ಅನಗತ್ಯ ಹೊರಬಂದು ಮಂಡಿಯೂರಿ ನಡೆದರು!
Team Udayavani, May 12, 2021, 7:08 PM IST
ಬಳ್ಳಾರಿ: ಗಣಿನಾಡು ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಕಠಿಣ ಕ್ರಮದ ಮಧ್ಯೆ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ಬಿಸಿ ಮುಟ್ಟಿಸುವ ಜೊತೆಗೆ ಕೆಲವರಿಗೆ ಮಂಡಿಯೂರಿ ನಡೆಯುವ ಶಿಕ್ಷೆ ವಿಧಿಸಿದರು. ]
ಉಭಯ ಜಿಲ್ಲೆಗಳಲ್ಲಿ ಕೊರೊನಾ ಮಹಾಮಾರಿ ತನ್ನ ಪ್ರತಾಪ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಇದರ ಚೈನ್ ಲಿಂಕ್ ಕತ್ತರಿಸಲು ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರ ಮಧ್ಯೆ ನಿಯಮ ಉಲ್ಲಂ ಸಿ ರಸ್ತೆಗಿಳಿದವರಿಗೆ ಪೊಲೀಸರು ಕೆಲವರಿಗೆ ಕೈಮುಗಿದು ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದರೆ, ಅನಗತ್ಯವಾಗಿ ವಾಹನ ಜೊತೆಗೆ ರಸ್ತೆಗಿಳಿದವರಿಗೆ ಲಾಠಿ ಬಿಸಿಮುಟ್ಟಿಸಿದರು.
ಬೆಳಗ್ಗೆ 10ನಂತರವೂ ಅನೇಕ ಜನರು ನಿಯಮ ಮೀರಿ ನಾನಾ ನೆಪ ಹೇಳುವ ಮೂಲಕ ವಾಹನಗಳಲ್ಲಿ ಓಡಾಡಿದರು. ಸ್ಥಳದಲ್ಲಿದ್ದ ಪೊಲೀಸರು ಲಾಠಿ ಬಿಸಿ ಮುಟ್ಟಿಸಿದರು. ತರಕಾರಿ ಮಾರುಕಟ್ಟೆ ಬಳಿ ಅನಗತ್ಯವಾಗಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ನಗರದ ಜೈನ್ ಮಾರುಕಟ್ಟೆ, ಮಸೀದಿ ಬೀದಿ ಬಳಿ ಅನಗತ್ಯವಾಗಿ ಸಂಚರಿಸುತ್ತಿದ್ದವರನ್ನು ಗಮನಿಸಿದ ಪೊಲೀಸರು ಲಾಠಿ ಬಿಸಿ ಮುಟ್ಟಿಸುವುದರ ಜೊತೆಗೆ ಮೊಣಕೈ ಮಂಡಿಯೂರಿ ನಡೆಯುವ ಶಿಕ್ಷೆ ವಿಧಿಸಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರಿಗೆ ನಾಲ್ಕು ಲಾಠಿ ಏಟು ನೀಡಿ ಕಳಿಸುವುದನ್ನು ಬಿಟ್ಟು ಮಂಡಿ, ಮೊಣಕೈಯೂರಿ ನಡೆಸುವ ಶಿಕ್ಷೆ ವಿಧಿಸಿರುವ ಪೊಲೀಸರ ಕ್ರಮದ ಕುರಿತು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಕ್ರೂರ ಶಿಕ್ಷೆ ವಿಧಿಸಲು ಅವಕಾಶ ಕೊಟ್ಟಿದ್ದು ಯ್ನಾರು, ಪೊಲೀಸರಿಗೆ ದೈಹಿಕವಾಗಿ ಹಲ್ಲೆ ಮಾಡಲು ಕಾನೂನಲ್ಲಿ ಅವಕಾಶವಿಲ್ಲ, ಆದರೂ, ಕೊರೊನಾ ನೆಪವಿಟ್ಟುಕೊಂಡು ಕ್ರೂರಿಗಳಂತೆ ಪೊಲೀಸರು ನಡೆದುಕೊಳ್ಳುವುದು ಸರಿಯಲ್ಲ, ಕೂಡಲೇ ಈ ರೀತಿ ಶಿಕ್ಷೆ ವಿಧಿಸಿದ ಪೊಲೀಸ್ ಸಿಬ್ಬಂದಿಗೆ ಮೇಲಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಮನೆಯಿಂದ ಹೊರಬಾರದ ಜನರು: ಕೊರೊನಾ ಭಯವಲ್ಲ, ಪೊಲೀಸರ ಲಾಠಿ ಬಿಸಿ, ಬಸ್ಕಿ ಹೊಡೆಸುವುದು ಸೇರಿದಂತೆ ಪೊಲೀಸರು ವಿಧಿಸುವ ಇತರೇ ಕ್ರಮಗಳಿಗೆ ಬೆಚ್ಚಿಬಿದ್ದು, ಕೆಲವರು ಅಗತ್ಯ ವಸ್ತುಗಳ ಬೇಕಿದ್ದರೂ ನಿಗಧಿತ ಸಮಯದಲ್ಲೇ ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಒಂದಿತ್ತು, ಒಂದಿಲ್ಲ ಎಲ್ಲವೂ ಸರಿಪಡಿಸಿಕೊಂಡು ದಿನಗಳನ್ನು ಮುಂದೂಡಲು ಕೆಲವರು ಮುಂದಾಗಿದ್ದಾರೆ.
ಗುರುತಿನ ಚೀಟಿ ಇಲ್ಲದ ಕೆಲ ಡಿ ಗ್ರೂಪ್ ನೌಕರರು ಹಾಗೂ ಪೌರ ಕಾರ್ಮಿಕರು ಸಮಸ್ಯೆಗೆ ಸಿಲುಕಿದರು. ಕಾಖೀ ಪಡೆ ಗುರುತಿನ ಚೀಟಿ ಇಲ್ಲದವರಿಗೆ ಖಡಕ್ ಸೂಚನೆ ನೀಡಲು ಮುಂದಾಗಿದ್ದಾರೆ. ಒಟ್ಟಾರೆಯಾಗಿ ಕೋವಿಡ್-19 ಹೆಮ್ಮಾರಿ ಸೊಂಕು ಚೈನ್ ಲಿಂಕ್ ಕತ್ತರಿಸಲು ಪೊಲೀಸರು ಕೈಗೊಂಡಿರುವ ಕ್ರಮ ನಿಜಕ್ಕೂ ಶ್ಲಾಘನೀಯ, ಪ್ರಶಂಸೆ. ಆದರೆ, ಮಾನವೀಯತೆ ಮರೆತು ನಾನಾ ಶಿಕ್ಷೆಗಳನ್ನು ವಿಧಿಸುವುದು ಸರಿಯಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.