ಪಾಲಿಕೆ ಚುನಾವಣೆ: 3ನೇ ವಾರ್ಡ್ ಪ್ರತಿಷ್ಠೆ ಕಣ
Team Udayavani, Apr 3, 2021, 5:32 PM IST
ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಂಗಳಮುಖೀಯೊಬ್ಬರು ಗೆದ್ದು ಗಮನ ಸೆಳೆದಿದ್ದ ಮೂರನೇ ವಾರ್ಡ್ ಈ ಬಾರಿಯೂ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದೆ. ಈಗಾಗಲೇ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಈ ವಾರ್ಡ್ ನಲ್ಲಿ ರಾಜಕೀಯ ವ್ಯಕ್ತಿಗಳ ವಾರಸುದಾರರು ಸ್ಪರ್ಧಿಸುತ್ತಿರುವುದು ಮತ್ತಷ್ಟು ರಂಗೇರಿದೆ.
ಬಳ್ಳಾರಿ ಮಹಾನಗರ ಪಾಲಿಕೆಗೆ ಇದೇ ಏಪ್ರಿಲ್ 27ರಂದು ಚುನಾವಣೆ ನಡೆಯಲಿದೆ. ಈ ಮೊದಲು 35 ವಾರ್ಡ್ ಗಳು ಇದ್ದ ಪಾಲಿಕೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಿ 39 ವಾರ್ಡ್‌ಗಳಿಗೆ ಏರಿಕೆಯಾಗಿದೆ. ಇದರಿಂದ ಈ ಹಿಂದೆ ಇದ್ದ ಮೂರು ಮತ್ತು ನಾಲ್ಕನೇ ವಾರ್ಡ್ ಎರಡನ್ನೂ ಸೇರಿಸಿ 3ನೇ ವಾರ್ಡ್ ನ್ನಾಗಿ ರಚಿಸಲಾಗಿದೆ.ಇದರಿಂದ ವಾರ್ಡ್ ನಲ್ಲಿ ಮತದಾರರ ಸಂಖ್ಯೆಯೂ 5 ಸಾವಿರದಿಂದ 11 ಸಾವಿರಕ್ಕೂ ಹೆಚ್ಚಾಗಿದೆ. ಜತೆಗೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ.
3-4 ಎರಡು ವಾರ್ಡ್ ಗಳನ್ನು ಸೇರಿಸಿ 3ನೇ ವಾರ್ಡ್ ಮಾಡಿದ್ದರಿಂದ ಹಿಂದಿನ 3 ಮತ್ತು 4 ಎರಡು ವಾರ್ಡ್‌ಗಳ ಆಕಾಂಕ್ಷಿಗಳು ಸ್ಪರ್ಧಿಸಲು ಆಸಕ್ತಿ ತೋರುತ್ತಿರುವುದು ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು: ಕಳೆದ ಪಾಲಿಕೆ ಚುನಾವಣೆಯಲ್ಲಿ ಹಿಂದಿನ 3ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದ ಬೆಣಕಲ್ ಬಸವರಾಜಗೌಡ ಉಪಮೇಯರ್ ಆಗಿದ್ದರು. ಇದೀಗ ಮತ್ತೂಮ್ಮೆ ಪಾಲಿಕೆ ಚುನಾವಣೆಯಲ್ಲಿ ಸ್ಪಧಿ ìಸಲು ಆಸಕ್ತಿ ತೋರುತ್ತಿದ್ದು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಪಕ್ಷದ ಹಲವು ರಾಜ್ಯ ಮುಖಂಡರ ಸಂಪರ್ಕ ಹೊಂದಿರುವ ಬಸವರಾಜ್ ಅವರು ಎರಡನೇ ಬಾರಿಗೂ ಸ್ಪ ರ್ಧಿಸಲು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಇನ್ನು ಇದೇ ವಾರ್ಡ್‌ನಿಂದ ಸ್ಪರ್ಧಿಸಲು ಮುಂಡೂರು ಕುಟುಂಬದ ಕುಡಿಯಾದ ಎಂ. ಪ್ರಭಂಜನ್ ಕುಮಾರ್ ಅವರು ಸಹ ಉತ್ಸುಕರಾಗಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಉಚಿತ ರಕ್ತದಾನ, ನೇತ್ರ ತಪಾಸಣಾ ಶಿಬಿರ ಸೇರಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜತೆಗೆ ವಾರ್ಡ್‌ನಲ್ಲಿ ಕುಡಿವ ನೀರು, ಸ್ವತ್ಛತೆ ಯಾವುದೇ ಸಮಸ್ಯೆಯಿದ್ದರೂ ಸಂಬಂಧಪಟ್ಟ ಅ ಧಿಕಾರಿಗಳ ಗಮನಸೆಳೆದು ಬಗೆಹರಿಸುವ ಮೂಲಕ ಜನರ ಬಳಿಗೆ ಹೋಗುತ್ತಿದ್ದಾರೆ. ಜತೆಗೆ ಇವರ ಕುಟುಂಬ ಪಕ್ಷದ ರಾಜ್ಯ ಮುಖಂಡರ ಸಂಪರ್ಕವಿದೆ.
