ಬಡವರಿಗೆ ಖಾತ್ರಿ ಯೋಜನೆ ವರದಾನ
Team Udayavani, Jun 28, 2021, 10:19 PM IST
ಕೆ. ನಾಗರಾಜ್
ಕೂಡ್ಲಿಗಿ: ಕೊರೊನಾದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಇಂಥ ಪರಿಸ್ಥಿತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ ಬರುವ 25 ಗ್ರಾಪಂಗಳಲ್ಲಿ ಕೆಲವು ಗ್ರಾಮ ಪಂಚಾಯಿತಿಗಳು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ಅದರಲ್ಲಿ ಹುಡೇಂ, ಜುಮ್ಮೊಬನಹಳ್ಳಿ, ಆಲೂರುಬಡೇಲಡಕು, ಚೌಡಪುರ, ಚಿರತಗುಂಡು ಒಂದಾಗಿದ್ದು, ಇಲ್ಲಿನ ಅಧ್ಯಕ್ಷರು ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿ ತಮ್ಮ ಗ್ರಾಮ ಪಂಚಾಯಿತಿಗೆ ಒಳಪಡುವ ಹಳ್ಳಗಳ ಹೂಳು, ಬದು ನಿರ್ಮಾಣ ತೋಟಗಾರಿಕೆಯಿಂದ ವಿವಿಧ ಗಿಡಗಳಿಗೆ ಆದ್ಯತೆ ಕೆಲಸವನ್ನು ಮಾಡಿಸುವ ಮೂಲಕ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದಾರೆ. ತಾಲೂಕು ಪಂಚಾಯಿತಿಯಡಿ ಉದ್ಯೋಗ ಖಾತ್ರಿ ತಾಲೂಕಿನವಾರು ಅಂಕಿ ಸಂಖ್ಯೆಯನ್ನು ಗಮನಿಸಿದಾಗ ಒಂದು ವರ್ಷಕ್ಕೆ 10 ಲಕ್ಷ ಗುರಿಯನ್ನು ನೀಡಿದ್ದಾರೆ.
ಈಗಾಗಲೇ 56700 ಗುರಿಯನ್ನು ತಲುಪಿದ್ದೇವೆ. ಆದರೆ ಹುಡೇಂ ಗ್ರಾಮ ಪಂಚಾಯಿತಿಯಲ್ಲಿ ಮೂರು ತಿಂಗಳ ಗುರಿ-23174 ಇದರಲ್ಲಿ 18311 ಒಳಗೊಂಡಿದ್ದು, ಮಾನವನ ದಿನಗಳ ಶೇಕಡಾವಾರು 51.36% ಒಳಗೊಂಡಂತೆ ಮಾನವದಿನಗಳ ಸೃಜನೆಯಾಗಿದೆ. ಒಟ್ಟಾರೆ ಕಾರ್ಮಿಕರ ವಾರ್ಷಿಕ ಗುರಿ- 35,653 ಶೇಕಡಾವಾರು 3 ತಿಂಗಳಿಗೆ 79.% ಆಗಿದೆ. ಕುಟುಂಬಕ್ಕೆ 100 ದಿನದ ಕೆಲಸ ದಿನಕ್ಕೆ 289+10 ರೂ ಸಲಕರಣೆಗಳಿಗೆ ನೀಡಲಾಗುತ್ತಿದ್ದು, ಒಟ್ಟಾರೆ ತಿಂಗಳಿಗೆ 2999ರೂ ಸಿಗುತ್ತದೆ. ಕೂಡ್ಲಿಗಿ ತಾಪಂ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಗ್ರಾಪಂನ ಖಾತ್ರಿ ಯೋಜನೆಯಡಿ ಇನ್ನೂರಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಇದರಿಂದ ಒಂದೆಡೆ ಕೆರೆ ಹೂಳೆತ್ತುವ ಕೆಲಸ ಮತ್ತೂಂದೆಡೆ ಬಡ ಕಾರ್ಮಿಕರಿಗೆ ಕೆಲಸವೂ ಸಿಕ್ಕಂತಾಗಿದೆ. ಸದ್ಯ ಪಿಡಿಒ ಮಾರಪ್ಪ ಅವರು ಸ್ಥಳದಲ್ಲಿದ್ದು ಕಾರ್ಯ ನಿರ್ವಹಣೆಯನ್ನು ಗಮನಿಸುತ್ತಿದ್ದಾರೆ.
ಈ ನಡುವೆ ಹಳ್ಳಗಳಿಗೆ ಸಂಬಂಧಿ ಸಿದಂತೆ ನಾಳಗಳು, ಕೆರೆ ಹೂಳು ತೆಗೆದು ಕೆರೆಯನ್ನು ಅಭಿವೃದ್ಧಿಗೊಳಿಸುವುದು, ಬದು ನಿರ್ಮಾಣ, ಹಲವು ಕಾರ್ಯಗಳಿಗೆ ಉದ್ಯೋಗ ಖಾತ್ರಿ ಮೂಲಕ ಇಲಾಖೆವಾರು ಕಾಮಗಾರಿಗಳನ್ನು ಜನರಿಗೆ ಎಟಕುವ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಗಳು ಅಡೆತಡೆಗೆ ಇದ್ಯಾವುದಕ್ಕೂ ಸೊಪ್ಪು ಹಾಕದೆ ಗ್ರಾಪಂ ಪಿಡಿಓ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಳೆದ ಹಲವು ವರ್ಷಗಳಿಂದ ಸಮರ್ಪಕ ನಿರ್ವಹಣೆ ಇಲ್ಲದೇ ಹಳ್ಳಗಳಲ್ಲಿ ಹೂಳಿನಿಂದ ಮುಳ್ಳಿನ ಗಿಡಗಳು ಬೆಳೆದು ನಿಂತಿದ್ದು ಖಾತ್ರಿ ಯೋಜನೆಯಲ್ಲಿ ರೈತರಿಗೆ ಅನೂಕೂಲವಾಗುವ ದೃಷ್ಟಿಯಿಂದ ಬದುಗಳ ನಿರ್ಮಾಣಕ್ಕೆ ಒತ್ತು, ಕೃಷಿ ಹೊಂಡಕ್ಕೆ ರೈತರು ಮುಂದಾದರೆ ಅವಕಾಶ ಕಲ್ಪಿಸುವುದು, ಒಟ್ಟಾರೆ ಬೇಡಿಕೆಗೆ ಅನುಗುಣವಾಗಿ ಕಾರ್ಯವನ್ನು ಮಾಡುವುದು.
ಹುಡೇಂ ಪಿಡಿಓ ಅ ಧಿಕಾರಿ ಮಾರಪ್ಪ ಅವರು ಉದ್ಯೋಗಖಾತ್ರಿ ಅಡಿಯಲ್ಲಿ ಗ್ರಾಮದ ಜನರಿಗೆ ಕೆಲಸಕ್ಕೆ ಮುಂದಾಗಿರುವುದರಿಂದ ಮಳೆಗಾಲದಲ್ಲಿ ಮಳೆನೀರು ತುಂಬಿ ರೈತರಿಗೆ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.