ರಸ್ತೆಗಿಳಿದ 75 ಸರಕಾರಿ ಬಸ್
Team Udayavani, Apr 11, 2021, 5:41 PM IST
ಹೊಸಪೇಟೆ: ಸಾರಿಗೆ ನೌಕರರ ಮುಷ್ಕರ ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸಲು, ಸಾರಿಗೆ ವಿಭಾಗದ ಅಧಿಕಾರಿಗಳು ಖಾಸಗಿ ಕಂಪನಿ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಜತೆಗೆ ಸ್ಥಳೀಯ ವಿಭಾಗದಿಂದ ಶನಿವಾರ 75 ಸಾರಿಗೆ ಬಸ್ ಗಳು ಸಂಚರಿಸಿದವು.
ಈ ನಡುವೆ ನಿವೃತ್ತ ನೌಕರರು ಕೂಡ ಚಾಲಕರು ಹಾಗೂ ನಿರ್ವಾಹಕರಾಗಿ ಸೇವೆ ಸಲ್ಲಿಸಿದರು. ಕೊಪ್ಪಳದ ಕಿರ್ಲೋಸ್ಕರ್ ಕಾರ್ಖಾನೆಯ ಬಸ್‌ಗಳು ಸಾರಿಗೆ ಸೇವೆ ನೀಡಿದವು. ಸ್ವಯಂಪ್ರೇರಿತವಾಗಿ ಬಂದ ಖಾಸಗಿ ಕಂಪನಿಗಳ ಬಸ್‌ಗಳು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿವೆ. ಹೊಸಪೇಟೆಯಿಂದ-ಬಳ್ಳಾರಿಗೆ ಬಸ್ ಗಳು ಓಡಾಟ ನಡೆಸುತ್ತಿವೆ. ಪ್ರಯಾಣಿಕರಿಂದ ಸರಕಾರಿ ದರವನ್ನು ಪಡೆದುಕೊಂಡು ಸಾರಿಗೆ ಸೌಲಭ್ಯವನ್ನು ನೀಡುತ್ತಿವೆ.
ಬಸ್ ಸಂಚಾರ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಹೊಸಪೇಟೆಯ ವಿಭಾಗದ ನಾನಾ ಕಡೆಯಿಂದ ಬಸ್ ಸಂಚಾರ ಆರಂಭವಾಯಿತು. ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಹರಪನಹಳ್ಳಿ ಘಟಕಗಳಿಂದ 75 ಬಸ್‌ಗಳು ಸಂಚರಿಸಿದವು. ಜತೆಗೆ ಟ್ರಾÂಕ್ಸ್, ಟಂಟಂ ಸೇರಿದಂತೆ ಖಾಸಗಿ ಬಸ್‌ಗಳು ಕೂಡ ಸಂಚರಿಸಿದವು. ದೂರದ ಊರುಗಳಿಗೆ ತೆರಳಲು ಕಳೆದ ಮೂರು ದಿನಗಳಿಂದ ಪರದಾಡಿದ್ದ ಪ್ರಯಾಣಿಕರು 75 ಬಸ್‌ಗಳು ಸಂಚರಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕೂಡ ನಿಟ್ಟುಸಿರು ಬಿಡುವಂತಾಯಿತು.
ಇಬ್ಬರು ನೌಕರರ ವಜಾ: ಹೊಸಪೇಟೆ ವಿಭಾಗದಲ್ಲಿ ಸಾರಿಗೆ ನೌಕರರಿಗೆ ಶಾಕ್ ನೀಡಿದ ವಿಭಾಗೀಯ ನಿಯಂತ್ರಣಾಧಿ ಕಾರಿ ಜಿ.ಶೀನಯ್ಯ ಅವರು ಇಬ್ಬರು ನೌಕರರನ್ನು ಸೇವೆಯಿಂದ ವಜಾ ಮಾಡಿದ್ದಾರೆ. ಹಳೆ ಕರ್ತವ್ಯ ಲೋಪ ಪ್ರಕರಣಗಳಲ್ಲಿ ಇಬ್ಬರನ್ನೂ ಈಗ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.