ಈ ಎಲ್ಲ ಸೇವಾ ಕಾರ್ಯ ಮತ್ತು ಜನಾಭಿಪ್ರಾಯದ ಮೇಲೆ ಕಾಂಗ್ರೆಸ್ ಟಿಕೆಟ್ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ನಾಲ್ಕನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಯುವ ಮುಖಂಡ ಸುರೇಶ್ ಅಲಿವೇಲು ಅವರು ಸಹ ಈ ಬಾರಿಯೂ ಮೂರನೇ ವಾಡ್ ìನಿಂದ ಸ್ಪ ರ್ಧಿಸಲು ಆಸಕ್ತಿ ಹೊಂದಿದ್ದು, ಇವರು ಸಹ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರು, ಮಾಜಿ ಸಂಸದರಿಗೆ ಆಪ್ತರಾಗಿರುವ ಇವರು, ಕಾಂಗ್ರೆಸ್ ಟಿಕೆಟ್‌ಗಾಗಿ ತೆರೆಮರೆಯ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಕಳೆದ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪ ರ್ಧಿಸಿ ಜಯಗಳಿಸಿ ಜಿಲ್ಲೆಯ ಗಮನ ಸೆಳೆದಿದ್ದ ಮಂಗಳಮುಖೀ ಪರ್ವಿನ್‌ಬಾನು ಅವರು ಎರಡನೇ ಬಾರಿ ಸ್ಪಧಿ ìಸಲು ಆಕಸ್ತಿ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಅವರೇ ಮುತುವರ್ಜಿ ವಹಿಸಿ ಪರ್ವೀನ್ ಬಾನು ಅವರಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.
ಸದ್ಯ ಅನಿಲ್‌ಲಾಡ್ ಸೈಲೆಂಟ್ ಆಗಿದ್ದಾರೆ. ಇವರ ಬೆಂಬಲಕ್ಕೆ ನಿಲ್ಲುವ ಮುಖಂಡರು ಪಕ್ಷದಲ್ಲಿ ಇಲ್ಲವಾಗಿದ್ದಾರೆ. ಆದರೂ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಅವರು, ಟಿಕೆಟ್‌ಗಾಗಿ ಪ್ರಯತ್ನಗಳು ನಡೆಸುತ್ತಿದ್ದಾರೆ. ಈ ನಾಲ್ವರು ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್‌ಗಾಗಿ ತೆರೆಮರೆಯ ಪ್ರಯತ್ನಗಳು ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಆಯ್ಕೆ ಸಮಿತಿ ಯಾರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಶಾಸಕರ ಪುತ್ರ ಸ್ಪರ್ಧೆ: ಮೂರನೇ ವಾರ್ಡ್‌ನಿಂದ ಸ್ಪ ರ್ಧಿಸಲು ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದ್ದರೆ, ಇದೇ ವಾರ್ಡ್‌ನಿಂದ ಹಾಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರ ಪುತ್ರ ಜಿ.ಶ್ರವಣ್ ಕುಮಾರ್ ರೆಡ್ಡಿ ಸ್ಪ ರ್ಧಿಸಲಿದ್ದಾರೆ ಎಂಬ ವದಂತಿ ಸಹ ಹಬ್ಬಿದ್ದು, 3ನೇ ವಾರ್ಡ್ ಪ್ರತಿಷ್ಠೆ ಕಣವಾಗಿದೆ. ಒಂದು ವೇಳೆ ಶಾಸಕರ ಪುತ್ರ ಸ್ಪರ್ಧಿಸಿದ್ದೇ ಆದಲ್ಲಿ ಎರಡು ಪ್ರಭಾವಿ ರಾಜಕೀಯ ಕುಟುಂಬಗಳ ವಾರಸುದಾರರ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ, ಯಾರ್ಯಾರಿಗೆ ಟಿಕೆಟ್ ಸಿಗಲಿದೆ. ಯಾರ್ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಏ. 8ರ ನಂತರ ಸ್ಪಷ್ಟವಾಗಲಿದೆ.
-ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.