ಜೀವನದಲ್ಲಿ ನೋವಿದ್ದರೂ ನಗಿಸುತ್ತಿದ್ದ ಚಾರ್ಲಿ ಚಾಪ್ಲಿನ್
Team Udayavani, Apr 20, 2021, 5:46 PM IST
ಬಳ್ಳಾರಿ: ನಟ ಚಾರ್ಲಿ ಚಾಪ್ಲಿನ್ ತನ್ನ ನಿಜ ಜೀವನದಲ್ಲಿ ಎಷ್ಟೇ ನೋವು ಸಂಕಟವಿದ್ದರೂ ನಟನೆಯಲ್ಲಿ ನಗೆಯನ್ನು ಚಿಮ್ಮಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ. ರಂಗಣ್ಣನವರ ಹೇಳಿದರು.
ನಗರದ ಕನ್ನಡ ಭವನದಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಚಿತ್ರಕಲಾ ಶಿಕ್ಷಕರು ಚಿತ್ರಿಸಿದ್ದ ಚಿತ್ರಗಳ ಚಿತ್ರಕಲಾ ಪ್ರದರ್ಶನವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ವ್ಯಕ್ತಿ ಸದಾ ಕ್ರಿಯಾಶೀಲನಾಗಿದ್ದರೆ ಏನೆಲ್ಲಾ ಸೃಜಿಸಬಲ್ಲ ಎಂಬುದಕ್ಕೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಚಿತ್ರಕಲಾ ಶಿಕ್ಷಕರು ಚಿತ್ರಿಸಿದ ಈ ವಿಭಿನ್ನ ರೀತಿಯ ಚಿತ್ರಗಳೇ ತಾಜಾ ಉದಾಹರಣೆಯಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಅರವತ್ನಾಲ್ಕು ಕಲೆಗಳಲ್ಲಿ ಅತಿ ಪ್ರಮುಖವಾದುವು ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ, ಭಾರತೀಯ ಸಂಪ್ರದಾಯಗಳಲ್ಲಿ ಲಲಿತ ಕಲೆಗಳು ಪ್ರಮುಖವಾಗಿವೆ. ಕಲೆಯು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಅದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂದ ಅವರು, ಬಳ್ಳಾರಿ ಜಿಲ್ಲೆ ಸಾಂಸ್ಕೃತಿಕ ಕಲೆಗಳ ನೆಲೆವೀಡು. ಕಲೆ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸದಾ ಕಾಲ ಬೆಂಬಲ ನೀಡುತ್ತದೆ ಎಂದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಯು.ಅಶೋಕ್ ಮಾತನಾಡಿ, ಕಲಾವಿದರು ಹಳೆಯ ಸಂಪ್ರದಾಯಗಳಿಗೆ ಜೋತು ಬೀಳದೆ ಕಲೆಯಲ್ಲಿ ಹೊಸತನ ಹೊಸ ಆವಿಷ್ಕಾರಗಳನ್ನು ಮಾಡಬೇಕು .ಹೊಸ ಹೊಸ ರೀತಿಯ ಮಾಧ್ಯಮಗಳನ್ನು ಆಯ್ಕೆ ಮಾಡಿಕೊಂಡಾಗ ಇಡೀ ವಿಶ್ವವೇ ನಿಮ್ಮ ಕಲಾ ಪ್ರೌಢಿಮೆಯನ್ನು ಗಮನಿಸಿ ಗೌರವ ನೀಡುತ್ತದೆ ಎಂದರು. ಭವಾನಿ ಲಲಿತಕಲಾ ಮಂದಿರದ ಸಂಸ್ಥಾಪಕ ಆರ್.ಎಲ್.ಜಾಧವ್ ಮಾತನಾಡಿ, ಚಿತ್ರಕಲಾ ಶಿಕ್ಷಕರಲ್ಲಿ ನವಚೈತನ್ಯ ಮೂಡಿಸುವಂತಹ ಇಂಥ ಪ್ರದರ್ಶನಗಳು ಪ್ರತಿವರ್ಷ ನಡೆಯುವಂತಾಗಬೇಕು. ಬಳ್ಳಾರಿ ಜನತೆಯೂ ಕೂಡ ಇಂಥ ಪ್ರದರ್ಶನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಿ ನೋಡುವಂತಾಗಬೇಕು ಎಂದು ಆಶಿಸಿದರು.
ಶಿಲ್ಪ ಮತ್ತು ಚಿತ್ರಕಲಾ ಸಂಘದ ಚಿಕ್ಕಬಳ್ಳಾಪುರದ ಅಧ್ಯಕ್ಷ ಎನ್.ಎಂ. ಶಿವರಾಜ್ ಮಾತನಾಡಿ, ಕಲಾಕೃತಿಗಳಲ್ಲಿ ಟೂಡಿ ತ್ರಿಡಿ ಫೂರ್ ಕೆ ಹಂತಗಳನ್ನು ಬಣ್ಣಗಳಲ್ಲಿ ಯಾವ ರೀತಿಯಲ್ಲಿ ಮಾಡಬಹುದು ಎಂಬುದನ್ನು ವಿವರಿಸಿದರಲ್ಲದೆ ಪ್ರತಿವಾರವೂ ಬಳ್ಳಾರಿಯಲ್ಲಿ ಕಲಾವಿದರಿಗೆ ಉಚಿತವಾಗಿ ಹೊಸ ಹೊಸ ರೀತಿಯ ಕಲಾ ಪ್ರಕಾರಗಳ ಪ್ರಾತ್ಯಕ್ಷಿಕೆ ನೀಡುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ವಿಜಯನಗರ ಜಿಲ್ಲೆಗಳ ಅಧ್ಯಕ್ಷ ಯು.ರಮೇಶ್ ವಹಿಸಿದದ್ದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ನಿರೂಪಿಸಿದರು. ಒಟ್ಟು 56 ಕಲಾಕೃತಿಗಳು ಪ್ರದರ್ಶಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.