ರಸಗೊಬ್ಬರ ಅಭಾವ: ತಪ್ಪದ ರೈತರ ಅಲೆದಾಟ
Team Udayavani, Jun 10, 2021, 10:24 PM IST
ರವಿಕುಮಾರ್ ಎಂ
ಕೊಟ್ಟೂರು: ಈ ವರ್ಷ ಪ್ರಾರಂಭದಿಂದಲೇ ಮುಂಗಾರು ಮಳೆ ಧಾರಾಕಾರವಾಗಿ ಸುರಿದಿದೆ. ರೈತರು ಹೊಲಗಳನ್ನು ಹದ ಮಾಡಿಕೊಂಡು ರಸಗೊಬ್ಬರ ಶೇಖರಣೆಗೆ ಮುಂದಾಗಿದ್ದಾರೆ. ಇತ್ತ ರಸಗೊಬ್ಬರ ಸಿಗದೇ ಕಂಗಾಲಾಗಿದ್ದಾರೆ.
ತಾಲೂಕಿನಲ್ಲಿ 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ದುಡಿಮೆಗೆಂದು ಪರ ಊರಿಗೆ ಹೋದ ಮಕ್ಕಳೆಲ್ಲ ಗ್ರಾಮದ ಕಡೆ ಮುಖಮಾಡಿ ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ವರ್ಷ ಉತ್ತಮ ಬೆಳೆ ಬೆಳೆಯಲೇಬೇಕು ಎಂದು ನಿರ್ಧರಿಸಿ ರಸಗೊಬ್ಬರ ಖರೀದಿಗೆ ಸಾಲುಗಟ್ಟಿ ಅಂಗಡಿ ಮುಂದೆ ಜಮಾಯಿಸಿದ್ದಾರೆ. ಆದರೆ ಡಿಎಪಿ ರಸಗೊಬ್ಬರದ ಕೊರತೆ ಎದುರಾಗಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ಬೆಳಗಿನಿಂದ ಸಾಲಿನಲ್ಲಿ ನಿಂತರೂ ಕೇವಲ 2 ಚೀಲಗಳು ಮಾತ್ರ ಸಿಗುತ್ತಿದ್ದು ಬೆಳೆಗೆ ಬೇಕಾದ ಅಗತ್ಯ ಗೊಬ್ಬರಗಳೇ ಸಿಗುತ್ತಿಲ್ಲ ಎಂದು ಕಂಗಾಲಾಗಿದ್ದಾರೆ. ಸರ್ಕಾರ ಡಿಎಪಿ ರಸಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ವಿತರಿಸಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂಬುದು ರೈತರ ಅಳಲು.
ರೈತರಿಗೆ ಡಿಎಪಿ ಗೊಬ್ಬರ ಸಮರ್ಪಕವಾಗಿ ಸಿಗುವಂತೆ ಸೂಚಿಸುತ್ತೇನೆ. ಖಾಸಗಿ ಅಂಗಡಿಯವರು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಹಾಗೂ ಗೋದಾಮಿನಲ್ಲಿ ಇಟ್ಟು ಕೃತಕ ಅಭಾವ ಸೃಷ್ಟಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇನೆ.
ಜಿ.ಅನಿಲ್‌ಕುಮಾರ್,
ತಹಶೀಲ್ದಾರ್, ಕೊಟ್ಟೂರು
ಮುಂಗಾರು ಮಳೆ ಬಂದಾಗಿನಿಂದ ಹೊಲಗಳನ್ನು ಹದ ಮಾಡಿದ್ದೇವೆ. ಆದರೆ ರಸಗೊಬ್ಬರ ಪ್ರಾರಂಭದಲ್ಲೇ ಕೊರತೆಯಾದರೆ ಮುಂದಿನ ದಿನಗಳಲ್ಲಿ ಹೇಗೆ. ಕೂಡಲೇ ಸರ್ಕಾರ ನಮ್ಮಂತ ರೈತರ ಕಡೆ ಗಮನಹರಿಸಿ ಸಮರ್ಪಕವಾಗಿ ರಸಗೊಬ್ಬರ, ಬಿತ್ತನೆ ಬೀಜ ನೀಡಲು ಮುಂದಾಗಬೇಕು.
ಕೊಟ್ರೇಶಪ್ಪ, ರೈತ
ರಸಗೊಬ್ಬರ ವಿಚಾರವಾಗಿ ಕೃಷಿ ಜಂಟಿ ನಿರ್ದೇಶಕರೊಂದಿಗೆ ಮಾತನಾಡಿ ರೈತರಿಗೆ ಅನ್ಯಾಯವಾಗದಂತೆ ಅಧಿ ಕಾರಿಗಳಿಗೆ ಸೂಚಿಸುತ್ತೇನೆ. ಕಳಪೆಮಟ್ಟದ ಬೀಜಗಳನ್ನು ವಿತರಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಅಧಿ ಕಾರಿಗಳಿಗೆ ಸೂಚಿಸುತ್ತೇನೆ. ಕೂಡಲೇ ಸಮರ್ಪಕವಾಗಿ ರಸಗೊಬ್ಬರ ಪೂರೈಸಲು ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವೆ.
ಎಸ್. ಭೀಮಾನಾಯ್ಕ ಶಾಸಕರು, ಹಗರಿಬೊಮ್ಮನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.