ಕೊರೋನಾ ಕರ್ಫ್ಯೂ ಜಿಲ್ಲಾಡಳಿತ ಸಕಲ ಸಿದ್ಧತೆ


Team Udayavani, Apr 27, 2021, 8:07 PM IST

27-18

ಹೊಸಪೇಟೆ: ರಾಜ್ಯಾದ್ಯಂತ 14 ದಿನಗಳವರೆಗೆ ಮುಖ್ಯಮಂತ್ರಿ ಕೊರೊನಾ ಕಂಟ್ರೋಲ್‌ಗೆ ಕರ್ಫ್ಯೂ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ನಗರದ ಎಪಿಎಂಸಿ ಮಾರ್ಕೆಟ್‌ನಲ್ಲಿ ಹೋಲ್‌ ಸೇಲ್‌ ಹೊರತುಪಡಿಸಿ ರಿಟೇಲ್‌ ವ್ಯಾಪಾರಕ್ಕೆ ಕಡಿವಾಣ ಹಾಕಿದೆ. ಒಂದೊಮ್ಮೆ ರಿಟೇಲ್‌ ಮಾರಾಟ ಮಾಡುವುದು ಕಂಡು ಬಂದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ತಾತ್ಕಾಲಿಕ ತರಕಾರಿ ಮಾರ್ಕೆಟ್‌: ಜನ ಸಂದಣಿಯಾಗುವುದನ್ನು ತಡೆಯಲು ಉದ್ಯೋಗ ಪೆಟ್ರೋಲ್‌ ಬಂಕ್‌ ಬಳಿಯ ಮಾರ್ಕೆಟ್‌ ಬಳಿ ತರಕಾರಿ ಮಾರಾಟಕ್ಕೆ ನಿರ್ಬಂಧ ವಿ ಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ತಾತ್ಕಾಲಿಕ ಮಾರುಕಟ್ಟೆಗಳನ್ನು ತೆರೆಯಲಾಗಿದೆ. ನಗರದ ದೀಪಾಯನ ಶಾಲೆ ಆವರಣ, ಮುನ್ಸಿಪಲ್‌ ಕಾಲೇಜು ಮೈದಾನ, ಟಿಬಿಡ್ಯಾಂನ ಕಾಲೇಜು ಮೈದಾನ, ಬಳ್ಳಾರಿ ರಸ್ತೆಯ ಪಟೇಲ್‌ ಹೈಸ್ಕೂಲ್‌, ಬಾಲಾ ಟಾಕೀಸ್‌ ಬಳಿಯ ವಾಸವಿ ಶಾಲೆ ಮೈದಾನದಲ್ಲಿ ತಾತ್ಕಾಲಿಕ ತರಕಾರಿ ಮಾರ್ಕೆಟ್‌ ತೆರೆಯಲಾಗಿದೆ. ಸಚಿವರ ಸೂಚನೆ: ನಗರದಲ್ಲಿ ಕೊರೋನಾ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಅ ಧಿಕಾರಿಗಳ ಸಭೆ ನಡೆಸಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ಕೊರೊನಾ ಕಂಟ್ರೋಲ್‌ಗೆ ಕಠಿಣ ನಿಯಮ ಜಾರಿಗೆ ಸೂಚಿಸಿದ್ದರು.

ಅದರನ್ವಯ ಅ ಧಿಕಾರಿಗಳು ಈಗಾಗಲೇ ನಿಯಮ ಜಾರಿ ಮಾಡಿದ್ದಾರೆ. ಈ ಮಧ್ಯೆ ಸರಕಾರವೇ 14 ದಿನಗಳವರೆಗೆ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸರಕಾರದ ನಿಯಮ ಅನುಷ್ಠಾನಕ್ಕೆ ಅಧಿ ಕಾರಿಗಳ ತಂಡವನ್ನೇ ನಿಯೋಜನೆ ಮಾಡಿದೆ. ವರ್ತಕರ ಸಭೆ: ನಗರದಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ವರ್ತಕರ ಸಭೆ ನಡೆಸಿ ನಿಯಮ ಪಾಲನೆಗೆ ಸೂಚಿಸಿದ್ದರು. ಬಟ್ಟೆ ಅಂಗಡಿ ಹಾಗೂ ಚಿನ್ನದ ಅಂಗಡಿಗಳನ್ನು ಬಂದ್‌ ಮಾಡಿಸಿದ್ದರು.

ಈಗ 14 ದಿನಗಳವರೆಗೆ ಕರ್ಫ್ಯೂ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕಳ್ಳದಾರಿಯಲ್ಲಿ ಚಿನ್ನಾಭರಣ ಮಾಡಿಕೊಟ್ಟರೆ, ಕೋವಿಡ್‌ ನಿಯಮದ ಅನ್ವಯ ಅಂದರ್‌ ಆಗುವ ಸಾಧ್ಯತೆಯೂ ಇದೆ. ಕರ್ಫ್ಯೂ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪಗಳಿಗೆ ಬೀಗ ಬೀಳುವುದು ಗ್ಯಾರಂಟಿಯಾಗಿದೆ.

