ಬಯಲಾಯ್ತು ಮೆಣಸಿನ ಬಿತ್ತನೆ ಬೀಜ ದಂಧೆ!
Team Udayavani, Jun 9, 2021, 9:40 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ರೈತರಲ್ಲಿ ಬೇಡಿಕೆ ಹೆಚ್ಚಿರುವ ಸಿಂಜೆಂಟಾ ಕಂಪನಿ ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿಕೊಳುತ್ತಿರುವ ಡೀಲರ್‌ಗಳು ಇನ್ನುಮುಂದೆ ಡಿಸ್ಟ್ರಿಬ್ಯೂಟರ್, ಅಧಿ ಕಾರಿಗಳ ಸಮ್ಮುಖದಲ್ಲೇ ಶೇ. 5ರಷ್ಟು ಲಾಭಕ್ಕೆ ರೈತರಿಗೆ ಬೀಜ ಮಾರಾಟ ಮಾಡಬೇಕಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರ ಸಲಹೆಯಂತೆ ಮಳಿಗೆಗಳ ಮೇಲೆ ದಾಳಿ ನಡೆಸಿರುವ ಕೃಷಿ, ತೋಟಗಾರಿಕೆ ಅಧಿ ಕಾರಿಗಳು ಡೀಲರ್‌ಗಳಿಗೆ ತಾಕೀತು ಮಾಡಿದ್ದಾರೆ.
ಹೌದು…! ವಾಣಿಜ್ಯ ಬೆಳೆ ಹತ್ತಿಯನ್ನೇ ಅ ಧಿಕ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಬಳ್ಳಾರಿ, ಕುರುಗೋಡು ತಾಲೂಕಿನ ರೈತರು ಕಳೆದ ಕೆಲ ವರ್ಷಗಳಿಂದ ಅ ಧಿಕ ಇಳುವರಿ, ಲಾಭ ತಂದುಕೊಡುತ್ತಿರುವ ಮೆಣಸಿನಕಾಯಿ ಬೆಳೆಯತ್ತ ವಾಲುತ್ತಿದ್ದಾರೆ. ಬಳ್ಳಾರಿ ತಾಲೂಕಿನ ರೂಪನಗುಡಿ ಹೋಬಳಿ, ಕುರುಗೋಡು ತಾಲೂಕು ಮತ್ತು ಕಂಪ್ಲಿ, ಸಿರುಗುಪ್ಪ ತಾಲೂಕುಗಳಲ್ಲಿ ಭಾಗಶಃ ರೈತರು ಮೆಣಸಿನಕಾಯಿ ಬೆಳೆಯುತ್ತಿದ್ದು, ಕಳೆದ 2020ರಲ್ಲಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದ್ದ ರೈತರು, 2021ರಲ್ಲಿ ಈಗಾಗಲೇ 50 ಸಾವಿರ ಹೆಕ್ಟೇರ್‌ನಲ್ಲಿ ನಾಟಿ ಮಾಡುವಷ್ಟು ಬೀಜವನ್ನು ಖರೀದಿಸಿದ್ದಾರೆ.
ಆದರೆ, ಇನ್ನು ಬಹುತೇಕ ರೈತರು ಬಿತ್ತನೆ ಬೀಜ ದೊರೆಯದೆ ಪರದಾಡುತ್ತಿದ್ದು, ಡೀಲರ್ ಗಳ ಮಳಿಗೆಗಳಿಗೆ ನಿತ್ಯ ಅಲೆದಾಡುತ್ತಿದ್ದಾರೆ. ಡೀಲರ್ ಗಳು ಪದೇಪದೆ ಸ್ಟಾಕ್ ಇಲ್ಲ ಎನ್ನುತ್ತಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು, ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಈ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲೇ ಕೃಷಿ, ತೋಟಗಾರಿಕೆ ಇಲಾಖೆ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಈಶ್ವರಪ್ಪನವರು, ಸಭೆಯಿಂದ ಕಳುಹಿಸಿ, ಕೂಡಲೇ ಮಳಿಗೆಗಳ ಮೇಲೆ ದಾಳಿ ನಡೆಸಿ, ಪ್ರಕರಣ ದಾಖಲಿಸುವಂತೆ ತಾಕೀತು ಮಾಡಿದ್ದರು. 6 ಪ್ರಕರಣ ದಾಖಲು: ಸಚಿವರ ಸಲಹೆಯಂತೆ ಮಂಗಳವಾರ ನಗರದ 20 ಮಳಿಗೆಗಳ ದಾಳಿ ನಡೆಸಿರುವ ಅಧಿ ಕಾರಿಗಳು, ರೈತರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿರುವ ಬಿಲ್, ಇನ್ವೆಸ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪರವಾನಗಿ ಇಲ್ಲದೇ ಮಾರಾಟ ಸೇರಿ ವಿವಿಧ ಲೋಪದೋಷಗಳನ್ನು ಪತ್ತೆಹಚ್ಚಿ ನೋಟಿಸ್ ಜಾರಿಗೊಳಿಸಿದ್ದಾರೆ. ಆರು ಪ್ರಕರಣಗಳ ದಾಖಲಿಸಲಾಗಿದೆ. ದಾಳಿ ವೇಳೆ ಬೇಡಿಕೆ ಹೆಚ್ಚಿರುವ ಸಿಂಜೆಂಟಾ ಕಂಪನಿ 5531, 2043 ಮೆಣಸಿನಕಾಯಿ ಬಿತ್ತನೆ ಬೀಜದ ದಾಸ್ತಾನು ಕಂಡುಬಂದಿಲ್ಲ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಎಸ್.ಬೋಗಿ ತಿಳಿಸಿದ್ದಾರೆ.
