ಮೇಯರ್-ಉಪಮೇಯರ್ ಕುರ್ಚಿಗೆ ಪೈಪೋಟಿ
Team Udayavani, May 3, 2021, 10:41 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಸಾಮಾನ್ಯ, ಹಿಂದುಳಿದ ವರ್ಗಕ್ಕೆ ಮೀಸಲಾಗಿರುವ ಮೇಯರ್, ಉಪಮೇಯರ್ ಸ್ಥಾನಗಳಿಗೆ ಪೈಪೋಟಿ ಏರ್ಪಟ್ಟಿದ್ದು, ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಬಳ್ಳಾರಿ ಮಹಾನಗರ ಪಾಲಿಕೆಗೆ ಕಳೆದ ಏ.27 ರಂದು ಮತದಾನ ಪ್ರಕ್ರಿಯ ನಡೆದು ಏ.30 ರಂದು ಫಲಿತಾಂಶ ಹೊರಬಿದ್ದಿದ್ದು, 21 ಸ್ಥಾನಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಪಕ್ಷ ಪಾಲಿಕೆಯಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮೇಲಾಗಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಮೇಯರ್ ಹಿಂದುಳಿದ ಅ ವರ್ಗ (ಮಹಿಳೆ)ಕ್ಕೆ ಮೀಸಲಾಗಿದೆ.
ಇದೀಗ ಕಾಂಗ್ರೆಸ್ ಪಕ್ಷದಿಂದ ಜಯ ಗಳಿಸಿರುವ 21 ಸದಸ್ಯರಲ್ಲಿ ಹಲವರು ಮೇಯರ್, ಉಪಮೇಯರ್ ಆಗಲು ಕಾಂಗ್ರೆಸ್ ಹಿರಿಯ ಮುಖಂಡರನ್ನು ಗೋಗರೆಯುತ್ತಿರುವ ಪ್ರಸಂಗಗಳು ನಡೆಯುತ್ತಿದೆ ಎನ್ನಲಾಗುತ್ತಿದೆ. ಪಾಲಿಕೆ ಚುನಾವಣೆಯಲ್ಲಿ ಹೈವೋಲ್ಟೆàಜ್ ಕ್ಷೇತ್ರವೆಂದೇ ಕರೆಯಲಾಗುತ್ತಿದ್ದ 18ನೇ ವಾರ್ಡ್‌ನಲ್ಲಿ ಹಾಲಿ ನಗರ ಶಾಸಕರ ಪುತ್ರನ ವಿರುದ್ಧ ಜಯಗಳಿಸಿರುವ ಎಂ.ನಂದೀಶ್, 23ನೇ ವಾರ್ಡ್‌ನ ಸದಸ್ಯ ಕನಕದುರ್ಗಮ್ಮ ದೇವಸ್ಥಾನ ಧರ್ಮಕರ್ತ ಪಿ.ಗಾದೆಪ್ಪ, ಗ್ರಾಮೀಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 30ನೇ ವಾರ್ಡ್‌ನ ಆಸೀಫ್ ಬಾಷಾ, 20ನೇ ವಾರ್ಡ್ ಸದಸ್ಯ ವಿವೇಕ್, 20ನೇ ವಾರ್ಡ್‌ನ ಎಂ.ರಾಮಾಂಜನೇಯ, 27ನೇ ವಾರ್ಡ್ ನಿಯಾಜ್ ಅಹ್ಮದ್ ಸೇರಿ ಇನ್ನು ಹಲವರ ಹೆಸರುಗಳು ಕೇಳಿಬರುತ್ತಿವೆ. ಇವರೆಲ್ಲರೂ ಈಗಾಗಲೇ ಪಕ್ಷದ ಹಿರಿಯ ಮುಖಂಡರ ಮನೆಗಳಿಗೆ ಎಡತಾಕುತ್ತಿದ್ದು, ಮೇಯರ್ ಅಥವಾ ಉಪಮೇಯರ್ ಸ್ಥಾನ ತಮಗೆ ನೀಡುವಂತೆ ಕೋರುತ್ತಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬಿದ್ದು, ಕೇವಲ ಎರಡು ದಿನಗಳಾಗಿವೆ.