ವರ್ಕ್‌ಫ್ರಂ ಹೋಂ: ಖಾಸಗಿ ಸಂಸ್ಥೆಗಳು ವರ್ಕ್‌ ಫ್ರಂ ಹೋಂಗೆ ಹೆಚ್ಚಿನ ಆದ್ಯತೆ ನೀಡಲಿವೆ. ಬೇಕಾಬಿಟ್ಟಿಯಾಗಿ ನಗರದಲ್ಲಿ ತಿರುಗಾಡಿದರೆ ದಂಡದ ಜತೆಗೆ ಕ್ರಿಮಿನಲ್‌ ಕೇಸ್‌ ಬೀಳುವುದು ಗ್ಯಾರಂಟಿ. ಹೀಗಾಗಿ ಈಗಾಗಲೇ ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ನೀಡಿ ಸರಕಾರ ಆದೇಶಿಸಿದೆ. ಅನವಶ್ಯಕ ತಿರುಗಾಡುವವರ ಮೇಲೆ ನಿಗಾ ಇಡಲು ಪೊಲೀಸ್‌ ಇಲಾಖೆ ಕಣ್ಣಿಟ್ಟಿದೆ.

ವಾಹನಗಳ ಸಂಖ್ಯೆ ನಮೂದು: ನಗರದಲ್ಲಿ ಅಗತ್ಯವಸ್ತುಗಳ ಖರೀದಿಗೆ ಅಂತ ಹೇಳಿ ನಿತ್ಯವೂ ಹೊರ ಬಂದರೆ ಅಂತ ವಾಹನಗಳ ಸಂಖ್ಯೆಯನ್ನು ಪೊಲೀಸರು ಗುಟ್ಟಾಗಿ ನಮೂದು ಮಾಡಿಕೊಳ್ಳಲಿದ್ದಾರೆ. ಎಷ್ಟು ಬಾರಿ ಓಡಾಡಿದ್ದಾರೆ ಎಂಬುದರ ಪಕ್ಕಾ ಮಾಹಿತಿಯೊಂದಿಗೆ ಸಕಾರಣ ಕೇಳಿ ದಂಡ ವಿ ಧಿಸಲಿದ್ದಾರೆ. ಹೀಗಾಗಿ ಬರೀ ಮಜಾ ಉಡಾಯಿಸಲು ಹೊರಬಂದರೆ ಪೊಲೀಸರ ಲಾಠಿ ರುಚಿಯೊಂದಿಗೆ ಕೇಸ್‌ ಬೀಳುವುದಂತೂ ಗ್ಯಾರಂಟಿ. ಒಂದೇ ದಿನ ಬಸ್‌: ಸ್ಥಳೀಯ ವಿಭಾಗದಿಂದ ಇಂದು ಒಂದೇ ದಿನ ಮಾತ್ರ ಬಸ್‌ ಸೇವೆ ಲಭ್ಯವಾಗಲಿದೆ. ಕರ್ಫ್ಯೂ ಸಡಿಲಿಕೆ ಬಳಿಕವೇ ಬಸ್‌ ಸೇವೆ ಲಭ್ಯವಾಗಲಿದೆ. ಹೀಗಾಗಿ ಅನಗತ್ಯ ಓಡಾಟಕ್ಕೆ ಬ್ರೇಕ್‌ ಬೀಳಲಿದೆ.

ಪೊಲೀಸ್‌ ಪಡೆ ಸಜ್ಜು: ಈಗಾಗಲೇ ಈ ಹಿಂದಿನ ಕರ್ಫ್ಯೂ ಅನುಭವದ ಆಧಾರದ ಮೇಲೆ ಪೊಲೀಸ್‌ ಪಡೆ ನಗರದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿದೆ. ಯಾವ ಕಡೆ ಕರ್ಫ್ಯೂ ನಿಯಮ ಗಾಳಿಗೆ ತೂರಿ ಜನ ಒಂದೇಡೆ ಸೇರಿದ್ದಾರೆ ಎಂಬುದರ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ. ಇನ್ನೂ ತರಕಾರಿ ಖರೀದಿ, ಅಗತ್ಯವಸ್ತುಗಳ ಖರೀದಿ ವೇಳೆಯೂ ಪೊಲೀಸರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಪರಿಶೀಲನೆ ಮಾಡಲಿದ್ದಾರೆ. ಹೀಗಾಗಿ ಕೊರೊನಾ ಕಂಟ್ರೋಲ್‌ ಗೆ ಆರೋಗ್ಯ ಇಲಾಖೆ ಜತೆಗೆ ಪೊಲೀಸರ ಪಾತ್ರವೂ ಹಿರಿದಾಗಿದೆ.

ಮದ್ಯದಂಗಡಿಗೆ ಎಣ್ಣೆಪ್ರಿಯರ ಲಗ್ಗೆ: ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆಯೇ ನಗರದಲ್ಲಿ ಎಣ್ಣೆಪ್ರಿಯರು ಎಂಎಸ್‌ಐಎಲ್‌ಗೆ ಲಗ್ಗೆ ಇಟ್ಟು ಎಣ್ಣೆ ಖರೀದಿಸಿದರು. ಯುವಕರು, ಮಹಿಳೆಯರು, ವೃದ್ಧರು ಕೂಡ ಚೀಲಗಳಲ್ಲಿ ಎಣ್ಣೆ ಖರೀದಿಸಿ ಕೊಂಡೊಯ್ದರು.

ಟಾಪ್ ನ್ಯೂಸ್

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.