ಗಣಿನಗರ ಪಾಲಿಕೆ ಯಾರ ಪಾಲು?
Team Udayavani, Apr 30, 2021, 10:32 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯ 39 ಸದಸ್ಯ ಸ್ಥಾನಗಳಿಗೆ ಏ.27ರಂದು ನಡೆದ ಮತದಾನದ ಎಣಿಕೆ ಕಾರ್ಯ ಏ.30ರಂದು ಶುಕ್ರವಾರ ನಡೆಯಲಿದ್ದು, ಕಣದಲ್ಲಿ ಉಳಿದಿದ್ದ 187 ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಬೆಳಗ್ಗೆ 8 ಗಂಟೆಯಿಂದ ಎಣಿಕೆ ಕಾರ್ಯ ಚಾಲನೆ ಪಡೆದುಕೊಳ್ಳಲಿದೆ. ಕಳೆದ ಎರಡು ವರ್ಷಗಳ ನಂತರ ಹಲವು ಏಳು ಬೀಳು, ಅಡ್ಡಿ ಆತಂಕದ ನಡುವೆ ಪಾಲಿಕೆಗೆ ಚುನಾವಣೆ ನಡೆದಿದ್ದು, ಬೆಳಗ್ಗೆ 12 ಗಂಟೆಯೊಳಗೆ 39 ವಾಡ್ ಗಳ ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಕಳೆದ ಎರಡು ದಿನಗಳಿಂದ ಯಾವ ವಾರ್ಡ್‌ಗಳಲ್ಲಿ ಯಾವ ಅಭ್ಯರ್ಥಿಗೆ ವಿಜಯಲಕ್ಷಿ ಒಲಿಯಲಿದ್ದಾಳೆ? ಯಾವ ಪಕ್ಷಕ್ಕೆ ಬಹುಮತ ಲಭಿಸಲಿದೆ? ಪಾಲಿಕೆ ಚುಕ್ಕಾಣಿ ಯಾವ ಪಕ್ಷ ಹಿಡಿಯಲಿದೆ? ಪಕ್ಷೇತರರು ಎಷ್ಟು ಗೆಲ್ಲಲಿದ್ದಾರೆ? ಎಂಬ ಬೀದಿ ಬೀದಿ, ಗಲ್ಲಿಗಲ್ಲಿಗಳಲ್ಲಿನ ಸಾರ್ವಜನಿಕರ ಕುತೂಹಲದ ಹಲವು ಪ್ರಶ್ನೆಗಳಿಗೆ ತೆರೆ ಬೀಳಲಿದೆ. ಕಳೆದ ಬಾರಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಮಹಾನಗರ ಪಾಲಿಕೆ ಎರಡು ವರ್ಷಗಳಿಂದ ಹಲವು ಕಾರಣಗಳಿಂದ ಆಡಳಿತಾಧಿ ಕಾರಿಗಳ ಹಿಡಿತದಲ್ಲಿತ್ತು. ಮೀಸಲಾತಿ ಗೊಂದಲ ಕೋರ್ಟ್ ಮೆಟ್ಟಿಲೇರಿದ್ದರ ಫಲವಾಗಿ ಚುನಾವಣೆ ಒಂದಿಲ್ಲೊಂದು ಕಾರಣಕ್ಕೆ ವಿಳಂಬ ಆಗುತ್ತಲೇ ಬಂತು. ಈಗಲೂ ಸಹ ಚುನಾವಣೆ ನಡೆದಿರುವುದು ಕೋರ್ಟ್ ತೀರ್ಪು ಅನ್ವಯದ ವಾಗ್ಧಾನ ಒಳಪಟ್ಟಂತೆಯೇ.