ಶೇ. 5ರ ಲಾಭಕ್ಕೆ ಮಾರಾಟ:ಕಳೆದ ವರ್ಷ ಸಿಂಜೆಂಟಾ ಕಂಪನಿಯ 5531 ಮತ್ತು 2043 ಬಿತ್ತನೆ ಬೀಜದಿಂದ ಉತ್ತಮ ಉಳುವರಿ ಬಂದಿತ್ತಾದರೂ, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೂ ಕಾಯಿಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಚುಕ್ಕೆಗಳು ಬಂದಿರಲಿಲ್ಲ. ಇದು ರೈತರಿಗೆ ಹೆಚ್ಚು ಲಾಭ ತಂದುಕೊಡದಿದ್ದರೂ, ಸಾಲದ ಸುಳಿಗಂತೂ ಸಿಲುಕಿಸಲಿಲ್ಲ. ಪರಿಣಾಮ ಈ ಬಿತ್ತನೆ ಬೀಜಗಳ ಮೇಲೆ ಈ ವರ್ಷ ರೈತರಲ್ಲಿ ಹೆಚ್ಚು ವಿಶ್ವಾಸ ಮೂಡಿದೆ.
ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಕಂಪನಿಗಳ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದ ರೈತರು ಸಹ ಈ ಬಾರಿ ಸಿಂಜೆಂಟಾ ಕಂಪನಿಯ 5531, 2043 ಬೀಜಕ್ಕಾಗಿ ಅಲೆದಾಡುತ್ತಿರುವುದು ಸಾಧಾರಣವಾಗಿ ಬೀಜಕ್ಕೆ ಬೇಡಿಕೆ ಹೆಚ್ಚಲು ಕಾರಣವಾಗಿದೆ.
ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಡೀಲರ್‌ಗಳು, ಲಾಕ್‌ಡೌನ್ ನೆಪವೊಡ್ಡಿ ಬೀಜಗಳನ್ನು 80, 90 ಸಾವಿರ ರೂ.ಗಳಿಂದ 1 ಲಕ್ಷ ರೂ. ಗಳವರೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡು ಅ ಕ ಲಾಭ ಗಳಿಸಿದ್ದಾರೆ. ಹೀಗಾಗಿ ಈ ದಂಧೆಗೆ ಕಡಿವಾಣ ಹಾಕುವ ಸಲುವಾಗಿ ಸಿಂಜೆಂಟಾ ಕಂಪನಿಯ 5531 ಬಿತ್ತನೆ ಬೀಜಕ್ಕೆ ಕೆಜಿ 57 ಸಾವಿರ ರೂ, 2043 ಬೀಜಕ್ಕೆ ಕೆಜಿ 67 ಸಾವಿರ ರೂ. ಬೆಲೆ ನಿಗದಿಪಡಿಸಲಾಗಿದೆ.
ಡೀಲರ್‌ಗಳು ಮೂಲಬೆಲೆಗೆ ಶೇ.5 ರಷ್ಟು ಲಾಭವನ್ನಿಟ್ಟುಕೊಂಡು ರೈತರಿಗೆ ಮಾರಾಟ ಮಾಡಬೇಕು. ಜತೆಗೆ ಡಿಸ್ಟ್ರಿಬ್ಯೂಟರ್‌ಗಳು, ಇಲಾಖೆ ಅ ಧಿಕಾರಿಗಳ ಸಮ್ಮುಖದಲ್ಲೇ ರೈತರಿಗೆ ವಿತರಿಸಬೇಕು ಎಂದು ಅ ಧಿಕಾರಿಗಳು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.