ರಾಜ್ಯ ಸರ್ಕಾರ ಪಾಲಿಕೆಗೆ ಅ ಧಿಸೂಚನೆ ಹೊರಡಿಸಬೇಕಾಗಿದೆ. ಜತೆಗೆ ಕೊರೊನಾ ಕರ್ಫ್ಯೂ ಇರುವುದರಿಂದ ಘೋಷಣೆಯೂ ಒಂದು ವಾರಗಳ ಕಾಲ ಮುಂದೂಡಲಾಗಿದೆ. ಕೊರೊನಾ ಕರ್ಫ್ಯೂ ಮುಗಿದಾಕ್ಷಣ ಮೇಯರ್ -ಉಪಮೇಯರ್ ಆಯ್ಕೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಅಲ್ಲದೇ ಏ.30 ರಂದು ರಾಜ್ಯಾದ್ಯಂತ ಪ್ರಕಟವಾದ ಸ್ಥಳೀಯ ಸಂಸ್ಥೆಗಳ ಫಲಿತಾಂಶದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿ ಸಿರುವುದು ಕೈ ಪಾಳೆಯದಲ್ಲಿ ಹೊಸ ಹುಮ್ಮಸ್ಸು ತಂದಿದ್ದು, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಮೇಯರ್-ಉಪಮೇಯರ್‌ರನ್ನು ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಬಳ್ಳಾರಿ ಮಹಾನಗರ ಪಾಲಿಕೆಯು ನಗರ ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತಗಳನ್ನು ವ್ಯಾಪಿಸಿದೆ.
ನಗರ ಕ್ಷೇತ್ರದಲ್ಲಿ 28, ಗ್ರಾಮೀಣ ಕ್ಷೇತ್ರ ಕೌಲ್‌ಬಜಾರ್‌ನಲ್ಲಿ 11 ಸೇರಿ ಒಟ್ಟು 39 ವಾರ್ಡ್‌ಗಳು ಇವೆ. ಗ್ರಾಮೀಣ ಕ್ಷೇತ್ರದ 11 ವಾರ್ಡ್‌ಗಳಲ್ಲಿ 9 ಕಾಂಗ್ರೆಸ್ 1 ಕಾಂಗ್ರೆಸ್ ಬಂಡಾಯ ಪಕ್ಷೇತ್ರ ಅಭ್ಯರ್ಥಿ ಸೇರಿ ಒಟ್ಟು 10 ವಾಡ್ ìಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಇನ್ನು ನಗರ ಕ್ಷೇತ್ರ ವ್ಯಾಪ್ತಿಯ 28ರಲ್ಲಿ 13 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಎರಡೂ ಕ್ಷೇತ್ರಗಳ ಮತದಾರರು “ಕೈ’ ಹಿಡಿದಿರುವುದರಿಂದ ಸಹಜವಾಗಿಯೇ ಮೇಯರ್, ಉಪಮೇಯರ್ ಸ್ಥಾನಗಳಿಗೆ ಪೈಪೋಟಿ ಏರ್ಪಡಲಿದ್ದು, ಮೇಯರ್ ಸ್ಥಾನವನ್ನು ನಗರ ಕ್ಷೇತ್ರಕ್ಕೆ, ಉಪಮೇಯರ್ ಸ್ಥಾನವನ್ನು ಗ್ರಾಮೀಣ ಕ್ಷೇತ್ರಕ್ಕೆ ಬಿಟ್ಟುಕೊಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಉಪಮೇಯರ್ ಸ್ಥಾನಕ್ಕೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ನಲ್ಲಿ ಹಿಂದುಳಿದ ಅ ವರ್ಗ (ಮಹಿಳೆ) ಕ್ಕೆ ಸೇರಿದ್ದ 26ನೇ ವಾರ್ಡ್‌ನ ಡಿ.ಸುಕುಂ, 28ನೇ ವಾರ್ಡ್‌ನ ಮುಬೀನಾ ಬಿ, 37ನೇ ವಾರ್ಡ್‌ನ ಮಾಲನ್ ಬೀ ಅವರು ಈಗಾಗಲೇ ರೇಸ್‌ನಲ್ಲಿದ್ದಾರೆ. 17ನೇ ವಾಡ್ ìನ ಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿ ಕವಿತಾ ಹೊನ್ನಪ್ಪ ಅವರು ಸಹ ಹಿಂದುಳಿದ ಅ ವರ್ಗ ಮಹಿಳೆ ಸ್ಥಾನದಿಂದ ಜಯಗಳಿಸಿದವರಾಗಿದ್ದಾರೆ. ಮೂಲ ಕಾಂಗ್ರೆಸ್ಸಿಗರಾಗಿರುವ ಇವರು ಸಹ ಉಪಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್ಸಿಗರ ಬೆಂಬಲ ಪಡೆದು ಸ್ಪಸಿದರೂ ಅಚ್ಚರಿಯಿಲ್ಲ. ಪಾಲಿಕೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಉಭಯ ಸ್ಥಾನಗಳಿಗೆ ಪೈಪೋಟಿ ಏರ್ಪಟ್ಟಿದ್ದು, ಯಾರ್ಯಾರಿಗೆ ಮೇಯರ್ -ಉಪಮೇಯರ್ ಸ್ಥಾನಗಳು ಒಲಿಯಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.