ಕುತೂಹಲ ಮೂಡಿಸಿರುವ ಕದನ: ಈ ಬಾರಿಯ ಕಣದಲ್ಲಿ ಕೆಲ ಘಟಾನುಘಟಿಗಳು ಇರುವುದರಿಂದ ಕದನ ಕುತೂಹಲ ತುಸು ಹೆಚ್ಚಿದೆ. 18ನೇ ವಾಡ್ ìನಿಂದ ಶಾಸಕ ಜಿ. ಸೋಮಶೇಖರ ರೆಡ್ಡಿ ಪುತ್ರ ಶ್ರವಣಕುಮಾರ ರೆಡ್ಡಿ ಬಿಜೆಪಿಯಿಂದ, ಕಾಂಗ್ರೆಸ್ ನಿಂದ ಖ್ಯಾತ ಉದ್ಯಮಿ ಮುಲ್ಲಂಗಿ ರವೀಂದ್ರ ಅವರ ಪುತ್ರ ಮುಲ್ಲಂಗಿ ನಂದೀಶ್ ಅವರು ಸ್ಪಧಿಸಿದ್ದಾರೆ. ಮತದಾನ ಪ್ರಕ್ರಿಯೆಯೂ ತೀವ್ರ ಜಿದ್ದಾಜಿದ್ದಿನಿಂದ ನಡೆದಿದ್ದು, ಯಾರಿಗೆ ಜಯ ಲಭಿಸಲಿದೆ ಎಂಬುದು ನಗರದ ಜನರಲ್ಲಿ ಕುತೂಹಲ ಕೆರಳಿಸಿದೆ. 3ನೇ ವಾರ್ಡ್‌ನಿಂದ ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಬಂಡಾಯದ ಬಾವುಟ ಹಾರಿಸಿರುವ ಎಂ.ಪ್ರಭಂಜನಕುಮಾರ, ಕಾಂಗ್ರೆಸ್‌ನಿಂದ ಉಪಮೇಯರ್ ಬೆಣಕಲ್ ಬಸವರಾಜಗೌಡ, 8ನೇ ವಾರ್ಡ್‌ನಿಂದ ಪಾಲಿಕೆ ಮಾಜಿ ಸದಸ್ಯ ವೈ.ಬಿ. ಸೀತಾರಾಮ್, 19ನೇ ವಾಡ್ ìನಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಅಶೋಕಕುಮಾರ, 24ನೇ ವಾರ್ಡ್‌ನಿಂದ ಬಿಜೆಪಿಯ ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್ ಮೋತ್ಕರ್, 25ನೇ ವಾರ್ಡ್‌ನಿಂದ ಬಿಜೆಪಿಯಿಂದ ಮಾಜಿ ಸದಸ್ಯ ಗೋವಿಂದರಾಜುಲು, 23ನೇ ವಾರ್ಡ್‌ನಿಂದ ಕನಕ ದುರ್ಗಮ್ಮ ದೇವಸ್ಥಾನದ ಧರ್ಮದರ್ಶಿ ಪಿ.ಗಾದೆಪ್ಪ, 4ನೇ ವಾರ್ಡ್‌ನಿಂದ ಮಾಜಿ ಮೇಯರ್ ಸುಶೀಲಾಬಾಯಿ ಪುತ್ರಿ ಡಿ.ತ್ರಿವೇಣಿ ಸ್ಪರ್ಧೆ ಮಾಡಿದ್ದು, ಈ ವಾರ್ಡ್‌ಗಳ ಫಲಿತಾಂಶದ ಮೇಲೆ ಎಲ್ಲರ ಗಮನ ನೆಟ್ಟಿದೆ.
ಜನರ ಚಿತ್ತ 18ನೇ ವಾರ್ಡ್‌ನತ್ತ: ಮಹಾನಗರ ಪಾಲಿಕೆಯ 39 ವಾರ್ಡ್‌ಗಳಿಗೆ ಚುನಾವಣೆ ನಡೆದರೂ ನಗರದ ಜನರ ಚಿತ್ತ 18ನೇ ವಾರ್ಡ್‌ನತ್ತ ನೆಟ್ಟಿದೆ. ಈ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಜಿ.ಸೋಮಶೇಖರರೆಡ್ಡಿ ಪುತ್ರ ಶ್ರವಣ್‌ಕುಮಾರ್ ರೆಡ್ಡಿ-ಕಾಂಗ್ರೆಸ್‌ನಿಂದ ಮುಲ್ಲಂಗಿ ರವೀಂದ್ರಬಾಬು ಅವರ ಪುತ್ರ ಎಂ.ನಂದೀಶ್ ಅವರ ನಡುವೆ ನೇರ ಫೈಟ್ ಏರ್ಪಟ್ಟಿದೆ. ಪಾಲಿಕೆಯ 39 ವಾರ್ಡ್‌ಗಳಲ್ಲೇ ಅತಿಹೆಚ್ಚು ಹಣದ ಹೊಳೆಯನ್ನು ಉಭಯ ಪಕ್ಷಗಳ ಅಭ್ಯರ್ಥಿಗಳು ಹರಿಸಿದ್ದಾರೆ. ಜತೆಗೆ ಇನ್ನಿತರೆ ವಸ್ತುಗಳನ್ನು ಸಹ ಮತದಾರರಿಗೆ ನೀಡುವ ಮೂಲಕ ಮತದಾರರನ್ನು ಸೆಳೆಯಲು ಅಗತ್ಯವಾದ ಎಲ್ಲ ಹಂತದ ತಂತ್ರಗಾರಿಕೆಗಳು ಸಹ ನಡೆದಿದೆ. ಹೀಗಾಗಿ ನಗರದ ಜನರ ಚಿತ್ತ ಸಾಮಾನ್ಯವಾಗಿ ಈ ವಾರ್ಡ್‌ನತ್ತ ನೆಟ್ಟಿದೆ ಎನ್ನಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.