕ್ಷೇತ್ರಕ್ಕೆ ಬಾರದಂತೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಸುಕ್ಷೇತ್ರದ ನಾಲ್ಕು ಕಡೆಯಲ್ಲಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಹೊರಗಡೆಯಿಂದ ಬರುವವರ ತಪಾಸಣೆ ಕಾರ್ಯ ಸಹ ನಡೆಯುತ್ತಿದೆ. ಜಾತ್ರೆ ನಿಮಿತ್ತ ಧಾರ್ಮಿಕ ಆಚರಣೆಗಳನ್ನು ಮಾತ್ರ ನಡೆಸಲು ಅವಕಾಶ ನೀಡಲಾಗಿದೆ. ಹೊರಗಿನ ಯಾವುದೇ ಭಕ್ತರ ಆಗಮನ ನಿಷೇಧಿಸಲಾಗಿದೆ.
ಓದಿ : ಅಂಗನವಾಡಿ ಮಕ್ಕಳೊಂದಿಗೆ ಹೆಸರುಕಾಳು ತಿಂದ ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.